ಭಾರತದ ವನಿತಾ ಕ್ರಿಕೆಟ್ ಆಟಗಾರ್ತಿ ಪ್ರಿಯಾ ಪೂನಿಯಾ ತಾಯಿ ಕೋವಿಡ್ ಗೆ ಬಲಿ!
Team Udayavani, May 18, 2021, 5:01 PM IST
ಜೈಪುರ: ಭಾರತೀಯ ವನಿತಾ ಕ್ರಿಕೆಟ್ ತಂಡದ ಆಟಗಾರ್ತಿ ಪ್ರಿಯಾ ಪೂನಿಯಾ ಅವರ ತಾಯಿ ಕೋವಿಡ್ 19 ಸೋಂಕಿನಿಂದ ಮೃತಪಟ್ಟಿದ್ದಾರೆ.
24 ವರ್ಷದ ಮಹಿಳಾ ಆಟಗಾರ್ತಿ ಪ್ರಿಯಾ ಈ ಬಗ್ಗೆ ತನ್ನಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. “ಎಂದಿಗೂ ನಾನು ಬಲಿಷ್ಠವಾಗಿ ಇರಬೇಕು ಎಂದು ನೀನು ಯಾವತ್ತೂ ಯಾಕೆ ಹೇಳುತ್ತಿದ್ದೆ ಎಂದು ಇವತ್ತು ತಿಳಿಯಿತು. ಬಹುಶಃ ನಿನ್ನನ್ನು ಅಗಲಿ ಇರಬೇಕಾದ ಪರಿಸ್ಥಿತಿಗೆ ನಾನು ಕಠಿಣವಾಗಿರಬೇಕು ಎಂದು ನಿನಗೆ ಗೊತ್ತಿತ್ತು. ನೀನು ಎಷ್ಟೇ ದೂರವಿದ್ದರೂ ನಾನು ಎಂದಿಗೂ ನಿನ್ನನ್ನು ಪ್ರೀತಿಸುತ್ತೇನೆ” ಎಂದು ಪ್ರಿಯಾ ಪೂನಿಯಾ ಬರೆದುಕೊಂಡಿದ್ದಾರೆ.
ಮಹಿಳಾ ತಂಡದ ಮತ್ತೋರ್ವ ಆಟಗಾರ್ತಿ ಕನ್ನಡತಿ ವೇದಾ ಕೃಷ್ಣಮೂರ್ತಿ ಅವರು ಕೋವಿಡ್ ಸೋಂಕಿನಿಂದ ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡಿದ್ದಾರೆ. ಮಾಜಿ ಆಟಗಾರ ಆರ್.ಪಿ.ಸಿಂಗ್ ಮತ್ತು ಪಿಯೂಷ್ ಚಾವ್ಲಾ ಅವರು ಸೋಂಕಿನಿಂದ ತಂದೆಯನ್ನು ಕಳೆದುಕೊಂಡಿದ್ದರು.
ಇದನ್ನೂ ಓದಿ:ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿ ಶಿವಸುಂದರ್ ದಾಸ್ ಆಯ್ಕೆ
ವನಿತಾ ಕ್ರಿಕೆಟ್ ತಂಡ ಮೇ. 19ರಿಂದ ಮುಂಬೈನಲ್ಲಿ ಕ್ವಾರಂಟೈನ್ ಗೆ ಒಳಗಾಗಲಿದೆ. ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಪುರುಷರ ತಂಡದ ಜೊತೆ ಪ್ರಯಾಣ ಬೆಳೆಸಲಿದೆ.
ಇಂಗ್ಲೆಂಡ್ ವಿರುದ್ಧ ವನಿತಾ ತಂಡ ಒಂದು ಟೆಸ್ಟ್, ಮೂರು ಟಿ 20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ತಂಡಕ್ಕೆ ನೂತನ ಕೋಚ್ ಆಗಿ ರಮೇಶ್ ಪವಾರ್ ಅವರು ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ. ಶಿವಸುಂದರ್ ದಾಸ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.