Team Of World Cup ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾ: ವಿರಾಟ್ ಕೊಹ್ಲಿಗೆ ನಾಯಕನ ಸ್ಥಾನ
Team Udayavani, Nov 13, 2023, 3:34 PM IST
ಸಿಡ್ನಿ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023ರ ಕೂಟವು ಲೀಗ್ ಹಂತದ ಪಂದ್ಯಗಳನ್ನು ಮುಗಿಸಿ ಇದೀಗ ಸೆಮಿ ಫೈನಲ್ ಹಂತಕ್ಕೆ ಬಂದಿದೆ. ಹತ್ತು ತಂಡಗಳ ಕೂಟದಲ್ಲಿ ನಾಲ್ಕು ತಂಡಗಳು ಉಪಾಂತ್ಯ ಸುತ್ತಿಗೆ ಅರ್ಹತೆ ಪಡೆದಿದೆ. ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಸೆಮೀಸ್ ನಲ್ಲಿ ಪ್ರಶಸ್ತಿ ಸುತ್ತಿಗೇರಲು ಸೆಣಸಾಡಲಿದೆ.
ಇದೀಗ ಕ್ರಿಕೆಟ್ ಆಸ್ಟ್ರೇಲಿಯಾವು 2023ರ ಏಕದಿನ ವಿಶ್ವಕಪ್ ನ ತಂಡವನ್ನು ಪ್ರಕಟಿಸಿದೆ. ತಂಡದಲ್ಲಿ ಭಾರತದ ನಾಲ್ವರು ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ ಅವರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಉಳಿದಂತೆ ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ ವಿಶ್ವಕಪ್ ತಂಡ
ಕ್ವಿಂಟನ್ ಡಿಕಾಕ್ (ದ.ಆಫ್ರಿಕಾ): 9 ಪಂದ್ಯಗಳಿಂದ 591 ರನ್, 4 ಶತಕಗಳು
ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ): 9 ಪಂದ್ಯಗಳಲ್ಲಿ 499 ರನ್. ಎರಡು ಶತಕ
ರಚಿನ್ ರವೀಂದ್ರ (ನ್ಯೂಜಿಲ್ಯಾಂಡ್): 9 ಪಂದ್ಯಗಳಲ್ಲಿ 565 ರನ್. ಮೂರು ಶತಕ
ವಿರಾಟ್ ಕೊಹ್ಲಿ (ಭಾರತ): 9 ಪಂದ್ಯಗಳಲ್ಲಿ 594 ರನ್. ಎರಡು ಶತಕ
ಏಡನ್ ಮಾರ್ಕ್ರಮ್ (ದ.ಆಫ್ರಿಕಾ): 9 ಪಂದ್ಯಗಳಲ್ಲಿ 396 ರನ್. ಒಂದು ಶತಕ
ಗ್ಲೆನ್ ಮ್ಯಾಕ್ಸವೆಲ್ (ಆಸ್ಟ್ರೇಲಿಯಾ): 7 ಪಂದ್ಯಗಳಲ್ಲಿ 397 ರನ್. ಎರಡು ಶತಕ
ಮಾರ್ಕೊ ಯಾನ್ಸನ್ (ದ.ಆಫ್ರಿಕಾ): 8 ಪಂದ್ಯಗಳಲ್ಲಿ 157 ರನ್. 6.4ರ ಎಕಾನಮಿಯಲ್ಲಿ 17 ವಿಕೆಟ್.
ರವೀಂದ್ರ ಜಡೇಜಾ (ಭಾರತ): 9 ಪಂದ್ಯಗಳಲ್ಲಿ 111 ರನ್ ಮತ್ತು 3.96ರ ಎಕಾನಮಿಯಲ್ಲಿ 16 ವಿಕೆಟ್.
ಮೊಹಮ್ಮದ್ ಶಮಿ (ಭಾರತ): 5 ಪಂದ್ಯಗಳಲ್ಲಿ 16 ವಿಕೆಟ್. ಎರಡು ಬಾರಿ ಐದು ವಿಕೆಟ್.
ಆ್ಯಡಂ ಜಂಪಾ (ಆಸ್ಟ್ರೇಲಿಯಾ): 9 ಪಂದ್ಯಗಳಲ್ಲಿ 22 ವಿಕೆಟ್. ಎಕಾನಮಿ 5.27
ಜಸ್ಪ್ರೀತ್ ಬುಮ್ರಾ (ಭಾರತ): 9 ಪಂದ್ಯಗಳಲ್ಲಿ 17 ವಿಕೆಟ್. 3.65 ಎಕಾನಮಿ.
12ನೇ ಆಟಗಾರ: ದಿಲ್ಶನ್ ಮಧುಶನಕಾ (ಶ್ರೀಲಂಕಾ): 9 ಪಂದ್ಯಗಳಲ್ಲಿ 21 ವಿಕೆಟ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.