ಕ್ಷೇತ್ರ ರಕ್ಷಣೆಗೆ ಅಡ್ಡಿ: ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್ ಜೀವೇಶನ್
Team Udayavani, Jan 18, 2018, 11:26 AM IST
ಮೌಂಟ್ ಮೌಂಗನುಯಿ: ಕ್ರಿಕೆಟ್‌ನಲ್ಲಿ ಆಗಾಗ ಕಳಪೆ ಅಭಿರುಚಿಯ ಬಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಈಗ ಅಂತಹ ಸುದ್ದಿ ಬಂದಿರುವುದು 19 ವಯೋಮಿತಿಯೊಳಗಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ. ವೆಸ್ಟ್ ಇಂಡೀಸ್-ದ.ಆಫ್ರಿಕಾ ನಡುವಿನ ಪಂದ್ಯ ಬುಧವಾರ ಮುಗಿಯಿತು. ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ, ವಿಂಡೀಸನ್ನು 76 ರನ್‌ಗಳಿಂದ ಸೋಲಿಸಿತು. ಇದಕ್ಕಿಂತ ಹೆಚ್ಚು ಸುದ್ದಿಯಾಗಿದ್ದು ವಿಂಡೀಸ್ ಕ್ರಿಕೆಟಿಗರ ಕಳಪೆ ಅಭಿರುಚಿ.
ಅದು ಪಂದ್ಯದ 16.4ನೇ ಓವರ್. ಆಗ ಆಫ್ರಿಕಾದ ಜೀವೇಶನ್ ಪಿಳ್ಳೆ„ 47 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಎಸೆತವೊಂದಕ್ಕೆ
ಅವರು ಉತ್ತರಿಸಿದಾಗ ಅದು ಬ್ಯಾಟ್‌ನ ಒಳಭಾಗಕ್ಕೆ ಬಡಿದು ಸ್ವಲ್ಪ ಹೊರಕ್ಕೆ ಚಿಮ್ಮಿತು. ನಿಧಾನಕ್ಕೆ ವಿಕೆಟ್ ಗೆ ಬಡಿಯುವಂತೆ ಧಾವಿಸಿದರೂ ಚೆಂಡಿನ ಚಲನೆ ನಿಂತು ಹೋಗಿತ್ತು. ಆಗ ಕ್ರೀಸ್‌ನೊಳಕ್ಕೆ ಇದ್ದ ಜೀವೇಶನ್ ಚೆಂಡನ್ನು ತಮ್ಮ ಕೈನಿಂದ ವಿಂಡೀಸ್
ವಿಕೆಟ್ ಕೀಪರ್ ಎಮಾನ್ಯುಯೆಲ್ ಸ್ಟಿವರ್ಟ್‌ಗೆ ಎಸೆದರು. ನಿಯಮಗಳ ಪ್ರಕಾರ ಕ್ಷೇತ್ರರಕ್ಷಣೆಗೆ ಅಡ್ಡಿ ಮಾಡುವುದು ತಪ್ಪು, ಆಗ ಬ್ಯಾಟ್ಸ್‌ಮನ್‌ನನ್ನು ಔಟೆಂದು ಘೋಷಿಸಬಹುದು. ವಿಂಡೀಸ್‌ನ ನಾಯಕ ಸ್ಟಿವರ್ಟ್ ಮನವಿ ಮಾಡಿದಾಗ ಅದನ್ನು ಪುರಸ್ಕರಿಸಿದ ಅಂಪೈರ್ ಔಟೆಂದು ತೀರ್ಪಿತ್ತರು! ಇಲ್ಲಿ ನಿಜಕ್ಕೂ ಜೀವೇಶನ್ ಕ್ಷೇತ್ರರಕ್ಷಣೆಗೆ ಅಡ್ಡಿ ಪಡಿಸಿರಲಿಲ್ಲ. ಅವರು ಕೇವಲ ವಿಕೆಟ್ ಕೀಪರ್‌ಗೆ
ಸಹಾಯ ಮಾಡಿದ್ದರಷ್ಟೇ. ಈ ಹಂತದಲ್ಲಿ ಕ್ರೀಡಾಸ್ಫೂರ್ತಿಯನ್ನು ತೋರಿ ವಿಂಡೀಸಿಗರು ಜೀವೇಶನ್‌ರನ್ನು ವಾಪಸ್ ಕರೆಸಿಕೊಳ್ಳಬಹುದಿತ್ತು. ಆದರೆ ಅವರು ಅಂತಹ ಯತ್ನ ಮಾಡಲಿಲ್ಲ. ಇದು ಎಲ್ಲ ಕಡೆ ಟೀಕೆಗೆ ಕಾರಣವಾಗಿದೆ. ಪತ್ರಿಕಾಗೋಷ್ಠಿಯಲ್ಲಿ ತಮ್ಮ ತಪ್ಪನ್ನು ವಿಂಡೀಸ್ ನಾಯಕ ಒಪ್ಪಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.