ಕೆರಿಬಿಯನ್ ಪ್ರೀಮಿಯರ್ ಲೀಗ್ ಫೈನಲ್: ಟ್ರಿನ್‌ಬಾಗೊ-ಸೇಂಟ್ ಲೂಸಿಯಾ ಪ್ರಶಸ್ತಿ ಸಮರ
Team Udayavani, Sep 9, 2020, 8:03 PM IST
ಟರೂಬ (ಟ್ರಿನಿಡಾಡ್): ಕೋವಿಡ್ ಕಾಲದ ಮೊದಲ ಟಿ20 ಲೀಗ್ ಎಂಬ ಹೆಗ್ಗಳಿಕೆಗೆ ಪಾತ್ರವಾದ “ಕೆರಿಬಿಯನ್ ಪ್ರೀಮಿಯರ್ ಲೀಗ್’ ಈಗ ಅಂತಿಮ ಘಟ್ಟ ತಲುಪಿದೆ. ಟ್ರಿನ್‌ಬಾಗೊ ನೈಟ್‌ರೈಡರ್ (ಟಿಕೆಆರ್) ಮತ್ತು ಸೇಂಟ್ ಲೂಸಿಯಾ ಜೂಕ್ಸ್ ತಂಡಗಳು ಗುರುವಾರದ ಪ್ರಶಸ್ತಿ ಸಮರದಲ್ಲಿ ಸೆಣಸಲಿವೆ.
ಮಂಗಳವಾರದ ಎರಡೂ ಸೆಮಿಫೈನಲ್ ಪಂದ್ಯಗಳು ಏಕಪಕ್ಷೀಯವಾಗಿ ನಡೆದವು. ಅಜೇಯವಾಗಿ ಲೀಗ್ ಹಂತವನ್ನು ದಾಟಿ ಬಂದಿದ್ದ ಟ್ರಿನ್‌ಬಾಗೊ ನೈಟ್‌ರೈಡರ್ (ಟಿಕೆಆರ್) 9 ವಿಕೆಟ್‌ಗಳಿಂದ ಜಮೈಕಾ ತಲ್ಲವಾಸ್ ತಂಡವನ್ನು ಮಣಿಸಿತು. ದ್ವಿತೀಯ ಉಪಾಂತ್ಯದಲ್ಲಿ ಸೇಂಟ್ ಲೂಸಿಯಾ ಜೂಕ್ಸ್ 10 ವಿಕೆಟ್‌ಗಳಿಂದ ಗಯಾನಾ ಅಮೆಜಾನ್ ವಾರಿಯರ್ ಮೇಲೆ ಸವಾರಿ ಮಾಡಿತು.
ಮೊದಲು ಬ್ಯಾಟಿಂಗ್ ನಡೆಸಿದ ಜಮೈಕಾ 7 ವಿಕೆಟಿಗೆ ಕೇವಲ 107 ರನ್ ಗಳಿಸಿದರೆ, ಟಿಕೆಆರ್ 11 ಓವರ್‌ಗಳಲ್ಲಿ ಒಂದು ವಿಕೆಟಿಗೆ 111 ರನ್ ಬಾರಿಸಿರು. ಟಿಕೆಆರ್ ಪರ ಅಖೀಲ್ ಹೊಸೀನ್ (4-1-14-3) ಮತ್ತು ಸುನೀಲ್ ನಾರಾಯಣ್ (4-1-13-1) ಪರಿಣಾಮಕಾರಿ ಬೌಲಿಂಗ್ ದಾಳಿ ಸಂಘಟಿಸಿದರು.
ಗಯಾನಾ 55 ಆಲೌಟ್!
ದ್ವಿತೀಯ ಸೆಮಿಫೈನಲ್‌ನಲ್ಲಿ ಗಯಾನಾ ಅಮೆಜಾನ್ ವಾರಿಯರ್ ತೀವ್ರ ಬ್ಯಾಟಿಂಗ್ ಬರಗಾಲಕ್ಕೆ ಸಿಲುಕಿ 13.4 ಓವರ್‌ಗಳಲ್ಲಿ 55 ರನ್ನಿಗೆ ಕುಸಿಯಿತು. ಡಿಯಾಕ್ ಒಂದಕ್ಕೆ 2, ಕ್ಯುಗೆಲೀನ್ 12ಕ್ಕೆ 2, ಜಹೀರ್ ಖಾನ್ 12ಕ್ಕೆ 2, ಚೇಸ್ 15ಕ್ಕೆ 2 ವಿಕೆಟ್ ಉರುಳಿಸಿ ಮಿಂಚಿದರು. ಜವಾಬಿತ್ತ ಸೇಂಟ್ ಲೂಸಿಯಾ ಜೂಕ್ಸ್ ಕೇವಲ 4.3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 56 ರನ್ ಬಾರಿಸಿತು. ಆಗ ಇನ್ನೂ 93 ಎಸೆತ ಉಳಿದಿತ್ತು. ಸಿಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಎಸೆತ ಬಾಕಿ ಇರುವಂತೆಯೆ ದಾಖಲಾದ ಗೆಲುವು ಇದಾಗಿದೆ.
ಗಯಾನಾ ತಂಡದ ಸ್ಕೋರ್ ಸಿಪಿಎಲ್ ಚರಿತ್ರೆಯ 2ನೇ ಕನಿಷ್ಠ ಮೊತ್ತವಾಗಿದೆ. 2013ರಲ್ಲಿ ರೆಡ್ ಸ್ಟೀಲ್ ತಂಡ ಟ್ರೈಡೆಂಡ್ಸ್ ವಿರುದ್ಧ 52ಕ್ಕೆ ಆಲೌಟ್ ಆದದ್ದು ದಾಖಲೆ. ಫೈನಲ್ ಪಂದ್ಯ ಇದೇ ಅಂಗಳದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನದಂತೆ ರಾತ್ರಿ 7.30ಕ್ಕೆ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.