ಕ್ರಿಕೆಟ್: ಯೂನಿಸಿಸ್ ಬೆಂಗಳೂರು ತಂಡಕ್ಕೆ ಪ್ರಶಸ್ತಿ
Team Udayavani, Mar 31, 2017, 7:49 AM IST
ಮಣಿಪಾಲ: ಮಣಿಪಾಲ ವಿವಿಯ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ನಡೆದ 5ನೇ ಕಾರ್ಪೊರೇಟ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಕೂಟದ ಪ್ರಶಸ್ತಿಯನ್ನು ಬೆಂಗಳೂರಿನ ಯೂನಿಸಿಸ್ ಕಂಪೆನಿ ಗೆದ್ದುಕೊಂಡಿದೆ.
ಫೈನಲ್‌ನಲ್ಲಿ ಇನ್ಫೋಸಿಸ್ ತಂಡವನ್ನು 7 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದ ಯೂನಿಸಿಸ್ ತಂಡವು ಟ್ರೋಫಿ ಮತ್ತು ಒಂದು ಲಕ್ಷ ರೂ. ನಗದನ್ನು ತನ್ನದಾಗಿಸಿಕೊಂಡರೆ ರನ್ನರ್ ಅಪ್ ಇನ್ಫೋಸಿಸ್ 50 ಸಾವಿರ ರೂ. ನಗದು ಪಡೆಯಿತು. ಟೈಟಾನ್, ಎಚ್‌ಪಿ, ಯೂನಿಸಿಸ್, ಇನ್ಫೋಸಿಸ್, ಮಣಿಪಾಲ ವಿವಿ, ಎಂಸಿಎಫ್ ಮಂಗಳೂರು, ಡಿಎನ್‌ಐ, ಚಿಕ್ಕಮಗಳೂರು ಪೊಲೀಸ್ ಸಹಿತ ಹಲವು ತಂಡಗಳು ಭಾಗವಹಿಸಿದ್ದವು. ಸೆಮಿಫೈನಲ್‌ನಲ್ಲಿ ಇನ್ಫೋಸಿಸ್ ತಂಡವು ಚಿಕ್ಕಮಗಳೂರು ಪೊಲೀಸ್ ತಂಡವನ್ನು 37 ರನ್ ಮತ್ತು ಯೂನಿಸಿಸ್ ತಂಡವು ಟೈಟಾನ್ ತಂಡವನ್ನು 2 ವಿಕೆಟ್‌ಗಳಿಂದ ಸೋಲಿಸಿ ಫೈನಲಿಗೇರಿದ್ದವು. ಅಮೋಘ ಬ್ಯಾಟಿಂಗ್ ಮತ್ತು 11 ವಿಕೆಟ್ ಕಿತ್ತ ಯೂನಿಸಿಸ್‌ನ ಶಮೀಕ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.
ಭಾರತ ಅಂಧರ ಕ್ರಿಕೆಟ್ ತಂಡದ ಉಪನಾಯಕ ಪ್ರಕಾಶ್ ಜಯ ರಾಮಯ್ಯ ಈ ಪಂದ್ಯಾಟವನ್ನು ಉದ್ಘಾಟಿಸಿದ್ದರು. ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್‌ನ ಕಾರ್ಯದರ್ಶಿ ಬಾಲಕೃಷ್ಣ ಪರ್ಕಳ, ಪ್ರೊ| ಬಾಲಕೃಷ್ಣ ಮಧ್ದೋಡಿ, ಕ್ರೀಡಾ ನಿರ್ದೇಶಕ ಉಪೇಂದ್ರ ನಾಯಕ್ ಪ್ರಶಸ್ತಿ ವಿತರಿಸಿದರು. ಸಂಘಟಕ ರೆನ್ ಟ್ರೆವರ್ ಡಯಾಸ್ ಉಪಸ್ಥಿತರಿದ್ದರು. ನಿರಂಜನ ಪ್ರಭು ಸ್ವಾಗತಿಸಿದರು. ನಿಖೀತಾ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ
Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್. ಸಂತೋಷ್ ಹೆಗ್ಡೆ
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Kota: ಸಾಸ್ತಾನ ಟೋಲ್: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.