ಗೆಳತಿ ಊರ್ವಶಿ ವಾಟ್ಸಅಪ್ ಸಂಖ್ಯೆ ಬ್ಲಾಕ್ ಮಾಡಿದ ಪಂತ್?
ಪರಸ್ಪರ ಕಿತ್ತಾಡಿಕೊಂಡು ದೂರವಾದ ಪಂತ್-ಊರ್ವಶಿ: ಮಾಧ್ಯಮ ವರದಿ
Team Udayavani, Jan 11, 2020, 7:54 PM IST
ಮುಂಬೈ: ಗೆಳತಿ ಇಶಾ ನೆಗಿ ಜತೆ ಹೊಸ ವರ್ಷದ ಆರಂಭದಲ್ಲಿ ಭಾರತ ಕ್ರಿಕೆಟಿಗ ರಿಷಭ್ ಪಂತ್ ಕಾಣಿಸಿಕೊಂಡಿದ್ದ ಬೆನ್ನಲ್ಲೇ ಮತ್ತೋರ್ವ ಗೆಳತಿ ಬಾಲಿವುಡ್ ನಟಿ ಊರ್ವಶಿ ರೌಟೇಲ ಮೊಬೈಲ್ ವಾಟ್ಸಅಪ್ ಸಂಖ್ಯೆಯನ್ನು ಪಂತ್ ಬ್ಲಾಕ್ ಮಾಡಿದ್ದಾರೆ ಎನ್ನಲಾಗಿದೆ.
ಸ್ವತಃ ಊರ್ವಶಿ ಆಪ್ತ ಮೂಲಗಳು ವಿಷಯವನ್ನು ಖಚಿತಪಡಿಸಿವೆ. ಕೆಲವು ತಿಂಗಳ ಹಿಂದೆ ರಿಷಭ್ ಪಂತ್ ಬಾಲಿವುಡ್ ನಟಿ ಊರ್ವಶಿ ಜತೆ ಕಾಣಿಸಿಕೊಂಡಿದ್ದರು. ಇಬ್ಬರು ಡೇಟಿಂಗ್‌ನಲ್ಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಆನಂತರದ ದಿನದಲ್ಲಿ ಪಂತ್ ಇಶಾ ನೆಗಿ ಜತೆ ಹಿಮ ಪರ್ವತವೊಂದರಲ್ಲಿ ಹೊಸ ವರ್ಷವನ್ನು ಆಚರಿಸಿದ್ದರು. ಸದ್ಯ ಪಂತ್ ಕಳಪೆ ಫಾರ್ಮ್ನಲ್ಲಿದ್ದಾರೆ. ಹೀಗಿರುವಾಗ ಆಟದ ಹೊರತಾಗಿ ಪಂತ್ ಈ ಫೋಟೊ ಪ್ರಕಟಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿತ್ತು. ಮೂಲಗಳ ಮಾಹಿತಿ ಪ್ರಕಾರ ಪಂತ್ ಜತೆ ಮಾತನಾಡಲು ಊರ್ವಶಿ ಪ್ರಯತ್ನಿಸಿದ್ದಾರೆ. ಆದರೆ ಊರ್ವಶಿ ಜತೆ ರಿಷಭ್ ಪಂತ್ ಮಾತನಾಡಲು ಇಷ್ಟಪಟ್ಟಿಲ್ಲ. ಹೀಗಾಗಿ ಇಬ್ಬರ ನಡುವಿನ ಸಂಬಂಧಕ್ಕೆ ಫುಲ್ ಸ್ಟಾಪ್ ಬಿದ್ದಿದೆ ಎನ್ನಲಾಗಿದೆ. ಲಂಕಾ ವಿರುದ್ಧದ ನಡೆದ 3ನೇ ಟಿ20 ಪಂದ್ಯದಲ್ಲಿ ಪಂತ್‌ಗೆ ಆಡುವ ಹನ್ನೊಂದರಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಇವರ ಬದಲಿಗೆ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.