16ರ ಹರೆಯದ ಟೆನ್ನಿಸ್‌ ತಾರೆ ಕೊಕೊ ಗಾಫ್ ಗೆ ಕಾಡುತ್ತಿದೆ ಖಿನ್ನತೆ

ಜನಪ್ರಿಯತೆಯ ಪರಮೋಚ್ಚ ಸ್ಥಿತಿ ತಲುಪಿದ್ದ ಆಟಗಾರ್ತಿಗೆ ಅದುವೇ ಮುಳುವಾಯಿತು

Team Udayavani, Apr 17, 2020, 2:03 PM IST

16ರ ಹರೆಯದ ಟೆನ್ನಿಸ್‌ ತಾರೆ ಕೊಕೊ ಗಾಫ್ ಗೆ ಕಾಡುತ್ತಿದೆ ಖಿನ್ನತೆ

ಮುಂಬೈ: ಜನಪ್ರಿಯತೆಗಾಗಿ ಜನ ಮುಗಿಬೀಳುತ್ತಾರೆ. ಅದಕ್ಕಾಗಿ ಹಂಬಲಿಸಿ ಜೀವನವನ್ನೇ ವ್ಯರ್ಥ ಮಾಡಿಕೊಳ್ಳುವವರೂ ಇದ್ದಾರೆ. ಇನ್ನು ಕೆಲವರಿಗೆ ಈ ಜನಪ್ರಿಯತೆ ಯಾಕಾದರೂ ಬಂತು, ಇದರಿಂದ ತಮ್ಮ ಜೀವನವೇ ಹಾಳಾಗುತ್ತಿದೆ ಎಂಬ ಕೊರಗೂ ಕಾಡುತ್ತದೆ. ಅಂತಹದೊಂದು ನೋವಿಗೆ, ಖನ್ನತೆಗೆ ಒಳಗಾಗಿರುವುದು ಅಮೆರಿಕದ ವಿಶ್ವವಿಖ್ಯಾತ ಟೆನಿಸ್‌ ತಾರೆ, ಕೇವಲ 16 ವರ್ಷದ ಕೊಕೊ ಗಾಫ್!

ಈಕೆಗೆ ಕೇವಲ 15 ವರ್ಷದವರಿದ್ದಾಗಲೇ ವಿಪರೀತ ಜನಪ್ರಿಯತೆ ಬಂದು ಮುಗಿಬಿದ್ದಿದೆ. ಅದು ಅವರನ್ನು ಒತ್ತಡಕ್ಕೆ ಸಿಲುಕಿಸಿದೆ. ಅದರಿಂದ ಆಡುವ ಆನಂದವನ್ನೇ ಕಳೆದುಕೊಳ್ಳುತ್ತಿದ್ದೇನೆ ಅನ್ನಿಸಿದೆ. ಜನರಿಗೋಸ್ಕರ ಆಡುತ್ತಿದ್ದೇನೋ, ತನಗಾಗಿ ಆಡುತ್ತಿದ್ದೇನೋ ಗೊತ್ತಾಗದೆ ಅವರು ಒದ್ದಾಡುತ್ತಿದ್ದಾರೆ.

ಅವರನ್ನು ಈಗಾಗಲೇ ಸಾರ್ವಕಾಲಿಕ ಶ್ರೇಷ್ಠ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ಗೆ ಹೋಲಿಸುತ್ತಿರುವುದರಿಂದ, ಪ್ರತೀಬಾರಿಯೂ  ಅಮೋಘವಾಗಿ ಆಟವನ್ನೇ ಆಡಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ತಾನೀಗ ತ್ತಲಲ್ಲಿದ್ದೇನೆ, ಒಂದು ವರ್ಷ ಕ್ರೀಡೆಯಿಂದಲೇ ದೂರಾಗಲು ಚಿಂತಿಸುತ್ತಿದ್ದೇನೆಂದು ಗಾಫ್  ಹೇಳಿಕೊಂಡಿದ್ದಾರೆ. ಅವರ ಅಂತರಂಗದ ತುಮುಲಗಳು ಹೀಗಿವೆ…

ಯಾರಿಗಾಗಿ ಆಡುತ್ತಿದ್ದೇನೆ?: ಇಷ್ಟರವರೆಗೆ ಅತೀ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆಗಳು ಒಲಿದಿವೆ. ಅದು ನನಗೆ ವಿಪರೀತ ಜನಪ್ರಿಯತೆ ನೀಡಿತು. ಇದನ್ನು ನಾನು ಬಯಸಿರಲಿಲ್ಲ. ಅದರಿಂದ ಪದೇಪದೇ ಅತ್ಯುತ್ತಮವಾಗಿ ಆಡುವ ಒತ್ತಡ ಉಂಟಾಗಿದೆ. 2018ರ ವಿಂಬಲ್ಡನ್‌ಗೂ ಮುಂಚಿನಿಂದಲೇ, ಇದನ್ನೇ ನಾನು ಬಯಸಿದ್ದಾ ಎಂದು ಪ್ರಶ್ನಿಸಿಕೊಳ್ಳಲು ಶುರು ಮಾಡಿದ್ದೆ. ನನಗೆ ಯಶಸ್ಸು ಸಿಕ್ಕಿದೆ. ಅದಲ್ಲ ವಿಷಯ. ನಾನು ಯಾವುದನ್ನು ಪ್ರೀತಿಸುತ್ತಿದ್ದೀನೋ ಅದರಿಂದ ನನಗೆ ಆನಂದವೇ ಸಿಗುತ್ತಿಲ್ಲ. ಆದ್ದರಿಂದ ಜನರಿಗಾಗಿ ಅಲ್ಲ, ನನಗಾಗಿ ಆಡಬೇಕು ಎಂದು ತೀರ್ಮಾನಿಸಿದ್ದೇನೆ. ಕಳೆದ ವರ್ಷ ನಿಜಕ್ಕೂ ಖನ್ನತೆಗೊಳಗಾಗಿದ್ದೆ. ಅದು ನನ್ನ ಪಾಲಿನ ಕಠಿಣ ವರ್ಷ ಖನ್ನತೆಗೊಳಗಾಗಿದ್ದೇನೆ: ಈ ಬಗ್ಗೆ ಖಚಿತ ನಿಲವು ಹೊಂದದಿರುವುದು ಸರಿ. ಆದರೆ ನಾನು ಆ ದಿಕ್ಕಿನಲ್ಲಿ ಹೋಗುತ್ತಿಲ್ಲ. ಬದಲಿಗೆ ಸಿಕ್ಕಾಪಟ್ಟೆ ಗೊಂದಲಕ್ಕೊಳಗಾಗಿದ್ದೇನೆ. ತನ್ನ ತುಮುಲಗಳ ಪರಿಣಾಮ, ಸ್ನೇಹಿತರೇ ಇಲ್ಲವಾಗಿದ್ದಾರೆ. ಆದ್ದರಿಂದ ಒಂದು ವರ್ಷ ವಿಶ್ರಾಂತಿ ಪಡೆಯಬೇಕು ಎಂದು ನಿರ್ಧರಿಸಿದ್ದೇನೆ. ನನ್ನಲ್ಲಿ ವಿಪರೀತ ಯೋಚನೆಗಳು. ಇದನ್ನೇ ನಾನು ಬಯಸಿದ್ದಾ? ಉಳಿದವರು ಏನು ಮಾಡುತ್ತಾರೆ? ಹೀಗೆಲ್ಲ ಚಿಂತೆಗಳು. ಬಹಳ ಸಲ ಕೂತು ಯೋಚಿಸಿದ್ದೇನೆ. ಅತ್ತಿದ್ದೇನೆ, ಕಡೆಗೆ ಅದರಿಂದೆಲ್ಲ ಹೊರಬಂದು, ಮತ್ತಷ್ಟು ಮಾನಸಿಕವಾಗಿ ಗಟ್ಟಿಯಾಗಿದ್ದೇನೆ.

ಸೆರೆನಾಗೆ ಹೋಲಿಸಬೇಡಿ: ನನ್ನಂತಹ ಚಿಕ್ಕ ಆಟಗಾರ್ತಿಯನ್ನು ಸೆರೆನಾ ವಿಲಿಯಮ್ಸ್‌ರಂತಹ ಆಟಗಾರ್ತಿಯರಿಗೆ ಹೋಲಿಸುವುದೇ ತಪ್ಪು. ಅವರಂತಹ ಅಗಾಧ ಸಾಧಕಿಯನ್ನು, ನನ್ನಂತಹ ಉದಯೋನ್ಮುಖರಿಗೆ ಹೋಲಿಸುವುದು ಸರಿಯಲ್ಲ. ಆದರೂ ನನಗೆ ಅವರೇ ಮಾದರಿ ಆಟಗಾರ್ತಿ.

ಗಾಫ್ ಸಾಧನೆಯೇನು?

2019ರಲ್ಲಿ ಕೊಕೊ ಗಾಫ್ ಬರೀ 15 ವರ್ಷದವರಿದ್ದಾಗಲೇ ವಿಂಬಲ್ಡನ್‌ ಗ್ರ್ಯಾನ್‌ ಸ್ಲಾéಮ್‌ನಲ್ಲಿ ಉಪಾಂತ್ಯಕ್ಕೇರಿದ್ದರು. ಈ ವರ್ಷ ಮತ್ತೆ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಉಪಾಂತ್ಯಕ್ಕೇರಿದ್ದರು. ದಿಗ್ಗಜ ಆಟಗಾರರನ್ನೇ ಸೋಲಿಸಿಬಿಟ್ಟರು. ಇದರಿಂದ ಆಕೆ ಜನಪ್ರಿಯತೆಯ ತುದಿಗೇರಿದರು. ಮಾತ್ರವಲ್ಲ ವಿಶ್ವ ಮಹಿಳಾ ಶ್ರೇಯಾಂಕದಲ್ಲಿ ಅಗ್ರ 50ರೊಳಗೆ ಸ್ಥಾನ ಪಡೆದರು. ಕಳೆದ 15 ವರ್ಷದಲ್ಲೇಈ ವಯಸ್ಸಿನ ಆಟಗಾರ್ತಿಯರುಮಾಡದ ಸಾಧನೆಯಿದು.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

1-sehwag

Cooch Behar Trophy: ಸೆಹವಾಗ್‌ ಪುತ್ರನಿಂದ ದ್ವಿಶತಕ

1-tt

Pro Kabaddi; ವಿಜಯ್‌ ಮಲಿಕ್‌ ಅಮೋಘ ಆಟ: ತೆಲುಗು ಟೈಟಾನ್ಸ್‌ ಗೆ ಗೆಲುವು

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.