ಸಿನ್ಸಿನಾಟಿ ಓಪನ್ ಟೆನಿಸ್ : ಪ್ಲಿಸ್ಕೋವಾ ಸೆಮಿಫೈನಲ್‌ಗೆ
Team Udayavani, Aug 20, 2017, 7:10 AM IST
ಸಿನ್ಸಿನಾಟಿ: ಹಾಲಿ ಚಾಂಪಿಯನ್ ಕ್ಯಾರೋಲಿನಾ ಪ್ಲಿಸ್ಕೋವಾ ಸತತ ಎರಡು ಪಂದ್ಯಗಳಲ್ಲಿ ಭರ್ಜರಿ ಆಟವಾಡಿ ಸಿನ್ಸಿನಾಟಿ ಓಪನ್ ಟೆನಿಸ್ ಕೂಟದ ಸೆಮಿಫೈನಲ್ ತಲುಪಿದ್ದಾರೆ.
25ರ ಹರೆಯದ ಜೆಕ್ ಗಣರಾಜ್ಯದ ಪ್ಲಿಸ್ಕೋವಾ ಮೊದಲಿಗೆ ಇಟಲಿಯ ಅರ್ಹತಾ ಆಟಗಾರ್ತಿ ಜಿಯೋರ್ಗಿ ಅವರನ್ನು 6-3, 4-6, 6-0 ಸೆಟ್‌ಗಳಿಂದ ಸೋಲಿಸಿದರು. ಈ ಪಂದ್ಯ ಮಳೆಯಿಂದ ಮುಂದೂಡಲಾಗಿತ್ತು. ಎರಡು ಗಂಟೆಯ ಬಳಿಕ ಮತ್ತೆ ಅಂಗಣಕ್ಕೆ ಆಗಮಿಸಿದ ಪ್ಲಿಸ್ಕೋವಾ ಡೆನ್ಮಾರ್ಕ್‌ನ ಐದನೇ ಶ್ರೇಯಾಂಕದ ಕ್ಯಾರೋಲಿನ್ ವೋಜ್ನಿಯಾಕಿ ಅವರನ್ನು 6-2, 6-4 ನೇರ ಸೆಟ್‌ಗಳಿಂದ ಉರುಳಿಸಿ ಅಂತಿಮ ನಾಲ್ಕರ ಸುತ್ತಿಗೇರಿದರು.
ಸೆಮಿಫೈನಲ್ ಹೋರಾಟದಲ್ಲಿ ಪ್ಲಿಸ್ಕೋವಾ ಹಾಲಿ ವಿಂಬಲ್ಡನ್ ಚಾಂಪಿಯನ್ ಗಾರ್ಬಿನ್ ಮುಗುರುಜಾ ಅವರನ್ನು ಎದುರಿಸಲಿದ್ದಾರೆ. ಮುಗುರುಜಾ ಇನ್ನೊಂದು ಪಂದ್ಯದಲ್ಲಿ ರಶ್ಯದ ಎಂಟನೇ ಶ್ರೇಯಾಂಕದ ಸ್ವೆತ್ಲಾನಾ ಕುಜ್ನೆತ್ಸೋವಾ ಅವರನ್ನು 6-2, 5-7, 7-5 ಸೆಟ್‌ಗಳಿಂದ ಸೋಲಿಸಿದರು. ಇಬ್ಬರು ಗ್ರ್ಯಾನ್ ಸ್ಲಾಮ್ ವಿಜೇತರ ನಡುವಣ ಈ ಹೋರಾಟ ಎರಡು ತಾಸು ಮತ್ತು 45 ನಿಮಿಷಗಳವರೆಗೆ ಸಾಗಿತ್ತು.
ಇದು ಈ ವರ್ಷದ ಶ್ರೇಷ್ಠ ಪಂದ್ಯಗಳಲ್ಲಿ ಒಂದಾಗಿದೆ. ಈ ಕಾದಾಟದಲ್ಲಿ ನಾನು ಗೆಲ್ಲಲು ಕಠಿನ ಹೋರಾಟ ನಡೆಸಿದ್ದೇನೆ. ಇದೊಂದು ಅತ್ಯಂತ ಕಠಿನ ಪಂದ್ಯವಾಗಿತ್ತು. ನಾವಿಬ್ಬರು ಅತ್ಯುತ್ತಮ ಆಟ ಆಡಿದೆವು ಎಂದು ಪಂದ್ಯದ ಬಳಿಕ ಮುಗುರುಜಾ ಹೇಳಿದರು.
ನಂ. ವನ್ ಯಾರು ?: ವಿಶ್ವದ ನಂಬರ್ ವನ್ ಸ್ಥಾನಕ್ಕಾಗಿ ಪ್ಲಿಸ್ಕೋವಾ ಜತೆ ಈ ವಾರ ನಾಲ್ವರು ಸ್ಪರ್ಧೆಯಲ್ಲಿದ್ದರು. ಅವರಲ್ಲಿ ಕೇವಲ ಹಾಲೆಪ್ ಮಾತ್ರ ಕಣದಲ್ಲಿ ಉಳಿದಿದ್ದಾರೆ. ಹಾಲೆಪ್ ತನ್ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಬ್ರಿಟನ್‌ನ 7ನೇ ಶ್ರೇಯಾಂಕದ ಜೋಹಾನಾ ಕೊಂಟಾ ಅವರನ್ನು ಎದುರಿಸಲಿದ್ದಾರೆ. ಪ್ಲಿಸ್ಕೋವಾ ಸತತ ಎರಡು ಪಂದ್ಯ ಗೆದ್ದು ಸೆಮಿಫೈನಲ್ ತಲುಪಿದ್ದರಿಂದ ಹಾಲೆಪ್ ಈ ಕೂಟದಲ್ಲಿ ಪ್ರಶಸ್ತಿ ಗೆದ್ದರೆ ಮಾತ್ರ ವಿಶ್ವದ ನಂಬರ್ ವನ್ ಸ್ಥಾನ ಪಡೆಯಲಿದ್ದಾರೆ. ಒಂದು ವೇಳೆ ಅದಕ್ಕಿಂತ ಮೊದಲು ಹಾಲೆಪ್ ಸೋತರೆ ಪ್ಲಿಸ್ಕೋವಾ ಮುಂದಿನ ರ್‍ಯಾಂಕಿಂಗ್‌ನಲ್ಲಿ ವಿಶ್ವದ ನಂಬರ್ ವನ್ ಅಲಂಕರಿಸಲಿದ್ದಾರೆ.
ನಡಾಲ್‌ಗೆ ಆಘಾತ
ಸಿನ್ಸಿನಾಟಿ: ಮುಂದಿನ ವಾರ ವಿಶ್ವದ ನಂಬರ್ ವನ್ ರ್‍ಯಾಂಕ್ ಪಡೆಯಲಿರುವ ಸ್ಪೇನ್‌ನ ರಫೆಲ್ ನಡಾಲ್ ಅವರನ್ನು ನೇರ ಸೆಟ್‌ಗಳಿಂದ ಉರುಳಿಸಿದ ಆಸ್ಟ್ರೇಲಿಯದ ನಿಕ್ ಕಿರ್ಗಿಯೋಸ್ ಅವರು ಸಿನ್ಸಿನಾಟಿ ಓಪನ್ ಟೆನಿಸ್ ಕೂಟದ ಸೆಮಿಫೈನಲ್ ಹಂತಕ್ಕೇರಿದರು.
15 ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಆಗಿರುವ ನಡಾಲ್ ಅವರನ್ನು 6-2, 7-5 ಸೆಟ್‌ಗಳಿಂದ ಸೋಲಿಸಿದ ಕ್ಯಾನ್‌ಬೆರಾದ 22ರ ಹರೆಯದ ಕಿರ್ಗಿಯೋಸ್ ಅಂತಿಮ ನಾಲ್ಕರ ಸುತ್ತಿಗೇರಿದರು. ಸೆಮಿಫೈನಲ್‌ನಲ್ಲಿ ಅವರು ಸ್ಪೇನ್‌ನ ಡೇವಿಡ್ ಫೆರರ್ ಅವರ ಸವಾಲನ್ನು ಎದುರಿಸಲಿದ್ದಾರೆ. ಇನ್ನೊಂದು ಸೆಮಿಫೈನಲ್ ಪಂದ್ಯ ಬಲ್ಗೇರಿಯದ ಗ್ರಿಗರ್ ದಿಮಿತ್ರೋವ್ ಮತ್ತು ಅಮೆರಿಕದ ಜಾನ್ ಇಸ್ನರ್ ನಡುವೆ ನಡೆಯಲಿದೆ.
ಈ ಮೊದಲು ನಡೆದ ಪಂದ್ಯದಲ್ಲಿ ಕಿರ್ಗಿಯೋಸ್ ಕ್ರೊವೇಶಿಯದ ಇವೊ ಕಾರ್ಲೋವಿಕ್ ಅವರನ್ನು 5-6, 7-6 (8-6), 6-3 ಸೆಟ್‌ಗಳಿಂದ ಸೋಲಿಸಿದ್ದರೆ ನಡಾಲ್ ತನ್ನ ದೇಶದವರೇ ಆದ ಆಲ್ಬರ್ಟ್ ರಾಮೋಸ್ ವಿನೋಲಾಸ್ ಅವರನ್ನು 7-6 (7-1), 6-2 ಸೆಟ್‌ಗಳಿಂದ ಕೆಡಹಿದ್ದರು.
ಎರಡು ವರ್ಷಗಳ ಬಳಿಕ ತನ್ನ ಶ್ರೇಷ್ಠ ನಿರ್ವಹಣೆ ನೀಡಿದ ಕಿರ್ಗಿಯೋಸ್ ತನ್ನ ಬಾಳ್ವೆಯ ನಾಲ್ಕನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. 2016ರಲ್ಲಿ ಅವರು ಮಾರ್ಸೆಲ್ಲೆ, ಅಟ್ಲಾಂಟಾ ಮತ್ತು ಟೋಕಿಯೋದಲ್ಲಿ ಪ್ರಶಸ್ತಿ ಜಯಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.