ಕಾಮನ್ವೆಲ್ತ್ ಪುರುಷರ ಟೇಬಲ್ ಟೆನಿಸ್: ಭಾರತಕ್ಕೆ 9ನೇ ಚಿನ್ನ
Team Udayavani, Apr 9, 2018, 4:32 PM IST
ಗೋಲ್ಡ್ ಕೋಸ್ಟ್ : ಇಲ್ಲೀಗ ಸಾಗುತ್ತಿರುವ 2018ರ ಕಾಮನ್ವೆಲ್ತ್ ಗೇಮ್ಸ್‌ನ ಐದನೇ ದಿನವಾದ ಇಂದು ಭಾರತ, ಪುರುಷರ ಟೇಬಲ್ ಟೆನಿಸ್ ತಂಡ ಸ್ಪರ್ಧೆಯಲ್ಲಿ ನೈಜೀರಿಯವನ್ನು 3-0 ಅಂತರದಲ್ಲಿ ಸೋಲಿಸುವ ಮೂಲಕ 9ನೇ ಚಿನ್ನದ ಪದಕವನ್ನು ಗೆದ್ದುಕೊಂಡಿತು.
ಸತಿಯನ್ ಜ್ಞಾನಶೇಖರನ್ ಮತ್ತು ಹರ್‌ಮೀತ್ ದೇಸಾಯಿ ಅವರು ಮೂರನೇ ಪಂದ್ಯವನ್ನು 11-8, 11-5, 11-3 ಅಂತರದಲ್ಲಿ ಗೆಲ್ಲುವ ಮೂಲಕ ಭಾರತಕ್ಕೆ ಚಿನ್ನದ ಪದಕ ಪ್ರಾಪ್ತವಾಯಿತು.
ಐದನೇ ದಿನವಾದ ಇಂದು ಭಾರತ ಒಟ್ಟು 9 ಚಿನ್ನ, 4 ಬೆಳ್ಳಿ ಮತ್ತು 5 ಕಂಚಿನ ಪದಕಗಳನ್ನು ಗೆಲ್ಲುವ ಮೂಲ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿತು.
ಪುರುಷರ 10 ಎಂ ಏರ್ ಪಿಸ್ಟಲ್ ಸ್ಪರ್ಧೆಯಲ್ಲಿ ಜೀತೂ ರಾಯ್ ಅವರು ಚಿನ್ನ ಮತ್ತು ಓಂ ಪ್ರಕಾಶ್ ಅವರು ಕಂಚಿನ ಪದಕವನ್ನು ಗೆದ್ದುಕೊಂಡರು.
ಅನಂತರ ಮೆಹೂಲಿ ಘೋಷ್ ಮತ್ತು ಅಪೂರ್ವಿ ಚಂಡೇಲಾ ಅವರು ಮಹಿಳೆಯರ 10 ಎಂ ಏರ್ ಪಿಸ್ಟರ್ ಫೈನಲ್‌ನಲ್ಲಿ ಅನುಕ್ರಮವಾಗಿ 2 ಮತ್ತು 3ನೇ ಸ್ಥಾನಿಯಾಗಿ ಜಯ ಸಾಧಿಸಿದರು.
ವೇಟ್ ಲಿಫ್ಟರ್ ಪ್ರದೀಪ್ ಸಿಂಗ್ ಅವರು ಪುರುಷರು 105 ಕಿಲೋ ವಿಭಾಗದಲ್ಲಿ ಬೆಳ್ಳಿ ಗೆದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru; ಫುಟ್‌ಬಾಲ್ ಕ್ವಾರ್ಟರ್ ಫೈನಲ್ :ಕಸಬ ಬ್ರದರ್ ಮೇಲುಗೈ
BBK11: ಡಬಲ್ ಎಲಿಮಿನೇಷನ್: ಮೊದಲು ಆಚೆ ಹೋದ ಸ್ಪರ್ಧಿ ಇವರೇ ನೋಡಿ
Rohingya; ತ್ರಿಪುರಾದಲ್ಲಿ 6 ರೋಹಿಂಗ್ಯಾ ಮಹಿಳೆಯರ ಬಂಧನ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಆಕ್ಷೇಪ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.