“ವಿದಾಯ ಪಂದ್ಯ’ದಲ್ಲಿ ಗೇಲ್ ಸ್ಫೋಟ
Team Udayavani, Aug 14, 2019, 10:47 PM IST
ಪೋರ್ಟ್ ಆಫ್ ಸ್ಪೇನ್: ಜಾಗತಿಕ ಕ್ರಿಕೆಟಿನ ಸಿಡಿಲಬ್ಬರದ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ವಿಸ್ಫೋಟಕ ಇನ್ನಿಂಗ್ಸ್ ಮೂಲಕ ತಮ್ಮ ಕೊನೆಯ ಇನ್ನಿಂಗÕನ್ನು ಸ್ಮರಣೀಯಗೊಳಿಸಿದ್ದಾರೆ. ಭಾರತದೆದುರಿನ ಬುಧವಾರದ ಅಂತಿಮ ಏಕದಿನ ಪಂದ್ಯದಲ್ಲಿ ಗೇಲ್ 41 ಎಸೆತಗಳಿಂದ 72 ರನ್ ಬಾರಿಸಿ ವೆಸ್ಟ್ ಇಂಡೀಸಿಗೆ ಭರ್ಜರಿ ಆರಂಭ ಒದಗಿಸಿದರು.
ಆದರೆ ಇದು ತಮ್ಮ ಅಂತಿಮ ಪಂದ್ಯವೆಂದು ಗೇಲ್ ಅಧಿಕೃತವಾಗಿ ಘೋಷಿಸಿಲ್ಲ. ಪಂದ್ಯದ ಬಳಿಕ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸುತ್ತಿರುವ ವಿಂಡೀಸ್ 22ನೇ ಓವರ್ ವೇಳೆ ಮಳೆ ಬಂದು ಪಂದ್ಯ ನಿಂತಾಗ 2 ವಿಕೆಟಿಗೆ 158 ರನ್ ಪೇರಿಸಿತ್ತು. ಶೈ ಹೋಪ್ 19, ಶಿಮ್ರನ್ ಹೆಟ್‌ಮೈರ್ 18 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಸರಣಿಯನ್ನು ಸಮಬಲಕ್ಕೆ ತರಬೇಕಾದರೆ ಹೋಲ್ಡರ್ ಪಡೆ ಈ ಪಂದ್ಯವನ್ನು ಗೆಲ್ಲಲೇಬೇಕಿದೆ.
10.5 ಓವರ್‌ಗಳಲ್ಲಿ 115 ರನ್
ಎಡಗೈ ಆರಂಭಿಕರಾದ ಕ್ರಿಸ್ ಗೇಲ್-ಎವಿನ್ ಲೆವಿಸ್ ಸ್ಫೋಟಕ ಆಟದ ಮೂಲಕ ಭಾರತದ ಬೌಲಿಂಗ್ ಮೇಲೆ ಸವಾರಿ ಮಾಡಿದರು. ಭುವನೇಶ್ವರ್ ಅವರ ಮೊದಲ ಓವರನ್ನು ಗೇಲ್ ಮೇಡನ್ ಮಾಡಿದರೂ ಅನಂತರ ನೈಜ ಆಟಕ್ಕೆ ಕುದುರಿದರು. 8 ಬೌಂಡರಿ, 5 ಸಿಕ್ಸರ್ ಸಿಡಿಸಿ ಅಬ್ಬರಿಸಿದ್ರು. ಲೆವಿಸ್ ಗಳಿಕೆ 29 ಎಸೆತಗಳಿಂದ 43 ರನ್ (5 ಬೌಂಡರಿ, 3 ಸಿಕ್ಸರ್). ಚಹಲ್ ಮತ್ತು ಖಲೀಲ್ ಅಹ್ಮದ್ ಈ ವಿಕೆಟ್ ಉರುಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಎರಡು ಸೈಬರ್ ವಂಚನೆ ಪ್ರಕರಣ: ಸೆನ್ ಪೊಲೀಸರಿಂದ ಇಬ್ಬರ ಬಂಧನ
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.