ಕಾಮನ್‌ವೆಲ್ತ್ ಗೇಮ್ಸ್ : ಭಾರತದ ಆತಿಥ್ಯದಲ್ಲಿ ಶೂಟಿಂಗ್, ಬಿಲ್ಗಾರಿಕೆ!
Team Udayavani, Feb 25, 2020, 6:45 AM IST
ಲಂಡನ್: ಭಾರತೀಯ ಒಲಿಂಪಿಕ್ ಸಂಸ್ಥೆಗೆ ಬಹುದೊಡ್ಡ ಜಯ ಲಭಿಸಿದೆ. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ರದ್ದಾಗಿದ್ದ ಶೂಟಿಂಗ್ ಮತ್ತು ಬಿಲ್ಗಾರಿಕೆ ಸ್ಪರ್ಧೆ ಗಳು, ಭಾರತದಲ್ಲಿ ಅದೇ ವರ್ಷ ಜನವರಿಯಲ್ಲಿ ನಡೆಯಲಿವೆ. ಇಲ್ಲಿ ಗೆದ್ದ ಪದಕಗಳನ್ನು ಕಾಮನ್‌ವೆಲ್ತ್ ಗೇಮ್ಸ್ ಪದಕ ಪಟ್ಟಿಯಲ್ಲಿ ಸೇರಿಸಿ, ಶ್ರೇಯಾಂಕಗಳನ್ನು ನಿರ್ಧರಿಸಲಾಗುತ್ತದೆ.
ಇದಕ್ಕೂ ಮುನ್ನ ಈ ಎರಡು ಸ್ಪರ್ಧೆಗಳನ್ನು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಬೇಕಿರುವ 2022ರ ಕಾಮನ್‌ವೆಲ್ತ್ ಗೇಮ್ಸ್ ನಿಂದ ಕೈಬಿಡಲಾಗಿತ್ತು. ಆದರೆ ಭಾರತ ಒಲಿಂಪಿಕ್ ಸಂಸ್ಥೆ ತನಗೆ ಗರಿಷ್ಠ ಪದಕ ಬರುವ ಈ ಸ್ಪರ್ಧೆಗಳನ್ನು ಕೈಬಿಟ್ಟರೆ, ತಾನು ಕೂಟದಿಂದಲೇ ಹಿಂದೆ ಸರಿಯುವುದಾಗಿ ಬೆದರಿಸಿತ್ತು.
ಭಾರತದ ಬೆದರಿಕೆಯನ್ನು ಸಂಘ ಟನಾ ಸಮಿತಿ ಗಂಭೀರವಾಗಿ ಪರಿಗ ಣಿಸಿ, ಸಂಧಾನ ಮಾಡಿಕೊಂಡಿತ್ತು. ಕಳೆದ ತಿಂಗಳೇ ಈ 2 ಸ್ಪರ್ಧೆಗಳನ್ನು ಮಾತ್ರ ಭಾರತದಲ್ಲಿ ನಡೆಸುವ ಮಾತುಕತೆ ಯಾಗಿತ್ತು. ಆ ಪ್ರಕಾರ ಇದೀಗ ಅಧಿಕೃತ ಆದೇಶ ಹೊರಬಿದ್ದಿದೆ.
ಚಂಡೀಗಢದಲ್ಲಿ ಸ್ಪರ್ಧೆ
2022ರ ಶೂಟಿಂಗ್ ಮತ್ತು ಬಿಲ್ಗಾರಿಕೆ ಸ್ಪರ್ಧೆಗಳು ಜನವರಿಯಲ್ಲಿ ಚಂಡೀಗಢದಲ್ಲಿ ನಡೆಯಲಿವೆ. ಕಾಮನ್‌ವೆಲ್ತ್ ಗೇಮ್ಸ್ ಬರ್ಮಿಂಗ್‌ಹ್ಯಾಮ್‌ನಲ್ಲಿ 2022, ಜು. 27ರಿಂದ ಆ. 7ರ ವರೆಗೆ ನಡೆಯಲಿದೆ.
ಇಲ್ಲಿ ಗಮನಿಸಬೇಕಾದ ಸಂಗತಿ ಯೊಂದಿದೆ. ಗರಿಷ್ಠ ಪದಕ ವಿಜೇತ ತಂಡಗಳ ಶ್ರೇಯಾಂಕವನ್ನು ಭಾರತದಲ್ಲಿ ನಡೆಯುವ ಬಿಲ್ಗಾರಿಕೆ, ಶೂಟಿಂಗ್ ಪದಕ ಸೇರಿಸಿಯೇ ನಿರ್ಧರಿಸಲಾಗುವುದು. ಆದರೆ ಕಾಮನ್‌ವೆಲ್ತ್ ಗೇಮ್ಸ್ ಮುಗಿದು ಒಂದು ವಾರದ ಅನಂತರ ಈ ಸೇರ್ಪಡೆ ಮಾಡಲಾಗುವುದು. ಅಲ್ಲಿಯವರೆಗೆ ನೇರವಾಗಿ ಕೂಟದಲ್ಲಿ ನಡೆದ ಸ್ಪರ್ಧೆಗಳನ್ನು ಮಾತ್ರ ಪರಿಗಣಿಸಲಾಗುವುದು.
ಭಾರತಕ್ಕೆ ಮಹತ್ವದ ಜಯ
ಇದು ಭಾರತಕ್ಕೆ ಸಿಕ್ಕಿದ ಮಹ ತ್ವದ ಜಯವೆಂದೇ ಹೇಳಲಾಗಿದೆ. ವಿಶ್ವಮಟ್ಟದಲ್ಲಿ ಭಾರತ ಬಲಿಷ್ಠವಾಗಿರುವುದು, ರಾಜತಾಂತ್ರಿಕವಾಗಿ ಪ್ರಬಲವಾಗಿರುವುದರಿಂದ ಭಾರತದ ಬಹಿಷ್ಕಾರದ ಧ್ವನಿಗೆ ಮಹತ್ವ ಸಿಕ್ಕಿದೆ. ಇದಕ್ಕೆ ಮೊದಲು ಬರ್ಮಿಂಗ್‌ಹ್ಯಾಮ್‌ನಲ್ಲಿ ಶೂಟಿಂಗ್ ರೇಂಜ್ ಇಲ್ಲ ಎಂಬ ಕಾರಣಕ್ಕೆ ಶೂಟಿಂಗ್ ರದ್ದು ಮಾಡಲಾಗಿತ್ತು. ಈ ಕ್ರೀಡೆಯಲ್ಲೇ ಭಾರತಕ್ಕೆ ಬಹುತೇಕ ಪದಕ ಬರುವುದು, ಅದನ್ನೇ ರದ್ದು ಮಾಡಿರುವುದು ಪಿತೂರಿ ಎಂದು ಭಾರತ ಒಲಿಂಪಿಕ್ ಸಂಸ್ಥೆ ಮುಖ್ಯಸ್ಥ ನರೇಂದ್ರ ಬಾತ್ರಾ ಆರೋಪಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
Maha Polls; ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!
Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.