60 ಮೀ. ಓಟ: ಕೋಲ್ಮನ್ ವಿಶ್ವದಾಖಲೆ
Team Udayavani, Feb 20, 2018, 6:30 AM IST
ಲಾಸ್ ಏಂಜಲೀಸ್: ಅಲುಕರ್ಕ್‌ನಲ್ಲಿ ನಡೆದ ಯುಎಸ್ ಚಾಂಪಿಯನ್‌ಶಿಪ್‌ನ ಒಳಾಂಗಣ ಕ್ರೀಡಾಂಗಣದ 60 ಮೀ. ಓಟವನ್ನು 6.34 ಸೆಕೆಂಡ್‌ಗಳಲ್ಲಿ ಮುಗಿಸುವ ಮೂಲಕ ಅಮೆರಿಕದ “ರೈಸಿಂಗ್ ಸ್ಟಾರ್’ ಕ್ರಿಸ್ಟಿಯನ್ ಕೋಲ್ಮನ್ ವಿಶ್ವದಾಖಲೆ ಬರೆದಿದ್ದಾರೆ.
60 ಮೀ. ವೇಗದ ಓಟದ ಸ್ಪರ್ಧೆಯಲ್ಲಿ 1998ರಲ್ಲಿ ಅಮೆರಿಕದ ಮೌರಿಸ್ ಗ್ರೀನ್ 6.39 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ದಾಖಲೆ ಬರೆದಿದ್ದರು. 21ರ ಹರೆಯದ ಕೋಲ್ಮನ್ ಹಳೆ ದಾಖಲೆಗಿಂತ 0.05 ಸೆಕೆಂಡ್ ವೇಗವಾಗಿ ಓಟ ಮುಗಿಸಿದರು. 6.40 ಸೆಕೆಂಡ್‌ನಲ್ಲಿ ಗುರಿ ತಲುಪಿದ ರೋನಿ ಬೇಕರ್ ದ್ವಿತೀಯ ಸ್ಥಾನ ಗಳಿಸಿದರು.
ಕಳೆದ ಜ. 19ರಲ್ಲಿ ಕ್ಲೆಮ್ಸನ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಕೋಲ್ಮನ್ ಇದೇ ಓಟವನ್ನು 6.37 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸುವ ಮೂಲಕ ಗ್ರೀನ್ಸ್ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಸರಿಗಟ್ಟುವ ಸುಳಿವು ನೀಡಿದ್ದರು. ಆದರೂ ಗ್ರೀನ್ಸ್ ಸಾಧನೆಯನ್ನು ಅಲ್ಲಗೆಳೆಯುವಂತಿಲ್ಲ. ಏಕೆಂದರೆ, ಗ್ರೀನ್ಸ್ ಕಾಲದ ಕ್ರೀಡಾಕೂಟಗಳಲ್ಲಿ ಎಲೆಕ್ಟ್ರಾನಿಕ್ ಸ್ಟಾರ್ಟಿಂಗ್ ಬ್ಲಾಕ್‌ಗಳನ್ನು ಬಳಸುತ್ತಿರಲಿಲ್ಲ ಎಂಬ ಮಾತುಗಳು ಕ್ರೀಡಾ ವಲಯದಲ್ಲಿ ಕೇಳಿಬಂದಿವೆ.
2017ರಿಂದೀಚೆಗೆ ವೇಗದ ಓಟಗಾರರಲ್ಲಿ ಅಗ್ರಸ್ಥಾನದಲ್ಲಿರುವ ಕೋಲ್ಮನ್, ಲಂಡನ್ ಒಲಿಂಪಿಕ್ಸ್‌ನ 100 ಮೀ.ನಲ್ಲಿ ತೃತೀಯ ಸ್ಥಾನ ಗಳಿಸಿ ವಿಶ್ವದ ಗಮನ ಸೆಳೆದಿದ್ದರು. ಈ ಸಂದರ್ಭ ಮಿಂಚಿನ ಓಟಗಾರ ಉಸೇನ್ ಬೋಲ್ಟ್ ಮತ್ತು ಜಸ್ಟಿನ್ ಗ್ಯಾಟಿನ್ ಮೊದಲೆರಡು ಸ್ಥಾನ ಅಲಂಕರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
MUST WATCH
ಹೊಸ ಸೇರ್ಪಡೆ
Malpe: ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.