ಪತ್ನಿಗೆ ಹಿಂಸೆ: ಕ್ರಿಕೆಟಿಗ ಶಮಿ ವಿರುದ್ಧ ಆರೋಪಪಟ್ಟಿ
Team Udayavani, Mar 15, 2019, 12:40 AM IST
ಕೋಲ್ಕತಾ: ಭಾರತ ಕ್ರಿಕೆಟ್ ತಂಡದ ಪ್ರಧಾನ ವೇಗಿ ಮೊಹಮ್ಮದ್ ಶಮಿ ವಿರುದ್ಧ ಕೋಲ್ಕತಾ ಪೊಲೀಸರು ಅಲಿಪುರ ನ್ಯಾಯಾಲಯದಲ್ಲಿ ಆರೋಪಪಟ್ಟಿ ದಾಖಲಿಸಿದ್ದಾರೆ. ಪತ್ನಿ ಹಸಿನ್ ಜಹಾನ್ ಒಂದು ವರ್ಷದ ಹಿಂದೆ ಮೊಹಮ್ಮದ್ ಶಮಿ ವಿರುದ್ಧ ಸರಣಿ ಆರೋಪ ಮಾಡಿದ್ದರು. ಅತ್ಯಾಚಾರ (ಶಮಿ ಸಹೋದರನಿಂದ), ದೈಹಿಕ ಹಲ್ಲೆ, ಕೊಲೆಯತ್ನ ದೂರು ದಾಖಲಿಸಿದ್ದರು. ಮಾತ್ರವಲ್ಲ, ಮ್ಯಾಚ್ ಫಿಕ್ಸಿಂಗ್ ಆರೋಪವನ್ನೂ ಮಾಡಿದ್ದರು. ಇದಾಗಿ ಒಂದು ವರ್ಷದ ಬಳಿಕ ಕೋಲ್ಕತಾ ಪೊಲೀಸರು ಶಮಿ ವಿರುದ್ಧ ಈ ಆರೋಪಪಟ್ಟಿ ಸಲ್ಲಿಸಿದ್ದಾರೆ.
ಕಳೆದ ವರ್ಷ ಶಮಿ ಕುಟುಂಬದ ನಾಲ್ವರು ಸದಸ್ಯರ ವಿರುದ್ಧ ಹಸಿನ್ ಜಹಾನ್ ಕೋಲ್ಕತಾದಲ್ಲಿ ದೂರು ದಾಖಲಿದ್ದರು. ಆಗ ಭಾರೀ ವಾದ ವಿವಾದಗಳಾಗಿದ್ದವು. ಶಮಿ ವೃತ್ತಿಜೀವನಕ್ಕೆ ಧಕ್ಕೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಶಮಿ ಭಾರತ ತಂಡದಲ್ಲಿ ತಮ್ಮ ಆಟ ಮುಂದುವರಿಸಿದ್ದಾರೆ.
ಸದ್ಯ ಹಸಿನ್ ಜಹಾನ್ ಆರೋಪಗಳ ತೀವ್ರತೆ ಕಡಿಮೆಯಾಗಿದ್ದು, ದೂರುಗಳನ್ನು ಗೃಹ ಹಿಂಸೆ ಮತ್ತು ಲೈಂಗಿಕ ಕಿರುಕುಳಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಕೊಲೆಯತ್ನ, ಅತ್ಯಾಚಾರ, ಲೈಂಗಿಕ ಕಿರುಕುಳ ಮಾತ್ರ ಆರೋಪಪಟ್ಟಿಯಲ್ಲಿದೆ ಎಂದು ಶಮಿ ವಕೀಲರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
ಕೊಹ್ಲಿ-ರೋಹಿತ್ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
BPL;ಅಂತಿಮ ಓವರಿನಲ್ಲಿ 30 ರನ್ ಸಿಡಿಸಿದ ನುರುಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.