ಸಿನ್ಸಿನಾಟಿ ಟೆನಿಸ್: ಹಾಲೆಪ್- ಮುಗುರುಜಾ ಫೈನಲ್
Team Udayavani, Aug 21, 2017, 2:21 PM IST
ಸಿನ್ಸಿನಾಟಿ: ರೊಮೇನಿಯಾದ ಸಿಮೋನಾ ಹಾಲೆಪ್ ವಿಶ್ವದ ನಂಬರ್ ವನ್ ಟೆನಿಸ್ ಆಟಗಾರ್ತಿ ಎನಿಸಿ ಕೊಳ್ಳುವತ್ತ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಸಿನ್ಸಿನಾಟಿ ಟೆನಿಸ್ ಪಂದ್ಯಾವಳಿಯ ಫೈನಲ್ ತಲುಪಿರುವ ಅವರು ಇಲ್ಲಿ ಚಾಂಪಿಯನ್ ಎನಿಸಿಕೊಂಡರೆ ನಂ.1 ಗೌರ ವಕ್ಕೆ ಪಾತ್ರರಾಗಲಿದ್ದಾರೆ.
ಸಿಮೋನಾ ಹಾಲೆಪ್ ಅವರಿಗೆ ನಂ.1 ಅವಕಾಶ ಎದುರಾಗಿರುವುದು ಪ್ರಸಕ್ತ ಋತುವಿನಲ್ಲಿ ಇದು 3ನೇ ಸಲ ಎಂಬುದು ವಿಶೇಷ. ಹಿಂದಿನೆರಡೂ ಸಲ ಅವರಿಗೆ ಇದು ಮರೀಚಿಕೆಯಾಗಿತ್ತು. 3ನೇ ಪ್ರಯತ್ನದಲ್ಲಿ ಹಾಲೆಪ್ ಇದನ್ನು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗುವರೇ ಎಂಬುದೊಂದು ಕುತೂಹಲ. ಆಗ ಹಾಲೆಪ್ ನಂಬರ್ ವನ್ ಗೌರವಕ್ಕೆ ಪಾತ್ರರಾಗಲಿರುವ ವಿಶ್ವದ 24ನೇ ಆಟಗಾರ್ತಿ ಎನಿಸಿಕೊಳ್ಳಲಿದ್ದಾರೆ.
ದ್ವಿತೀಯ ರ್‍ಯಾಂಕಿಂಗಿನ ಸಿಮೋನಾ ಹಾಲೆಪ್ ಸಿನ್ಸಿನಾಟಿ ಸೆಮಿಫೈನಲ್ ಪಂದ್ಯದಲ್ಲಿ ಅಮೆರಿಕದ ಸ್ಲೋನ್ ಸ್ಟೀಫನ್ಸ್ ಅವರಿಗೆ 6-2, 6-1 ಅಂತರದಿಂದ ಸೋಲುಣಿ ಸಿದರು. ಫೈನಲ್‌ನಲ್ಲಿ ಅವರ ಎದುರಾಳಿ ವಿಂಬಲ್ಡನ್ ಚಾಂಪಿ ಯನ್ ಖ್ಯಾತಿಯ ಗಾರ್ಬಿನ್ ಮುಗುರುಜಾ. ಅವರು ಅಗ್ರ ರ್‍ಯಾಂಕಿಂಗ್‌ನ ಹಾಲಿ ಚಾಂಪಿಯನ್ ಕ್ಯಾರೋಲಿನಾ ಪ್ಲಿಸ್ಕೋವಾಗೆ 6-3, 6-2 ಅಂತರದ ಆಘಾತವಿಕ್ಕಿದರು.
“ನಾನು ನಂಬರ್ ವನ್ ಎನಿಸಿಕೊಳ್ಳಬೇಕು. ಇದಕ್ಕೆ ನಾನು ಅರ್ಹಳೂ ಆಗಿದ್ದೇನೆ. ಈ ಬಾರಿ ವೈಫಲ್ಯ ಕಾಣಲಿಕ್ಕಿಲ್ಲ ಎಂದು ಭಾವಿಸಿದ್ದೇನೆ…’ ಎಂದಿದ್ದಾರೆ ಹಾಲೆಪ್. ಈ ಕೂಟದಲ್ಲಿ ಒಂದೂ ಸೆಟ್ ಕಳೆದುಕೊಳ್ಳದ ಹಾಲೆಪ್‌ಗೆ ಕಳೆದ ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್‌ನಲ್ಲಿ ಆಗ್ರಸ್ಥಾನ ಅಲಂಕರಿಸುವ ಅವಕಾಶ ಕೈತಪ್ಪಿತ್ತು. ರೊಲ್ಯಾಂಡ್ ಗ್ಯಾರೋಸ್ ಫೈನಲ್‌ನಲ್ಲಿ ಅವರು ಜೆಲೆನಾ ಒಸ್ಟಾಪೆಂಕೊಗೆ ಶರಣಾದರೆ, ವಿಂಬಲ್ಡನ್ ಕ್ವಾರ್ಟರ್ ಫೈನಲ್‌ನಲ್ಲಿ ಜೊಹಾನ್ನಾ ಕೊಂಟಾಗೆ ಸೋತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.