ಐಸ್ ಕ್ರಿಕೆಟ್: ಸೆಹ್ವಾಗ್ ಸ್ಫೋಟಕ ಅರ್ಧ ಶತಕ ವ್ಯರ್ಥ
Team Udayavani, Feb 9, 2018, 6:10 AM IST
ಸೇಂಟ್ ಮಾರಿಜ್: ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸ್ಫೋಟಕ ಅರ್ಧಶತಕದ ಹೊರತಾಗಿಯೂ ಡೈಮಂಡ್ಸ್ ಇಲೆವೆನ್ ತಂಡ ಸೇಂಟ್ ಮೊರಿಟ್ಜ್ ಐಸ್ ಕ್ರಿಕೆಟ್ ಟಿ20 ಟೂರ್ನಿಯಲ್ಲಿ ರಾಯಲ್ಸ್ ಇಲೆವೆನ್ ವಿರುದ್ಧ 6 ವಿಕೆಟ್ ಸೋಲುಂಡಿದೆ.
ಈ ಮೂಲಕ ಅಫ್ರಿದಿ ನೇತೃತ್ವದ ರಾಯಲ್ಸ್ ತಂಡ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಸೆಹ್ವಾಗ್ ತಂಡ 164 ರನ್ ಬಾರಿಸಿತ್ತು. ಸೆಹ್ವಾಗ್ 30 ಎಸೆತದಲ್ಲಿ 62 ರನ್ ಬಾರಿಸಿದ್ದರು. ಬೌಂಡರಿ ಮೂಲಕ ಇನಿಂಗ್ಸ್ ಆರಂಭಿಸಿ, ಸಿಕ್ಸರ್ ಮೂಲಕ ಅರ್ಧಶತಕ ದಾಖಲಿಸಿದ್ದರು. ಈ ಮೂಲಕ ಐಸ್ ಕ್ರಿಕೆಟ್ ಇತಿಹಾಸದಲ್ಲಿಯೇ ಮೊದಲ ಅರ್ಧಶತಕ ಸಿಡಿಸಿದ ದಾಖಲೆ ನಿರ್ಮಿಸಿದರು. ಆದರೆ ಗುರಿ ಬೆನ್ನುಹತ್ತಿದ ಅಫ್ರಿದಿ ತಂಡ ಇಂಗ್ಲೆಂಡ್‌ನ ಒವೈಸ್ ಶಾ ಅವರ ಅಜೇಯ 74 ರನ್ ನೆರವಿನಿಂದ 6 ವಿಕೆಟ್ ಗೆಲುವು ಸಾಧಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka sports meet: ಈಜು ಸ್ಪರ್ಧೆ ಆರಂಭ; ದಕ್ಷಿಣ ಕನ್ನಡ ಮೇಲುಗೈ
Under-19 Women’s T20 World Cup: ವೈಷ್ಣವಿ ಹ್ಯಾಟ್ರಿಕ್, 5 ರನ್ನಿಗೆ 5 ವಿಕೆಟ್ ದಾಖಲೆ
Australia Open: 50ನೇ ಬಾರಿಗೆ ಗ್ರ್ಯಾನ್‌ಸ್ಲಾಮ್ ಸೆಮೀಸ್‌ಗೇರಿದ ಜೋಕೋ
Women’s ODI rankings: ಅಗ್ರಸ್ಥಾನಕ್ಕೆ ಮಂಧನಾ ಸನಿಹ
Rinku Singh: ತಂದೆಗೆ ಸೂಪರ್ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್… ಬೆಲೆ ಎಷ್ಟು ಗೊತ್ತಾ?