ಕಾಫಿ ಡೇ ಕಾರ್ ರ್ಯಾಲಿಗೆ ಚಾಲನೆ
Team Udayavani, Dec 1, 2018, 6:55 AM IST
ಚಿಕ್ಕಮಗಳೂರು: ಚಿಕ್ಕಮಗಳೂರು ಮೋಟಾರ್ ನ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆಯುತ್ತಿರುವ ಕಾಫಿ ಡೇ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ಶಿಪ್ನ 4ನೇ ಸುತ್ತಿನ ರೇಸ್ಗೆ ಶುಕ್ರವಾರ ಪ್ರೇಕ್ಷಕರ ಹಂತದ ಸ್ಪರ್ಧೆಯ ಮೂಲಕ ಚಾಲನೆ ನೀಡಲಾಯಿತು.
ನಗರದ ಆಂಬರ್ ವ್ಯಾಲಿ ಶಾಲೆ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಸೂಪರ್ ಸ್ಪೆಷಲ್ ಕ್ಲಾಸ್ ವಿಭಾಗದ ಸ್ಪರ್ಧೆಗಳು ಶ್ರೇಯಾಂಕ ರಹಿತ ಚಾಲಕರಿಂದ ಆರಂಭವಾಯಿತು. ಪ್ರೇಕ್ಷಕರ ಸುತ್ತಿನ ಸ್ಪರ್ಧೆಯಲ್ಲಿ 5 ಬಾರಿ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಡ ಗೌರವ್ ಗಿಲ್ ಮತ್ತು ಮೂಸಾ ಷರೀಫ್ ಜೋಡಿ 2.19 ಕಿ.ಮೀ. ದೂರವನ್ನು 2 ನಿಮಿಷ 34.7 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಮೊದಲ ದಿನದ ಗೌರವ ಪಡೆದುಕೊಂಡರು.ಅಮಿತ್ ರಜತ್ ಘೋಷ್ ಹಾಗೂ ಅಶ್ವಿನ್ ನಾಯಕ್ 2 ನಿಮಿಷ 35.1 ಸೆಕೆಂಡುಗಳಲ್ಲಿ ಕ್ರಮಿಸಿ ಎರಡನೇ ಸ್ಥಾನವನ್ನು ಹಾಗೂ ಕರ್ಣ ಕಡೂರು ಮತ್ತು ನಿಖೀಲ್ ಪೈ ಜೋಡಿ 2 ನಿಮಿಷ 36.1 ಸೆಕೆಂಡುಗಳಲ್ಲಿ ನಿಗದಿತ ದೂರ ಪೂರ್ಣಗೊಳಿಸಿ 3ನೇ ಸ್ಥಾನ ಪಡೆದುಕೊಂಡರು.
ಐ.ಎನ್.ಆರ್.ಸಿ. 1 ವಿಭಾಗದಲ್ಲಿ ಗೌರವ್ ಗಿಲ್ ಮತ್ತು ಮೂಸಾ ಷರೀಫ್ ಜೋಡಿ ಮೊದಲ ಸ್ಥಾನ ಪಡೆದರೆ, ಅಮಿತ್ ರಜತ್ ಘೋಷ್ ಮತ್ತು ಅಶ್ವಿನ್ ನಾಯಕ್ ಜೋಡಿ ಎರಡನೇ ಸ್ಥಾನ ಪಡೆಯಿತು. ರ್ಯಾಲಿಯ ಎರಡನೇ ದಿನವಾದ ಶನಿವಾರ ಮೂಡಿಗೆರೆ ಮತ್ತು ಬೇಲೂರು ತಾಲೂಕಿನ ಕಾಫಿ ತೋಟಗಳ ಮಣ್ಣಿನ ರಸ್ತೆಯಲ್ಲಿ ರೇಸ್ ನಡೆಯಲಿದೆ.
– ಎಸ್.ಕೆ.ಲಕ್ಷ್ಮೀಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
FIFA ಸೌಹಾರ್ದ ಫುಟ್ಬಾಲ್ ಪಂದ್ಯ: ಮಾಲ್ದೀವ್ಸ್ ವಿರುದ್ಧ ಭಾರತಕ್ಕೆ 11-1 ಗೆಲುವು
450 ಕೋಟಿ ಚಿಟ್ ಫಂಡ್ ಹಗರಣ: ಶುಭಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್ ಸಾಧ್ಯತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.