ಸರ್ದಾರ್ ವಿಚಾರಣೆಗೆ ಆಕ್ಷೇಪ: ಹಾಕಿ ಇಂಡಿಯಾದಿಂದ ದೂರು
Team Udayavani, Jul 7, 2017, 3:45 AM IST
ನವದೆಹಲಿ: ಭಾರತ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ರನ್ನು ಜೂನ್ ತಿಂಗಳಲ್ಲಿ ವಿಶ್ವ ಚಾಂಪಿಯನ್ಸ್
ಲೀಗ್ ಕೂಟ ನಡೆಯುತ್ತಿದ್ದ ವೇಳೆಯೇ ಇಂಗ್ಲೆಂಡ್ ಪೊಲೀಸರು ಹಠಾತ್ ವಿಚಾರಣೆ ನಡೆಸಿದ್ದರು. ಇದರ ವಿರುದ್ಧ ಭಾರತ ಹಾಕಿ ಮಂಡಳಿ, ಅಂತಾರಾಷ್ಟ್ರೀಯ ಹಾಕಿ ಮಂಡಳಿಗೆ ದೂರು ಸಲ್ಲಿಸಿದೆ.
ಇಂಗ್ಲೆಂಡ್ ಮೂಲದ ಹಾಕಿ ಆಟಗಾರ್ತಿ ಅಶ್ಪಾಲ್ ಬೊಗಾಲ್ರನ್ನು ಅತ್ಯಾಚಾರಕ್ಕೊಳಪಡಿಸಿದ ಆರೋಪದಡಿ ವಿಚಾರಣೆಗೆ ಹಾಜರಾಗುವಂತೆ ಜೂ.18ರಂದು ಯಾರ್ಕ್ಶೈರ್ ಪೊಲೀಸರು ಸರ್ದಾರ್ಗೆ ಸೂಚಿಸಿದ್ದರು. ಆದರೆ ಅಂದು ಪಾಕಿಸ್ತಾನ ವಿರುದ್ಧ ಪಂದ್ಯವಿದ್ದಿದ್ದರಿಂದ ಜೂ.20ಕ್ಕೆ ನಾಲ್ಕು ಗಂಟೆಗಳ ವಿಚಾರಣೆಗೆ ಸರ್ದಾರ್ ಹಾಜರಾಗಿದ್ದರು. ಈ ಪ್ರಕರಣದಿಂದ ಇದರಿಂದ ತಂಡದ ನೈತಿಕ ಸ್ಥೈರ್ಯವೇ ಕುಗ್ಗಿತು, ಮುಖ್ಯ ಆಟಗಾರ ಸರ್ದಾರ್ರನ್ನು ಇಂಗ್ಲೆಂಡ್ ಪೊಲೀಸರು ಹೀನಾಯವಾಗಿ ನಡೆಸಿಕೊಂಡ ಪರಿಣಾಮ ಭಾರತ ಮುಂದಿನ ಸತತ 3 ಪಂದ್ಯಗಳಲ್ಲಿ ಸೋಲು ಕಂಡಿತು ಎಂದು ಹಾಕಿ ಇಂಡಿಯಾ ಆರೋಪಿಸಿದೆ. ಇಂಗ್ಲೆಂಡ್ನ ಹಾಕಿ ಆಟಗಾರ್ತಿ ಬೊಗಾಲ್, 2016ರಲ್ಲಿ ಭಾರತದಲ್ಲೂ ದೂರು ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.