ಶ್ರೀಲಂಕಾ ಪ್ರವಾಸ ಬಳಿಕ ಭಾರತದಲ್ಲಿ ಕ್ರಿಕೆಟ್ ಹಬ್ಬ
Team Udayavani, Aug 2, 2017, 7:30 AM IST
ಕೋಲ್ಕತಾ: ಶ್ರೀಲಂಕಾ ಪ್ರವಾಸ ಮುಗಿಸಿ ಬಂದ ಬಳಿಕ ಟೀಮ್ ಇಂಡಿಯಾ ತವರಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯಲ್ಲಿ ವ್ಯಸ್ತವಾಗಲಿದೆ. ಸೆಪ್ಟಂಬರ್- ಡಿಸೆಂಬರ್ ನಡುವಿನ ಅವಧಿಯಲ್ಲಿ ಒಟ್ಟು 23 ಅಂತಾರಾಷ್ಟ್ರೀಯ ಪಂದ್ಯಗಳನ್ನು ಭಾರತ ಆಯೋಜಿಸಲಿದೆ. ಬಿಸಿಸಿಐ ಮಂಗಳವಾರ ಇದರ ವೇಳಾಪಟ್ಟಿಯನ್ನು ಅಂತಿಮಗೊಳಿಸಿದೆ. ಭಾರತಕ್ಕೆ ಪ್ರವಾಸ ಬರುವ ತಂಡಗಳೆಂದರೆ ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್, ಶ್ರೀಲಂಕಾ.
ಈ ಸರಣಿಗಳ ವೇಳೆ 2 ನೂತನ ಅಂತಾ ರಾಷ್ಟ್ರೀಯ ಕೇಂದ್ರಗಳನ್ನು ಬಿಸಿಸಿಐ ಪರಿಚಯಿ ಸಲಿದೆ. ಕೇರಳದ ತಿರುವನಂತಪುರದ “ಗ್ರೀನ್‌ಫೀಲ್ಡ್ ಇಂಟರ್‌ನ್ಯಾಶನಲ್ ಸ್ಟೇಡಿಯಂ’ ಹಾಗೂ ಅಸ್ಸಾಮ್‌ನ ಗುವಾಹಟಿಯ ಬರ್ಸಾಪಾರಕ್ಕೆ ಈ ಅದೃಷ್ಟ ಲಭಿಸಿದೆ.
ಮೊದಲು ಆಸ್ಟ್ರೇಲಿಯ
“ತವರಿನ ಸರಣಿ’ ಆಸ್ಟ್ರೇಲಿಯದ ಆಗಮನದೊಂದಿಗೆ ಆರಂಭಗೊಳ್ಳುತ್ತದೆ. ಸೆಪ್ಟಂಬರ್-ಅಕ್ಟೋಬರ್ ನಡು ಅವಧಿಯಲ್ಲಿ ಸಾಗುವ ಈ ಸರಣಿ ವೇಳೆ 5 ಏಕದಿನ, 3 ಟಿ-20 ಪಂದ್ಯಗಳನ್ನು ಆಡಲಾಗುವುದು. ಏಕದಿನ ಪಂದ್ಯಗಳು ಚೆನ್ನೈ, ಬೆಂಗಳೂರು, ನಾಗ್ಪುರ, ಇಂದೋರ್ ಮತ್ತು ಕೋಲ್ಕತಾದಲ್ಲಿ ನಡೆಯಲಿವೆ. ಟಿ-20 ಪಂದ್ಯಗಳಿಗಾಗಿ ಹೈದರಾಬಾದ್, ರಾಂಚಿ ಮತ್ತು ಬರ್ಸಾಪಾರವನ್ನು ಆಯ್ಕೆ ಮಾಡಲಾಗಿದೆ.
ಆಸ್ಟ್ರೇಲಿಯ ಸರಣಿಯ ಬಳಿಕ ನ್ಯೂಜಿ ಲ್ಯಾಂಡ್ ಆಗಮನವಾಗಲಿದೆ. ಈ ವೇಳೆ 3 ಏಕದಿನ, 3 ಟಿ-20 ಪಂದ್ಯಗಳನ್ನು ಆಡಲಾಗು ವುದು. ಅಕ್ಟೋಬರ್-ನವೆಂಬರ್‌ನಲ್ಲಿ ಈ ಸರಣಿ ನಡೆಯಲಿದೆ. ಏಕದಿನ ಪಂದ್ಯಗಳ ಆತಿಥ್ಯ ಪುಣೆ, ಮುಂಬಯಿ ಮತ್ತು ಕಾನ್ಪುರಕ್ಕೆ ಲಭಿಸಿದೆ. ಟಿ-20 ಪಂದ್ಯಗಳು ಹೊಸದಿಲ್ಲಿ, ಕಟಕ್, ರಾಜ್‌ಕೋಟ್‌ನಲ್ಲಿ ನಡೆಯಲಿವೆ.
ಅನಂತರದ ಸರದಿ ಶ್ರೀಲಂಕಾದ್ದು. ಇದೊಂದು ಪೂರ್ಣ ಪ್ರಮಾಣದ ಸರಣಿಯಾ ಗಿದ್ದು, ತಲಾ 3 ಟೆಸ್ಟ್, ಏಕದಿನ ಹಾಗೂ ಟಿ-20 ಪಂದ್ಯಗಳನ್ನು ಆಡಲಾಗುವುದು. ಟೆಸ್ಟ್ ಪಂದ್ಯಗಳು ಕೋಲ್ಕತಾ, ನಾಗ್ಪುರ ಮತ್ತು ಹೊಸ ದಿಲ್ಲಿಯಲ್ಲಿ ನಡೆಯಲಿವೆ. ಐಸಿಸಿಯಿಂದ “ಕಳಪೆ ಪಿಚ್’ ಎಂಬ ದೂಷಣೆಗೆ ಗುರಿಯಾದ ಬಳಿಕ ನಾಗ್ಪುರದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಇದಾಗಲಿದೆ.
ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯಗಳು ಧರ್ಮಶಾಲಾ, ಮೊಹಾಲಿ ಮತ್ತು ವಿಶಾಖ ಪಟ್ಟಣದಲ್ಲಿ ಸಾಗಲಿವೆ. ಟಿ-20 ಪಂದ್ಯಗಳ ಆತಿಥ್ಯ ತಿರುವನಂತಪುರಂ, ಇಂದೋರ್ ಮತ್ತು ಮುಂಬಯಿ ಪಾಲಾಗಿದೆ.
ಡಿಸೆಂಬರ್‌ನಲ್ಲಿ ಭಾರತದ ಈ ತವರಿನ ಕ್ರಿಕೆಟ್ ಸರಣಿ ಕಾರ್ಯಕ್ರಮ ಅಂತ್ಯಗೊಳ್ಳಲಿದೆ. ಅನಂತರ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವ ಕಾರ್ಯಕ್ರಮವಿದೆ.
ಎಲ್ಲ ಕೇಂದ್ರಗಳಿಗೂ ಆತಿಥ್ಯ
“ಭಾರತದ ಎಲ್ಲ ಕ್ರಿಕೆಟ್ ಕೇಂದ್ರಗಳಿಗೂ ಪಂದ್ಯಗಳ ಆತಿಥ್ಯ ನೀಡುವುದು ನಮ್ಮ ಯೋಜನೆ. ಹಾಗೆಯೇ 2 ನೂತನ ಕ್ರಿಕೆಟ್ ಕೇಂದ್ರಗಳನ್ನು ಪರಿಚಯಿಸಲಾಗುತ್ತಿದೆ. ಒಂದು ತಿರುವನಂತಪುರದ ಗ್ರೀನ್‌ಫೀಲ್ಡ್ ಇಂಟರ್ ನ್ಯಾಶನಲ್ ಸ್ಟೇಡಿಯಂ, ಮತ್ತೂಂದು ಅಸ್ಸಾಮ್‌ನ ಬರ್ಸಾಪಾರ ಸ್ಟೇಡಿಯಂ’ ಎಂದು ಬಿಸಿಸಿಐ ಮಂಗಳವಾರದ ತವರಿನ ಸರಣಿಯ ವೇಳಾಪಟ್ಟಿ ಪ್ರಕಟನೆಯ ಬಳಿಕ ಮಾಧ್ಯಮಗಳಿಗೆ ತಿಳಿಸಿತು.
ರಣಜಿ ಹಳೆ ಮಾದರಿಗೆ
ರಣಜಿ ಟ್ರೋಫಿ ಪಂದ್ಯಾವಳಿಯ ತಟಸ್ಥ ಮಾದರಿ ಕೇವಲ ಒಂದೇ ಋತುವಿಗೆ ಮುಗಿದಿದೆ. ಇದನ್ನು ಹಿಂದಿನಂತೆ ತವರಿನ ಹಾಗೂ ಹೊರಗಿನ ಮಾದರಿಗೆ ಪರಿವರ್ತಿಸಲಾಗಿದೆ. ಸೌರವ್ ಗಂಗೂಲಿ ನೇತೃತ್ವದ ಬಿಸಿಸಿಐ ತಾಂತ್ರಿಕ ಸಮಿತಿ ಮಂಗಳವಾರ ಈ ಬದಲಾವಣೆಯನ್ನು ಪ್ರಕಟಿಸಿತು. ಇಲ್ಲಿ ಸಂಭವಿಸಿದ ಇನ್ನೊಂದು ಬದಲಾವಣೆಯೆಂದರೆ ತಂಡಗಳನ್ನು ಮೂರರ ಬದಲು 4 ವಿಭಾಗಗಳಾಗಿ ವಿಂಗಡಿಸಿದ್ದು. ಪ್ರತಿಯೊಂದು ವಿಭಾಗದಲ್ಲಿ ಏಳರಂತೆ ಒಟ್ಟು 28 ತಂಡಗಳು ಸ್ಪರ್ಧಿಸಲಿವೆ. 2017-18ರ ರಣಜಿ ಋತು ಆ. 6ರಿಂದ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
IPL 2025: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.