ಕ್ಷಮಿಸಿ, ನನ್ನ ಸರ್ವನಾಶವಾಗಿದೆ: ಆಸ್ಟ್ರೇಲಿಯಕ್ಕೆ ಮರಳಿದ ಸ್ಮಿತ್
Team Udayavani, Mar 29, 2018, 3:35 PM IST
ಸಿಡ್ನಿ : ದಕ್ಷಿಣ ಆಫ್ರಿಕದಿಂದ ಇಂದು ಗುರುವಾರ ಆಸ್ಟ್ರೇಲಿಯಕ್ಕೆ ಮರಳಿರುವ ಕಳಂಕಿತ ಆಸೀಸ್ ಕ್ರಿಕೆಟ್ ನಾಯಕ ಸ್ಟೀವನ್ ಸ್ಮಿತ್ ಅವರು ಚೆಂಡು ವಿರೂಪ ಪ್ರಕರಣದಲ್ಲಿನ ತನ್ನ ಬೇಜವಾಬ್ದಾರಿಯಿಂದ ತೀವ್ರ ದುಃಖೀತರಾಗಿ ಕಣ್ಣೀರುಗರೆದು “ಕ್ಷಮಿಸಿ, ನನ್ನಿಂದ ತಪ್ಪಾಗಿದೆ; ನನ್ನ ಸರ್ವನಾಶವಾಗಿದೆ’ ಎಂದು ಗದ್ಗದಿತರಾಗಿ ಹೇಳಿ ಕುಸಿದರು.
“ನನ್ನ ಬೇಜವಾಬ್ದಾರಿಗೆ ನಾನು ಸಂಪೂರ್ಣ ಹೊಣೆ ವಹಿಸುತ್ತೇನೆ. ವಸ್ತುಸ್ಥಿತಿ ಮತ್ತು ಅದರ ಪರಿಣಾಮವನ್ನು ಅಳೆಯವಲ್ಲಿ ನನ್ನಿಂದ ಗಂಭೀರ ಪ್ರಮಾದವಾಗಿದೆ. ಇದರ ಪರಿಣಾಮಗಳನ್ನು ನಾನು ಅರಿತಿದ್ದೇನೆ. ಇದು ನನ್ನ ನಾಯಕತ್ವದ ಸಂಪೂರ್ಣ ವೈಫಲ್ಯವಾಗಿದೆ’ ಎಂದು ಸ್ಮಿತ್ ಕಣ್ಣೀರು ಹಾಕುತ್ತಾ ಹೇಳಿದರು.
#WATCH Steve Smith says, ‘there was a failure of leadership, of my leadership’, breaks down as he addresses the media in Sydney. #BallTamperingRow pic.twitter.com/hXKB4e7DR2
— ANI (@ANI) March 29, 2018
“ಕ್ಷಮಿಸಿ, ನಾನು ಸಂಪೂರ್ಣವಾಗಿ ನಾಶವಾಗಿ ಹೋಗಿದ್ದೇನೆ. ನನ್ನ ತಪ್ಪನ್ನು ಸರಿಪಡಿಸಲು ಮತ್ತು ನನ್ನ ತಪ್ಪಿನಿಂದಾಗಿರುವ ಹಾನಿಯನ್ನು ಸರಿಪಡಿಸಲು ನನ್ನಿಂದ ಸಾಧ್ಯವಿರುವ ಎಲ್ಲವನ್ನೂ ನಾನು ಮಾಡುತ್ತೇನೆ. ಅದರಿಂದ ಏನಾದರೂ ಒಳ್ಳೆಯದಾಗುವುದಿದ್ದರೆ ಅದು ಇತರರಿಗೂ ಒಂದು ಪಾಠವಾಗುತ್ತದೆ. ಅಂತೆಯೇ ನಾನು ಬದಲಾವಣೆಯ ಒಂದು ಶಕ್ತಿಯಾಗಲು ಬಯಸುತ್ತೇನೆ. ನಾನು ಶೇಷಾಯುಷ್ಯದಲ್ಲಿ ನಾನು ನನ್ನ ತಪ್ಪಿಗಾಗಿ ವಿಷಾದ ಪಡುವಂತಾಗಿದೆ. ನಾನು ಸಂಪೂರ್ಣವಾಗಿ ಕುಸಿದು ಹೋಗಿದ್ದೇನೆ’ ಎಂದು ಸ್ಮಿತ್ ಹೇಳಿದರು.
ತಂಡದ ಸಹ ಆಟಗಾರರಾಗಿರುವ ಡೇವಿಡ್ ವಾರ್ನರ್ ಜತೆಗೆ ಚೆಂಡು ವಿರೂಪ ಗೊಳಿಸಿರುವ ಕ್ಯಾಮೆರಾನ್ ಬ್ಯಾನ್ ಕ್ರಾಫ್ಟ್ ಗೆ ಸಮ್ಮತಿಸುವ ಮೂಲಕ ಸ್ಮಿತ್ ಅಪರಾಧ ಎಸಗಿರುವುದಕ್ಕಾಗಿ ಅವರಿಗೆ 12 ತಿಂಗಳ ನಿಷೇಧ ಹೇರಲಾಗಿದೆ. ಐಪಿಎಲ್ ಬಾಗಿಲು ಕೂಡ ಸ್ಮಿತ್‌ಗೆ ಈಗ ಮುಚ್ಚಲ್ಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.