![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 10, 2022, 6:25 AM IST
ಬರ್ಮಿಂಗ್‌ಹ್ಯಾಮ್: ಇಲ್ಲಿನ ಅಲೆಕ್ಸಾಂಡರ್ ಕ್ರೀಡಾಂಗಣದಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್‌ನ ಸಮಾರೋಪ ಸಮಾರಂಭದಲ್ಲಿ ಆ್ಯತ್ಲೀಟ್‌ಗಳ ಭವ್ಯ ಪಥಸಂಚಲನ, ಕಲಾವಿದರ ಅತ್ಯ ಮೋಘ ನಿರ್ವಹಣೆ, ಅತ್ಯಾಕರ್ಷಕ ಸುಡುಮದ್ದು ಪ್ರದರ್ಶನದೊಂದಿಗೆ ಗೇಮ್ಸ್‌ಗೆ ವರ್ಣರಂಜಿತವಾಗಿ ಅಂತ್ಯ ಹಾಡಲಾಯಿತು.
ಹನ್ನೊಂದು ದಿನಗಳ ಭರ್ಜರಿ ಸ್ಪರ್ಧೆ ಗಳ ಬಳಿಕ ಸೋಮವಾರ ತಡರಾತ್ರಿ ಗೇಮ್ಸ್ ಅಂತ್ಯಗೊಂಡಿತು. ಮುಂದಿನ ಕಾಮನ್ವೆಲ್ತ್ ಗೇಮ್ಸ್ 2026ರಲ್ಲಿ ವಿಕ್ಟೋರಿಯದಲ್ಲಿ ನಡೆಯಲಿದೆ. ಹೊಸ ಪ್ರಸ್ತುತತೆ ಮತ್ತು ಉದ್ದೇಶದೊಂದಿಗೆ ಬಹು-ಕ್ರೀಡಾ ಕಾರ್ಯಕ್ರಮವನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಿತು.
ನಿಸ್ಸಂಶಯವಾಗಿ ಬರ್ಮಿಂಗ್‌ಹ್ಯಾಮ್ ತಂಡವು ಈ ಕೂಟವನ್ನು ಅದ್ಭುತ ರೀತಿಯಲ್ಲಿ ಸಂಘಟಿಸಿದೆ. ಈ ಕೂಟವು ದಕ್ಷಿಣ ಆಫ್ರಿಕಾದ ಡರ್ಬಾನ್‌ನಲ್ಲಿ ನಡೆಯಬೇಕಿತ್ತು. ಆದರೆ ಕೊನೆ ಹಂತದಲ್ಲಿ ಗೇಮ್ಸ್‌ನ ಆತಿಥ್ಯವನ್ನು ಡರ್ಬಾನ್‌ನಿಂದ ತೆಗೆದು ಬರ್ಮಿಂಗ್‌ಹ್ಯಾಮ್‌ಗೆ ನೀಡಲಾಯಿತು. ಬರ್ಮಿಂಗ್‌ಹ್ಯಾಮ್ ಅಲ್ಪ ಅವಧಿಯಲ್ಲಿಯೇ ಈ ಆಹ್ವಾನವನ್ನು ಸ್ವೀಕರಿಸಿ ಅಮೋಘ ರೀತಿಯಲ್ಲಿ ಈ ಕೂಟವನ್ನು ಆಯೋಜಿಸಿ ಪ್ರಶಂಸೆಗೆ ಪಾತ್ರವಾಗಿದೆ. ಪ್ರತಿಯೊಂದು ಮಾನದಂಡದಿಂದ ನೋಡಿದರೂ ಈ ಕೂಟವು ಅತ್ಯಂತ ಯಶಸ್ವಿಯಾಗಿ ಆಯೋಜನೆಗೊಂಡಿದೆ.
ವಿವಿಧ ಸ್ಪರ್ಧೆಗಳನ್ನು ವೀಕ್ಷಿಸುವ ಸಲುವಾಗಿ 1.5 ದಶಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಇದರಿಂದ ಸ್ಪರ್ಧೆಯ ಎಲ್ಲ ಕಡೆ ಪ್ರೇಕ್ಷರಕು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು. ಪ್ರೇಕ್ಷಕರ ಅದ್ಭುತ ಸ್ಪಂದನೆಯನ್ನು ಗಮನಿಸಿದಾಗ ಭವಿಷ್ಯದಲ್ಲಿ ಬರ್ಮಿಂಗ್‌ಹ್ಯಾಮ್ ಒಲಿಂ ಪಿಕ್ಸ್ ಸಂಘಟಿಸಲು ಸಾಧ್ಯವಿದೆ ಎನ್ನಲಾಗಿದೆ.
ಗೇಮ್ಸ್‌ನ ಪ್ರತಿಯೊಂದು ಸ್ಪರ್ಧೆಗಳು ಅಮೋಘವಾಗಿ ನಡೆದಿವೆ. ಮಾತ್ರವಲ್ಲದೇ ಝೇಂಕರಿಸುವ ಮತ್ತು ಸಂಪೂರ್ಣವಾಗಿ ಅದ್ಭುತವಾಗಿವೆ” ಎಂದು ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್ ಅಧ್ಯಕ್ಷ ಲೂಯಿಸ್ ಮಾರ್ಟಿನ್ ಸಮಾರೋಪದಲ್ಲಿ ಹೇಳಿದ್ದಾರೆ. ಈ ಸಂದರ್ಭ ಪ್ರಿನ್ಸ್ ಎಡ್ವರ್ಡ್ಸ್ ಕೂಡ ಮಾತನಾಡಿದರು. ಸಮಾರೋಪ ಸಮಾರಂಭದಲ್ಲಿ ಟಿಟಿಪಟು ಅಚಂತ ಶರತ್ ಕಮಲ್ ಮತ್ತು ಬಾಕ್ಸರ್ ನಿಖತ್ ಜರೀನ್ ಭಾರತದ ತ್ರಿವರ್ಣ ಧ್ವಜ ಹಿಡಿದು ಸಾಗಿದರು.
ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ. ಆತಿಥೇಯ ನಾಡಿನ, ಆಸ್ಟ್ರೇಲಿಯ ಮತ್ತು ಭಾರತದ ಕಲಾವಿದರು ಕೂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಆಸ್ಟ್ರೇಲಿಯದ ಸಿಂಗರ್ ವನಿಸ್ಸಾ ಅಮೊರೋಸಿ, ರಾಕ್ ಸ್ಟಾರ್ ಓಝಿ ಒಸಬುರ್ನೆ, ಟಯ್ಲರ್ ಹೆಂಡರ್ಸನ್, ಸಿಂಗರ್ ಜೋರ್ಜಾ ಸ್ಮಿತ್, ಬೆವೆರ್ಲೆ ನೈಟ್ ಮುಂತಾದವರು ಸಂಗೀತ ಕಾರ್ಯಕ್ರಮ ನೀಡಿ ರಂಜಿಸಿದರು.
ವನಿತೆಯರಿಗೆ ಹೆಚ್ಚು ಪದಕ
ಗೇಮ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಪುರುಷರಿಗಿಂತ (136) ವನಿತೆಯರಿಗೆ ಹೆಚ್ಚು ಪದಕ (134) ನಿರ್ಣಯ ಸ್ಪರ್ಧೆಗಳು ನಡೆದಿವೆ. ದಾಖಲೆಯ ಎಂಟು ಸಂಯೋಜಿತ ಪ್ಯಾರಾ-ಕ್ರೀಡೆಗಳು ನಡೆದವು. ಕಳೆದ ಆರು ಆವೃತ್ತಿಗಳಲ್ಲಿ ಮೂರನೇ ಬಾರಿಗೆ ಕೂಟವನ್ನು ಆಯೋಜಿಸಲಿರುವ (2026) ಆಸ್ಟ್ರೇಲಿಯಈ ಬಾರಿ 67 ಚಿನ್ನ ಸಹಿತ ಒಟ್ಟಾರೆ 178 ಪದಕಗಳ ಸಾಧನೆಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯ ಈಜು ಸ್ಪರ್ಧೆಯಲ್ಲಿ ಅತ್ಯಧಿಕ ಪದಕಗಳನ್ನು ಜಯಿಸಿದೆ. ಈಜು ಸ್ಪರ್ಧೆಯಲ್ಲಿ ಲಭ್ಯವಿದ್ದ 156 ಪದಕಗಳಲ್ಲಿ ಆಸ್ಟ್ರೇಲಿಯ 25 ಚಿನ್ನ ಸಹಿತ 65 ಪದಕಗಳನ್ನು ಗೆದ್ದುಕೊಂಡಿದೆ.
ಎಮ್ಮಾ ಮೆಕ್‌ಕಿಯೋನ್ ಶ್ರೇಷ್ಠ
ಆಸ್ಟ್ರೇಲಿಯದ ಎಮ್ಮಾ ಮೆಕ್‌ಕಿಯೋನ್ ಈ ಗೇಮ್ಸ್‌ನಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಆರು ಚಿನ್ನದ ಪದಕ ಸಹಿತ ಎಂಟು ಬಾರಿ ಪೋಡಿಯಂಗೆ ತಲುಪಿದ್ದಾರೆ. ಗೇಮ್ಸ್‌ನ ಅತ್ಯಂತ ಯಶಸ್ವಿ ಆ್ಯತ್ಲೀಟ್ ಆಗಿರುವ ಅವರು ಒಟ್ಟಾರೆ 14 ಚಿನ್ನ ಸಹಿತ 20 ಪದಕ ಗೆದ್ದುಕೊಂಡಿದ್ದಾರೆ. ಇಂಗ್ಲೆಂಡಿನ ಜಿಮ್ನಾಸ್ಟ್ ಜ್ಯಾಕ್ ಜರ್ಮಾನ್ ನಾಲ್ಕು ಚಿನ್ನ ಪಡೆದಿದ್ದಾರೆ.
ವನಿತಾ ಕ್ರಿಕೆಟ್ ಈ ಗೇಮ್ಸ್ ಮೂಲಕ ಪದಾರ್ಪಣೆಗೈದಿದೆ. ಭಾರತ ಸ್ವಲ್ಪದರಲ್ಲಿ ಚಿನ್ನ ಗೆಲ್ಲಲು ವಿಫಲವಾಗಿ ಬೆಳ್ಳಿ ಪಡೆದಿದೆ. ಚಿನ್ನ ಆಸ್ಟ್ರೇಲಿಯದ ಪಾಲಾಗಿದೆ.
ಸಣ್ಣ ರಾಷ್ಟ್ರಗಳ ಅದ್ಭುತ ಸಾಧನೆ
ಸಣ್ಣ ರಾಷ್ಟ್ರಗಳು ಮತ್ತು ಪ್ರಾಂತ್ಯಗಳ ಸ್ಪರ್ಧಿಗಳು ಶ್ರೇಷ್ಠ ನಿರ್ವಹಣೆ ನೀಡಿ ಪದಕ ಗೆಲ್ಲುವ ಮೂಲಕ ಗೇಮ್ಸ್‌ನ ವಿಶಿಷ್ಟ ಆಕರ್ಷಣೆಯಾಗಿದ್ದಾರೆ. ನಿಯು, ಕೇವಲ 1,600 ನಿವಾಸಿಗಳಿಗೆ ನೆಲೆಯಾಗಿದೆ, ಈ ದೇಶದ ಪ್ರೀಮಿಯರ್ ಡಾಲ್ಟನ್ ತಗೆಲಗಿ ಮತ್ತು ಅವರ 14 ವರ್ಷದ ಮಗ ತುಕಾಲಾ ಅವರನ್ನು ಒಳಗೊಂಡ ಬೌಲ್ಸ್ ತಂಡ ಈ ಗೇಮ್ಸ್‌ನಲ್ಲಿ ಭಾಗವಹಿಸಿ ಗಮನ ಸೆಳೆದಿತ್ತು. ಹೆವಿವೇಟ್ ಬಾಕ್ಸರ್ ಡ್ನೂಕೆನ್ ಟುಟಾಕಿಟೋವಾ- ವಿಲಿಯಮ್ಸ… ಅವರು ಕಂಚಿನ ಪದಕ ಗೆಲ್ಲುವ ಮೂಲಕ ದಕ್ಷಿಣ ಪೆಸಿಫಿಕ್‌ನ ಸಣ್ಣ ಹವಳ ದ್ವೀಪಕ್ಕೆ ಮೊದಲ ಬಾರಿಗೆ ಕೂಟದ ಪದಕವನ್ನು ತಂದುಕೊಟ್ಟರು.
ಜಾರ್ಜ್ ಮಿಲ್ಲರ್ ಈ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಅತ್ಯಂತ ಹಿರಿಯ ಆ್ಯತ್ಲೀಟ್ ಆಗಿದ್ದಾರೆ. 75ರ ಹರೆಯದ ಅವರು ಬಿ2/ಬಿ3 ಮಿಕ್ಸೆಡ್ ಜೋಡಿ ಬೌಲ್ಸ್‌ನಲ್ಲಿ ಸ್ಕಾಟ್ಲೆಂಡ್ ಚಿನ್ನ ಗೆಲ್ಲಲು ನೆರವಾಗಿದ್ದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.