ಕೋವಿಡ್‌ಗೆ ಸಡ್ಡು ಹೊಡೆದ ಆಸ್ಟ್ರೇಲಿಯ ಕ್ರಿಕೆಟ್ ತಂಡ
Team Udayavani, Mar 29, 2022, 11:06 PM IST
ಲಾಹೋರ್: ಪಾಕಿಸ್ಥಾನ ಪ್ರವಾಸ ದಲ್ಲಿರುವ ಆಸ್ಟ್ರೇಲಿಯ ಕ್ರಿಕೆಟ್ ತಂಡದಲ್ಲಿ ದಿಢೀರನೇ 3 ಕೋವಿಡ್ ಪಾಸಿಟಿವ್ ಕೇಸ್ ಕಾಣಿಸಿಕೊಂಡಿದೆ.
ಆದರೆ ಈ ಮಾರಿಗೆ ಸಡ್ಡು ಹೊಡೆದಿರುವ ಕಾಂಗರೂ ಪಡೆ ಮಂಗಳವಾರದ ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟಿಗೆ 313 ರನ್ ಪೇರಿಸುವಲ್ಲಿ ಯಶಸ್ವಿಯಾಗಿದೆ.
ಸೋಮವಾರ ವಿಕೆಟ್ ಕೀಪರ್-ಬ್ಯಾಟರ್ ಜೋಶ್ ಇಂಗ್ಲಿಸ್ ಅವರ ಕೋವಿಡ್ ಫಲಿತಾಂಶ ಪಾಸಿಟಿವ್ ಬಂದಿತ್ತು. ಪಂದ್ಯದ ದಿನವಾದ ಮಂಗಳವಾರ ಬೆಳಗ್ಗೆ ಅಗರ್ ಮತ್ತು ಫಿಸಿಯೋ ಬ್ರೆಂಡನ್ ವಿಲ್ಸನ್ ಅವರಿಗೂ ಕೋವಿಡ್ ಅಂಟಿಕೊಂಡಿತು. ಇವರೆಲ್ಲರೂ 5 ದಿನಗಳ ಐಸೊಲೇಶನ್‌ನಲ್ಲಿರುವ ಕಾರಣ ಏಕದಿನ ಸರಣಿಯನ್ನು ತಪ್ಪಿಸಿಕೊಳ್ಳಲಿದ್ದಾರೆ. ಮ್ಯಾಥ್ಯೂ ರೆನ್‌ಶಾ ಅವರನ್ನು ತುರ್ತಾಗಿ ಕರೆಸಿಕೊಳ್ಳಲಾಗಿದೆ.
ಹೆಡ್ ಶತಕ: ಆರಂಭಿಕನಾಗಿ ಇಳಿದ ಟ್ರ್ಯಾವಿಸ್ ಹೆಡ್ 101 ರನ್ ಬಾರಿಸಿ ಆಸ್ಟ್ರೇಲಿಯದ ಬೃಹತ್ ಮೊತ್ತಕ್ಕೆ ಕಾರಣರಾದರು. ಕೇವಲ 72 ಎಸೆತ ಎದುರಿಸಿದ ಹೆಡ್ 12 ಫೋರ್, 3 ಸಿಕ್ಸರ್ ಸಿಡಿಸಿದರು. ಬೆನ್ ಮೆಕ್‌ಡರ್ಮಟ್ 55, ಕ್ಯಾಮ ರಾನ್ ಗ್ರೀನ್ ಅಜೇಯ 40 ರನ್ ಹೊಡೆದರು. ಈ ಮೂಲಕ ನಥನ್ ಎಲ್ಲಿಸ್ ಮತ್ತು ಮಿಚೆಲ್ ಸ್ವೆಪ್ಸನ್ ಏಕದಿನಕ್ಕೆ ಪದಾರ್ಪಣೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್ ಡೆಲ್ಲಿ
Ranji Trophy: ಕರ್ನಾಟಕಕ್ಕೆ ಹಿನ್ನಡೆ ಭೀತಿ
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.