ಭಾರತಕ್ಕೆ ಸರಣಿ ಗೆಲುವಿನ ವಿಶ್ವಾಸ; ಸೋಲು ತಪ್ಪಿಸಲು ಕಿವೀಸ್ ಹೋರಾಟ
Team Udayavani, Jan 28, 2020, 10:51 PM IST
ಹ್ಯಾಮಿಲ್ಟನ್: ಆಕ್ಲೆಂಡ್‌ನಲ್ಲಿ ನಡೆದ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ನ್ಯೂಜಿಲ್ಯಾಂಡನ್ನು ಪರಾಭವ ಗೊಳಿಸಿದ ಭಾರತ ತಂಡ ಬುಧವಾರ ಇಲ್ಲಿನ “ಸೆಡ್ಡನ್ ಪಾರ್ಕ್’ನಲ್ಲಿ ಮತ್ತೂಮ್ಮೆ ಆತಿಥೇಯರಿಗೆ ಸಡ್ಡು ಹೊಡೆಯಲು ಸಜ್ಜಾಗಿದೆ. ಒಂದು ವೇಳೆ ಸೆಡ್ಡನ್‌ನಲ್ಲಿ ಜಯಭೇರಿ ಬಾರಿಸಿದರೆ ಭಾರತ ತಂಡ ಚೊಚ್ಚಲ ಬಾರಿ ಸರಣಿ ಗೆಲ್ಲಲಿದೆ. ಇದೇ ವೇಳೆ ತವರಿನಲ್ಲಿ ಸತತ ಎರಡು ಪಂದ್ಯಗಳನ್ನು ಸೋತು ಮುಖಭಂಗ ಅನುಭವಿಸಿದ ಕಿವೀಸ್‌ಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ ಮಾತ್ರವಲ್ಲದೇ ಸರಣಿಯನ್ನು ಜೀವಂತವಾಗಿರಿಸಬೇಕಾದರೆ ವಿಲಿಯಮ್ಸನ್ ಪಡೆ ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಸಂಕಷ್ಟಕ್ಕೆ ಸಿಲುಕಿದೆ.
ಭಾರತಕ್ಕೆ ಹಲವು ಸವಾಲು
“ಸೆಡ್ಡನ್ ಪಾರ್ಕ್’ನಲ್ಲಿ ಭಾರತ ಆಡಿದ ಏಕೈಕ ಪಂದ್ಯ ದಲ್ಲಿ ಸೋಲನುಭವಿಸಿದೆ. 2019ರಲ್ಲಿ ನಡೆದ ಈ ಪಂದ್ಯ ಬೃಹತ್ ಮೊತ್ತಕ್ಕೆ ಸಾಕ್ಷಿಯಾಗಿತ್ತು. 212 ರನ್ನುಗಳ ಗುರಿ ಬೆನ್ನತ್ತಿದ ಭಾರತ 4 ರನ್ನಿನಿಂದ ಸೋಲು ಕಂಡಿತು. ಇದಲ್ಲದೆ ಆಕ್ಲೆಂಡ್ ಹೊರತುಪಡಿಸಿ ನ್ಯೂಜಿಲ್ಯಾಂಡಿನ ಉಳಿದ ಯಾವುದೇ ಕ್ರೀಡಾಂಗಣದಲ್ಲಿ ಭಾರತ ಟಿ20ಯಲ್ಲಿ ಜಯ ದಾಖಲಿಸಿಲ್ಲ! ಈ ಎಲ್ಲ ಸವಾಲನ್ನು ಮೆಟ್ಟಿ ನಿಂತು ಮೂರನೇ ಪಂದ್ಯವನ್ನು ಭಾರತ ಗೆದ್ದರೆ ಕೊಹ್ಲಿ ಪಡೆ ಸಮರ್ಥ ಟಿ20 ತಂಡವಾಗಿ ಹೊರಹೊಮ್ಮಲಿದೆ ಮತ್ತು ಇದೇ ವರ್ಷ ಆಸ್ಟ್ರೇಲಿಯದಲ್ಲಿ ನಡೆಯುವ ಟಿ20 ವಿಶ್ವಕಪ್‌ಗ್ೂ ಮುನ್ನ ಭಾರತ ವಿದೇಶಿ ನೆಲದಲ್ಲೂ ಬಲಿಷ್ಠ ಎನ್ನುವ ಎಚ್ಚರಿಕೆಯ ಸಂದೇಶವೊಂದನ್ನು ನೀಡಲಿದೆ.
ಬ್ಯಾಟಿಂಗ್‌ನಲ್ಲಿ ರಾಹುಲ್-ಅಯ್ಯರ್ ಬಲ
ಕಳೆದೆರಡು ಪಂದ್ಯಗಳಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಕೆ. ಎಲ್. ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಮೇಲೆ ತಂಡ ಹೆಚ್ಚಿನ ನಂಬಿಕೆ ಇರಿಸಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸಿŒ ಅವರು ರಾಹುಲ್-ಅಯ್ಯರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ “ಹಿಟ್‌ಮ್ಯಾನ್’ ಖ್ಯಾತಿಯ ರೋಹಿತ್ ಶರ್ಮ ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುವ ಸಾಧ್ಯತೆಯಿದೆ.
ಬೌಲಿಂಗ್ ವಿಭಾಗದಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜ, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ ಎನ್ನಲಡ್ಡಿಯಿಲ್ಲ. ದುಬಾರಿ ಎನಿಸಿರುವ ಶಾದೂìಲ್ ಠಾಕೂರ್ ಬದಲಿಗೆ ನವದೀಪ್ ಸೈನಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಕಿವೀಸ್‌ಗೆ ಬೌಲಿಂಗ್‌ನದ್ದೇ ಚಿಂತೆ
ನ್ಯೂಜಿಲ್ಯಾಂಡ್‌ಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದ್ದು ಕಳಪೆ ಬೌಲಿಂಗ್. ದೊಡ್ಡ ಮೊತ್ತ ಪೇರಿಸಿದರೂ ಅದನ್ನು ನಿಯಂತ್ರಿಸಿಕೊಳ್ಳುವಲ್ಲಿ ಬೌಲಿಂಗ್ ಪಡೆ ಯಶಸ್ವಿಯಾಗುತ್ತಿಲ್ಲ. ಅನುಭವಿ ಮತ್ತು ಹಿರಿಯ ಬೌಲರ್ ಟಿಮ್ ಸೌಥಿ ದುಬಾರಿಯಾಗಿದ್ದಾರೆ. ಮಿಚೆಲ್ ಸ್ಯಾಂಟ್ನರ್, ಐಶ್ ಸೋಧಿ ನಿರೀಕ್ಷಿತ ಮಟ್ಟದಲ್ಲಿ ಬೌಲಿಂಗ್ ನಡೆಸುತ್ತಿಲ್ಲ. ಕಿವೀಸ್ ಮೂರನೇ ಪಂದ್ಯದಲ್ಲಿ ಸೌಥಿ ಬದಲು ಡ್ಯಾರಿಲ್ ಮಿಸೆಲ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.
ಬ್ಯಾಟಿಂಗ್ ವಿಭಾಗದಲ್ಲಿ ಕಿವೀಸ್ ಸಮರ್ಥವಾಗಿದೆ. ಆರಂಭಕಾರರಾದ ಗಪ್ಟಿಲ್, ಮುನ್ರೊ ಉತ್ತಮ ಆರಂಭ ನೀಡಬಲ್ಲರು. ವಿಲಿಯಮ್ಸನ್, ರಾಸ್ ಟೇಲರ್, ಟಿಮ್ ಸೀಫರ್ಟ್ ಮಧ್ಯಮ ಕ್ರಮಾಂಕದಲ್ಲಿ ತಂಡವನ್ನು ಆಧರಿಸಲು ಸಮರ್ಥರಿದ್ದಾರೆ. ಆಲ್‌ರೌಂಡರ್ ಗ್ರ್ಯಾಂಡ್‌ಹೋಮ್ ಇನ್ನೂ ಬ್ಯಾಟಿಂಗ್ ಫಾರ್ಮ್ಗೆ ಮರಳದಿರುವುದು ಕಿವೀಸ್‌ಗೆ ತಲೆ ನೋವಾಗಿದೆ.
ಚೊಚ್ಚಲ ಟಿ20 ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
ಐದು ಪಂದ್ಯಗಳ ಈ ಟಿ20 ಸರಣಿಯಲ್ಲಿ ಈಗಾಗಲೇ 2-0 ಮುನ್ನಡೆ ಸಾಧಿಸಿರುವ ಭಾರತ ನ್ಯೂಜಿಲ್ಯಾಂಡ್ ನೆಲದಲ್ಲಿ ಚೊಚ್ಚಲ ಬಾರಿ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ. ಸೆಡ್ಡನ್‌ನಲ್ಲಿ ಗೆದ್ದರೆ ಭಾರತ ಇತಿಹಾಸ ನಿರ್ಮಿಸಲಿದೆ. ಭಾರತ ಈ ಹಿಂದೆ ಎರಡು ಬಾರಿ ಗೆಲುವಿನ ಸಾಧನೆಗೈಯಲು ವಿಫಲವಾಗಿತ್ತು. ಧೋನಿ ನಾಯಕತ್ವದ ಭಾರತೀಯ ತಂಡ 2008-09ರಲ್ಲಿ 0-2 ಮತ್ತು ಕಳೆದ ವರ್ಷ 1-2 ಅಂತರದಿಂದ ಸರಣಿ ಸೋತಿತ್ತು.
ಪಿಚ್ ರಿಪೋರ್ಟ್
“ಸೆಡ್ಡನ್ ಪಾರ್ಕ್’ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದು ಬೃಹತ್ ಮೊತ್ತ ದಾಖಲಾಗುವ ಸಾಧ್ಯತೆಯಿದೆ. ಕಳೆದ 5 ಟಿ20 ಪಂದ್ಯಗಳಲ್ಲಿ ಇಲ್ಲಿ ಇನ್ನೂರರ ಸಮೀಪ ರನ್ ದಾಖಲಾಗಿದೆ. ಇನ್ನು ಮೊದಲು ಬ್ಯಾಟ್ ಮಾಡಿದ ತಂಡವೇ ಹೆಚ್ಚು ಪಂದ್ಯಗಳನ್ನು ಗೆದ್ದಿರುವುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.