ನ್ಯೂಜಿಲ್ಯಾಂಡ್ ವಿರುದ್ಧ ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್‌ ಮಾಡಿದ ಟೀಮ್ ಇಂಡಿಯಾ


Team Udayavani, Jan 24, 2023, 9:35 PM IST

1-wdsdasd

ಇಂದೋರ್‌: ಇಂದೋರ್‌ನಲ್ಲಿ ಮಂಗಳವಾರ ನಡೆದ ಸರಣಿಯ ಅಂತಿಮ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 90 ರನ್‌ಗಳಿಂದ ಜಯಗಳಿಸಿದ ಭಾರತ ತಂಡ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಮಾಡಿದೆ. ಪ್ರತಿಷ್ಠೆಗಾಗಿ ಹೋರಾಡಿದ ಕಿವೀಸ್‌ ಭಾರಿ ಮುಖಭಂಗ ಅನುಭವಿಸಿದೆ.

ನ್ಯೂಜಿಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಪಂದ್ಯದಲ್ಲಿ ದ್ವಿಶತಕ ಗಳಿಸಿದ ಗಿಲ್ ಆರು ದಿನಗಳ ನಂತರ ಇಂದು 112 ರನ್ ಗಳಿಸಿದರು, ಆದರೆ ರೋಹಿತ್ 101 ರನ್ ಬಾರಿಸಿ ಔಟಾದರು. ಇಬ್ಬರ ಅಮೋಘ ಆಟದಿಂದ ಭಾರತ 9 ವಿಕೆಟ್ ಗಳಿಗೆ 385 ರನ್ ಕಲೆ ಹಾಕಿತು. ಕೊಹ್ಲಿ 36, ಹಾರ್ದಿಕ್ 54 , ಶಾರ್ದೂಲ್ ಠಾಕೂರ್ 25 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ, ನ್ಯೂಜಿಲ್ಯಾಂಡ್ ನ ಆರಂಭಿಕ ಆಟಗಾರ ಡೆವೊನ್ ಕಾನ್ವೆ 138 ರನ್ ಗಳಿಸಿದರು. ಆದರೆ ಎಂಟು ಓವರ್‌ಗಳು ಬಾಕಿ ಇರುವಾಗಲೇ ಬೌಲಿಂಗ್‌ ದಾಳಿಗೆ ಸಿಲುಕಿದ ಕಾರಣ ಉಳಿದ ಸಹ ಆಟಗಾರರು ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದರು. 41.2 ಓವರ್ ಗಳಲ್ಲಿ 295 ರನ್ ಗಳನ್ನು ಗಳಿಸಿ ಸೋಲಿಗೆ ಶರಣಾಯಿತು. ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್ ಯಾದವ್ ತಲಾ ಮೂರು ವಿಕೆಟ್ ಪಡೆದರೆ, ಯುಜ್ವೇಂದ್ರ ಚಹಾಲ್ ಎರಡು ವಿಕೆಟ್ ಪಡೆದರು.

ರಾಯ್‌ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಎಂಟು ವಿಕೆಟ್‌ಗಳಿಂದ ಮತ್ತು ಹೈದರಾಬಾದ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು 12 ರನ್‌ಗಳಿಂದ ಗೆದ್ದುಕೊಂಡಿತ್ತು. ತಂಡಗಳು ಮುಂದಿನ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಸೆಣಸಲಿದ್ದು, ಶುಕ್ರವಾರ ರಾಂಚಿಯಲ್ಲಿ ಆರಂಭವಾಗಲಿದೆ.

ಸ್ಕೋರ್‌ಪಟ್ಟಿ

ಭಾರತ 50 ಓವರ್‌, 385/9
ರೋಹಿತ್‌ ಶರ್ಮ ಬಿ ಬ್ರೇಸ್‌ವೆಲ್‌ 101
ಶುಭಮನ್‌ ಗಿಲ್‌ ಸಿ ಕಾನ್ವೇ ಬಿ ಟಿಕ್ನರ್‌ 112
ವಿರಾಟ್‌ ಕೊಹ್ಲಿ ಸಿ ಅಲೆನ್‌ ಬಿ ಡಫಿ 36
ಇಶಾನ್‌ ಕಿಶನ್‌ ರನೌಟ್‌ 17
ಸೂರ್ಯಕುಮಾರ್‌ ಸಿ ಕಾನ್ವೇ ಬಿ ಡಫಿ 14
ಹಾರ್ದಿಕ್‌ ಪಾಂಡ್ಯ ಸಿ ಕಾನ್ವೇ ಬಿ ಡಫಿ 54
ವಾಷಿಂಗ್ಟನ್‌ ಸುಂದರ್‌ ಸಿ ಮಿಚೆಲ್‌ ಬಿ ಟಿಕ್ನರ್‌ 9
ಶಾದೂìಲ್‌ ಠಾಕೂರ್‌ ಸಿ ಲ್ಯಾಥಂ ಬಿ ಟಿಕ್ನರ್‌ 25
ಕುಲದೀಪ್‌ ಯಾದವ್‌ ರನೌಟ್‌ 3
ಉಮ್ರಾನ್‌ ಮಲಿಕ್‌ ಔಟಾಗದೆ 2
ಇತರೆ 12
ವಿಕೆಟ್‌ ಪತನ: 1-212, 2-230, 3-268, 4-284, 5-293, 6-313, 7-367, 8-379, 9-385.

ಬೌಲಿಂಗ್‌
ಜೇಕಬ್‌ ಡಫಿ 10- 0- 100- 3
ಲಾಕೀ ಫ‌ರ್ಗ್ಯುಸನ್‌ 10- 1- 53- 0
ಬ್ಲೇರ್‌ ಟಿಕ್ನರ್‌ 10- 0- 76- 3
ಮಿಚೆಲ್‌ ಸ್ಯಾಂಟ್ನರ್‌ 10 -0- 58- 0
ಡ್ಯಾರಿಲ್‌ ಮಿಚೆಲ್‌ 4- 0 -41- 0
ಮೈಕೆಲ್‌ ಬ್ರೇಸ್‌ವೆಲ್‌ 6 -0- 51 -1

ನ್ಯೂಜಿಲ್ಯಾಂಡ್‌
ಫಿನ್‌ ಅಲೆನ್‌ ಬಿ ಪಾಂಡ್ಯ 0
ಡೇವನ್‌ ಕಾನ್ವೇ ಸಿ ರೋಹಿತ್‌ ಬಿ ಮಲಿಕ್‌ 138
ಹೆನ್ರಿ ನಿಕೋಲ್ಸ್‌ ಎಲ್‌ಬಿಡಬ್ಲ್ಯು ಕುಲದೀಪ್‌ 42
ಡ್ಯಾರಿಲ್‌ ಮಿಚೆಲ್‌ ಸಿ ಇಶಾನ್‌ ಬಿ ಠಾಕೂರ್‌ 24
ಟಾಮ್‌ ಲ್ಯಾಥಂ ಸಿ ಪಾಂಡ್ಯ ಬಿ ಠಾಕೂರ್‌ 0
ಗ್ಲೆನ್‌ ಫಿಲಿಪ್ಸ್‌ ಸಿ ಕೊಹ್ಲಿ ಬಿ ಠಾಕೂರ್‌ 5
ಮೈಕಲ್‌ ಬ್ರೇಸ್‌ವೆಲ್‌ ಸ್ಟಂಪ್ಡ್ ಇಶಾನ್‌ ಬಿ ಕುಲದೀಪ್‌ 26
ಮಿಚೆಲ್‌ ಸ್ಯಾಂಟ್ನರ್‌ ಸಿ ಕೊಹ್ಲಿ ಬಿ ಚಹಲ್‌ 34
ಲಾಕೀ ಫ‌ರ್ಗ್ಯುಸನ್‌ ಸಿ ರೋಹಿತ್‌ ಬಿ ಕುಲದೀಪ್‌ 7
ಜೇಕಬ್‌ ಡಫಿ ಎಲ್‌ಬಿಡಬ್ಲ್ಯು ಚಹಲ್‌ 0
ಬ್ಲೇರ್‌ ಟಿಕ್ನರ್‌ ಔಟಾಗದೆ 0
ಇತರ 19
ಒಟ್ಟು (41.2 ಓವರ್‌ಗಳಲ್ಲಿ ಆಲೌಟ್‌) 295
ವಿಕೆಟ್‌ ಪತನ: 1-0, 2-106, 3-184, 4-184, 5-200, 6-230, 7-269, 8-279, 9-280.

ಬೌಲಿಂಗ್‌
ಹಾರ್ದಿಕ್‌ ಪಾಂಡ್ಯ 6-0-37-1
ವಾಷಿಂಗ್ಟನ್‌ ಸುಂದರ್‌ 6-0-49-0
ಶಾರ್ದೂ ಲ್‌ ಠಾಕೂರ್‌ 6-0-45-3
ಉಮ್ರಾನ್‌ ಮಲಿಕ್‌ 7-0-52-1
ಕುಲದೀಪ್‌ ಯಾದವ್‌ 9-0-62-3
ಯಜುವೇಂದ್ರ ಚಹಲ್‌ 7.2-0-43-2

ಪಂದ್ಯಶ್ರೇಷ್ಠ: ರೋಹಿತ್‌ ಶರ್ಮ
ಸರಣಿಶ್ರೇಷ್ಠ: ಶುಭಮನ್‌ ಗಿಲ್‌

ಟಾಪ್ ನ್ಯೂಸ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

1-sehwag

Cooch Behar Trophy: ಸೆಹವಾಗ್‌ ಪುತ್ರನಿಂದ ದ್ವಿಶತಕ

1-tt

Pro Kabaddi; ವಿಜಯ್‌ ಮಲಿಕ್‌ ಅಮೋಘ ಆಟ: ತೆಲುಗು ಟೈಟಾನ್ಸ್‌ ಗೆ ಗೆಲುವು

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

1-sehwag

Cooch Behar Trophy: ಸೆಹವಾಗ್‌ ಪುತ್ರನಿಂದ ದ್ವಿಶತಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.