ಜನಾಂಗೀಯ ನಿಂದನೆ: ಮಂಡಿಯೂರಲು ಡಿ ಕಾಕ್ ನಕಾರ!
Team Udayavani, Oct 27, 2021, 5:30 AM IST
ದುಬಾೖ: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಜನಾಂಗೀಯ ತಾರತಮ್ಯದ ವಿರುದ್ಧ ಧ್ವನಿಯೆತ್ತಲು ಕ್ರಿಕೆಟ್ ತಂಡಗಳು ನಿರ್ಧರಿಸಿವೆ.
ಆದರೆ ಮಂಗಳವಾರ ವಿಂಡೀಸ್-ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಗೊಂದಲ ಉದ್ಭವಿಸಿದೆ. ದಕ್ಷಿಣ ಆಫ್ರಿಕಾ ಆಟಗಾರ ಕ್ವಿಂಟನ್ ಡಿ ಕಾಕ್ ಮಂಡಿಯೂರಿ ಕುಳಿತು ವರ್ಣಭೇದವನ್ನು ವಿರೋಧಿಸಲು ತಿರಸ್ಕರಿಸಿದ್ದಾರೆ. ಮಾತ್ರವಲ್ಲ, ಪಂದ್ಯದಿಂದಲೇ ಹೊರಗುಳಿದರು!
ಇದರಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತಬ್ಬಿಬ್ಟಾಗಿದೆ. ಮುಂದೇನು ಕ್ರಮ ತೆಗೆದುಕೊಳ್ಳ ಬೇಕೆಂದು ಯೋಚಿಸುತ್ತಿದೆ.
ಕೂಟದ ಮೊದಲ ದಿನವಾದ ಶನಿವಾರ ಇಂಗ್ಲೆಂಡ್-ಇಂಡೀಸ್ ತಂಡಗಳು ಮಂಡಿಯೂರಿ ವರ್ಣ ಭೇದವನ್ನು ವಿರೋಧಿಸಿದ್ದವು. ರವಿವಾರ ಭಾರತ-ಪಾಕಿಸ್ಥಾನ ಆಟಗಾರರೂ ಇದನ್ನು ಅನುಸರಿ ಸಿದ್ದರು. ಆದರೆ ಮಂಗಳವಾರದ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಡಿ ಕಾಕ್ ಇದನ್ನು ನಿರಾಕರಿಸಿದರು.
ಇದನ್ನೂ ಓದಿ:ಲಾಡ್ಜ್ ಗೆ ಕರೆದೊಯ್ದು ಆತ್ಯಾಚಾರ: ಆರೋಪಿಸಿ ಬಂಧನ
ಹಿಂದೆಯೂ ವಿರೋಧ
ಈ ಹಿಂದೆಯೂ ಡಿಕಾಕ್ ಇದನ್ನು ವಿರೋಧಿಸಿದ್ದರು. “ವಿರೋಧ ಮಾಡುವುದು ಪ್ರತಿಯೊಬ್ಬರ ನಿರ್ಧಾರವಾಗಬೇಕು. ಅದನ್ನು ಯಾರ ಮೇಲೂ ಯಾರೂ ಒತ್ತಾಯಪೂರ್ವಕವಾಗಿ ಹೇರುವಂತಿಲ್ಲ. ಪ್ರತಿಯೊಂದನ್ನೂ ನಾನು ನಿರ್ಧರಿಸುವುದು ಹೀಗೆ’ ಎಂದು ಹೇಳಿಕೊಂಡಿದ್ದರು. ಈ ನಿಲುವನ್ನೇ ಡಿ ಕಾಕ್ ಈಗ ಮುಂದುವರಿಸಿದ್ದಾರೆ.
ಆದರೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ, ಆಟಗಾರರೆಲ್ಲರಿಗೂ ಜನಾಂಗೀಯ ನಿಂದನೆಯನ್ನು ವಿರೋಧಿಸಬೇಕೆಂದು ಆದೇಶ ನೀಡಿದೆ. ಆ ದೇಶ ಹಿಂದೆಯೂ ವರ್ಣಭೇದದ ಇಕ್ಕಟ್ಟಿಗೆ ಸಿಲುಕಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.