ಕೋವಿಡ್-19 ಎಫೆಕ್ಟ್ ನಿಂದ 100 ಕೋಟಿ ರೂ. ನಷ್ಟ: ಗಾಲ್ಫ್ ಕ್ಲಬ್ ಗಳಿಗೆ ಸಂಕಷ್ಟ
Team Udayavani, Apr 13, 2020, 4:11 PM IST
ಹೊಸದಿಲ್ಲಿ: ಗಾಲ್ಫ್ ಅಂಕಣಗಳಲ್ಲಿ ಸಿಗುತ್ತಿದ್ದ ದಿನನಿತ್ಯದ ಹಣವನ್ನೇ ನಂಬಿಕೊಂಡು ಬದುಕುತ್ತಿದ್ದ ಕ್ಯಾಡಿಗಳ (ಕೆಲಸಗಾರರು) ಬದುಕು ದುರ್ಬರವಾಗಿದೆ. ಆದರೆ ಸಂಕಷ್ಟವಿರುವುದು ಬರೀ ಕ್ಯಾಡಿಗಳಿಗೆ ಮಾತ್ರವಲ್ಲ, ಗಾಲ್ಫ್ ಕೂಟವನ್ನೇ ನಂಬಿಕೊಂಡು ಬದುಕುತ್ತಿದ್ದ ಕ್ಲಬ್ಗಳಿಗೂ ದುಸ್ಥಿತಿ ಎದುರಾಗಿದೆ.
ಗಾಲ್ಫ್ ಕೂಟಗಳು ರದ್ದಾಗಿರುವುದು, ಮುಂದೂಡಿಕೆಯಾಗಿರುವುದು ಸೇರಿದರೆ 100 ಕೋಟಿ ರೂ. ನಷ್ಟವಾಗಿದೆ ಎಂದು ಭಾರತ ಗಾಲ್ಫ್ ಕ್ಲಬ್ ಗಳ ಅಧ್ಯಕ್ಷ (ಜಿಐಎ) ರಿಷಿ ನಾರಾಯಣನ್ ತಿಳಿಸಿದ್ದಾರೆ.
ದೇಶದಲ್ಲಿ 240ಕ್ಕೂ ಅಧಿಕ ಗಾಲ್ಫ್ ಕ್ಲಬ್ಗಳಿವೆ. ಕಳೆದ ವರ್ಷ ಆರ್ಥಿಕ ಕುಸಿತದಿಂದ ಈ ಕ್ಲಬ್ಗಳು ನಷ್ಟ ಅನುಭವಿಸಿದ್ದವು. ಕಂಪನಿಗಳು ಪ್ರಾಯೋಜಕತ್ವದಿಂದ ಹಿಂದೆ ಸರಿದಿದ್ದವು. ಕೆಲವು ಕೂಟಗಳೇ ನಿಂತು ಹೋಗಿದ್ದವು. ಈ ಬಾರಿ ಕೊರೊನಾ ದಾಳಿಯಾದ ಮೇಲೆ, ಸಂಪೂರ್ಣ ಪರಿಸ್ಥಿತಿ ಪಾತಾಳಕ್ಕೆ ಹೋಗಿದೆ. ನಾಲ್ಕು ಪಿಜಿಟಿಐ (ಪ್ರೊಫೆಶನಲ್ ಗಾಲ್ಫ್ ಟೂರ್ ಆಫ್ ಇಂಡಿಯಾ) ಕೂಟಗಳು ರದ್ದಾಗಿವೆ, ಇನ್ನು 5-6 ಕೂಟಗಳು ಮುಂದೂಡಿಕೆಯಾಗಿವೆ. ಐಜಿಯು (ಇಂಡಿಯನ್ ಗಾಲ್ಫ್ ಯೂನಿಯನ್) ಕೂಟಗಳದ್ದೂ ಇದೇ ಕಥೆ.
ಹೀಗಾಗಿ ಕ್ಲಬ್ಗಳಿಗೆ ಬರಬೇಕಾಗಿದ್ದ ಪ್ರವೇಶ ಶುಲ್ಕ, ಆತಿಥೇಯತ್ವ ಶುಲ್ಕ, ಆಹಾರ-ಪಾನೀಯ-ಸಾಧನಗಳ ಶುಲ್ಕ ಹೀಗೆ ಕ್ಲಬ್ಗಳು ಸಿಕ್ಕಾಪಟ್ಟೆ ಕಳೆದುಕೊಳ್ಳುತ್ತಿವೆ. ಇದರಿಂದ ಕ್ಲಬ್ಬನ್ನೇ ನಂಬಿಕೊಂಡಿದ್ದ ವ್ಯಕ್ತಿಗಳನ್ನು ಸಾಕುವುದು ಕಷ್ಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.