ಆಸೀಸ್ ಫುಟ್ ಬಾಲ್ ತಂಡದ ಗೋಲ್ ಕೀಪರ್ ಗೆ ಕೋವಿಡ್ ಸೋಂಕು ದೃಢ
Team Udayavani, Jun 9, 2020, 11:31 AM IST
ಸಿಡ್ನಿ: ಆಸ್ಟ್ರೇಲಿಯಾ ಫುಟ್ ಬಾಲ್ ತಂಡದ ಗೋಲ್ ಕೀಪರ್ ಮಿಚೆಲ್ ಲ್ಯಾಂಗೆರಕ್ ಗೆ ಕೋವಿಡ್-19 ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ.
ಆಸೀಸ್ ಫುಟ್ ಬಾಲ್ ಗೋಲ್ ಕೀಪರ್ ಮಿಚೆಲ್ ಜಪಾನ್ ನ ಜೆ ಲೀಗ್ ಪ್ರಥಮ ದರ್ಜೆ ಡಿವಿಷನ್ ಫುಟ್ ಬಾಲ್ ಲೀಗ್ ನಲ್ಲಿ ನಗೋಯಾ ಗ್ರಾಂಪಸ್ ಕ್ಲಬ್ ತಂಡವನ್ನು ಪ್ರತಿನಿಧಿಸಿದ್ದರು. ಈ ವೇಳೆ ಇವರಿಗೆ ಕೋವಿಡ್ 19 ಸೋಂಕು ತಾಗಿದೆ ಎಂದು ಆಸೀಸ್ ಮಾಧ್ಯಮಗಳು ವರದಿ ಮಾಡಿದೆ.
ಈ ಪ್ರಕರಣದೊಂದಿಗೆ ನಗೋಯಾ ಗ್ರಾಂಪಸ್ ಕ್ಲಬ್ ತಂಡವನ್ನು ಪ್ರತಿನಿಧಿಸಿದ ಎರಡನೇ ಆಟಗಾರನಿಗೆ ಕೋವಿಡ್- 19 ಸೋಂಕು ತಾಗಿದಂತಾಗಿದೆ. ಕಳೆದ ವಾರವಷ್ಟೇ ಅದೇ ತಂಡದ ಮತ್ತೋರ್ವ ಆಟಗಾರ ಮು ಕನಾಜಕಿಗೆ ವೈರಸ್ ತಗುಲಿತ್ತು. ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಟಗಾರನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂದಿತ್ತು.
ಆದರೆ ಗೋಲ್ ಕೀಪರ್ ಮಿಚೆಲ್ ಗೆ ಯಾವುದೇ ಸೋಂಕು ಲಕ್ಷಣಗಳು ಕಂಡು ಬಂದಿರಲಿಲ್ಲ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.