ದ.ಆಫ್ರಿಕ ಪ್ರವಾಸ ಸಿದ್ಧತೆಗೆ ತಿಂಗಳ ಬಿಡುವು ಬೇಕಿತ್ತು: ಕೊಹ್ಲಿ
Team Udayavani, Nov 23, 2017, 3:30 PM IST
ಹೊಸದಿಲ್ಲಿ : ‘ಭಾರತೀಯ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕದಂತಹ ಅತ್ಯಂತ ಕಠಿನ ಸಾಗರೋತ್ತರ ಕ್ರಿಕೆಟ್ ಸರಣಿಗೆ ಪೂರ್ತಿಯಾಗಿ ಸಿದ್ಧವಾಗಿಲ್ಲ; ಹಾಗಾಗಿ ನಮಗೆ ಸ್ವಲ್ಪ ಕಾಲಕಾವಕಾಶ ಬೇಕಿತ್ತು’ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐಗೆ ಹೇಳಿದ್ದಾರೆ.
ಪ್ರವಾಸಿ ಲಂಕಾ ತಂಡದ ವಿರುದ್ಧ ಮೂರು ಟೆಸ್ಟ್ ಪಂದ್ಯಗಳು ಮುಗಿದ ಬೆನ್ನಿಗೆ ಭಾರತೀಯ ಕ್ರಿಕೆಟ್ ತಂಡ ಸರಿಸುಮಾರು ಎರಡು ತಿಂಗಳ ಅತ್ಯಂತ ಕಠಿನ ದಕ್ಷಿಣ ಆಫ್ರಿಕ ಕ್ರಿಕೆಟ್ ಪ್ರವಾಸವನ್ನು ಕೈಗೊಳ್ಳಬೇಕಿದೆ.
ದಕ್ಷಿಣ ಆಫ್ರಿಕ ಪ್ರವಾಸದಲ್ಲಿ ಭಾರತ ಮೂರು ಟೆಸ್ಟ್ ಪಂದ್ಯಗಳು, ಆರ್ ಒನ್‌ಡೇಗಳು ಮತ್ತು 3 ಟಿ-20 ಪಂದ್ಯ ಸರಣಿಗಳನ್ನು ಆಡಬೇಕಿದೆ.
ಈ ನಡುವೆ ಭಾರತ ನಾಗ್ಪುರದಲ್ಲಿ ಪ್ರವಾಸಿ ಲಂಕೆ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಇದೇ ಶುಕ್ರವಾರದಿಂದ ಆಡಲಿದೆ.
“ಭಾರತೀಯ ಕ್ರಿಕೆಟ್ ತಂಡ ಎಂದಿನಂತೆ ಈಗಲೂ ಬಿಡುವಿರದ ಕ್ರಿಕೆಟ್ ಆಡುತ್ತಿದೆ; ಪ್ರವಾಸಿ ಲಂಕಾ ಮತ್ತು ದಕ್ಷಿಣ ಆಫ್ರಿಕ ವಿರುದ್ಧದ ಸರಣಿಗಳ ನಡುವಿನ ಅಂತರ ಬಹುತೇಕ ಶೂನ್ಯವಾಗಿದೆ’ ಎಂದು ಕೊಹ್ಲಿ ಇಂದು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಪ್ರವಾಸಿ ಲಂಕೆಯ ಸರಣಿ ಮುಗಿದ ಎರಡೇ ದಿನಗಳಲ್ಲಿ ನಾವು ದಕ್ಷಿಣ ಆಫ್ರಿಕ ಪ್ರವಾಸ ಕೈಗೊಳ್ಳಬೇಕಿದೆ. ಹಾಗಾಗಿ ನಮಗೆ ಆಟದ ಮನೋಸ್ಥಿತಿಯಲ್ಲೇ ಇರಬೇಕಾದ ಅನಿವಾರ್ಯತೆ ಒದಗಿದೆ. ಒಂದು ವೇಳೆ ನಮಗೆ ಈ ಎರಡು ಸರಣಿಗಳ ನಡುವೆ ಕನಿಷ್ಠ ಒಂದು ತಿಂಗಳ ಬಿಡುವಿನ ಅಂತರ ಇರುತ್ತಿದ್ದರೆ ನಾವು ಇಷ್ಟೊಂದು ಕಠಿನ ಪ್ರವಾಸಕ್ಕೆ ಸಾಕಷ್ಟು ಸಿದ್ಧತೆ ಮಾಡುವುದು ಸಾಧ್ಯವಿತ್ತು. ಆದರೆ ಈಗ ಅದು ಅಸಾಧ್ಯ. ಹಾಗಿದ್ದರೂ ನಮ್ಮ ಬಳಿ ಏನಿದೆಯೋ ಅದರೊಳಗೆ ನಾವು ಸಿದ್ಧರಾಗಬೇಕಿದೆ’ ಎಂದು ಕೊಹ್ಲಿ ಹೇಳಿದರು.
ಆಟಗಾರರು ಚೆನ್ನಾಗಿ ಆಡದಿದ್ದಾಗ ಅವರನ್ನು ಟೀಕಿಸುವುದು ಎಲ್ಲರಿಗೂ ಸುಲಭ; ಆದರೆ ಆಟಗಾರರಿಗೆ ಮುಂದಿನ ಸರಣಿಗೆ ಸಿದ್ಧರಾಗಲು ಸಮಯಾವಕಾಶದ ಕೊರತೆ ಇರುವುದನ್ನು ಯಾರೂ ಪರಿಗಣಿಸುವುದಿಲ್ಲ; ಅದುವೇ ನಮ್ಮ ದುರದೃಷ್ಟ’ ಎಂದು ಕೊಹ್ಲಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
MUST WATCH
ಹೊಸ ಸೇರ್ಪಡೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.