CSK ತವರಿನ ಲಾಭದ ನಿರೀಕ್ಷೆಯಲ್ಲಿ:ಅಜೇಯ ಕೋಲ್ಕತಾ ನೈಟ್‌ರೈಡರ್ ಎದುರಾಳಿ
Team Udayavani, Apr 8, 2024, 7:00 AM IST
ಚೆನ್ನೈ: ಪ್ರಸಕ್ತ ಸೀಸನ್‌ನಲ್ಲಿ ಉತ್ತಮ ಆರಂಭ ಪಡೆದಿದ್ದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸದ್ಯ ಕವಲುದಾರಿಯಲ್ಲಿ ನಿಂತಿದೆ. ತವರಿನಂಗಳದ ಎರಡೂ ಪಂದ್ಯಗಳನ್ನು ಗೆದ್ದು, ತವರಿನಾಚೆಯ ಎರಡೂ ಮುಖಾಮುಖೀಗಳಲ್ಲಿ ಮುಗ್ಗರಿಸಿದೆ. ಇದೀಗ ಮತ್ತೆ ಚೆನ್ನೈಯಲ್ಲಿ ಆಡಲಿಳಿಯಲಿದ್ದು, ಮರಳಿ ಗೆಲುವಿನ ಟ್ರ್ಯಾಕ್ ಏರುವ ಸನ್ನಾಹದಲ್ಲಿದೆ. ಆದರೆ ಎದುರಾಳಿ ತಂಡ “ಪವರ್-ಪ್ಯಾಕ್ಡ್’ ಕೋಲ್ಕತಾ ನೈಟ್‌ರೈಡರ್ ಎಂಬುದು ತುಸು ಆತಂಕದ ಸಂಗತಿ.
ಚೆನ್ನೈ ತನ್ನ ಮೊದಲೆರಡು ಪಂದ್ಯ ಗಳನ್ನು ಆರ್‌ಸಿಬಿ ಮತ್ತು ಗುಜರಾತ್ ವಿರುದ್ಧ ತವರಲ್ಲೇ ಗೆದ್ದು ಭಾರೀ ಭರವಸೆ ಮೂಡಿಸಿತ್ತು. ಆದರೆ ಚೆನ್ನೈಯಿಂದ ಹೊರಗೆ ಕಾಲಿಟ್ಟಿದ್ದೇ ಸೈ, ಸೋಲಿನ ಸುಳಿಗೆ ಸಿಲುಕಿತು. ಡೆಲ್ಲಿ ವಿರುದ್ಧ ವಿಶಾಖಪಟ್ಟಣದಲ್ಲಿ ಹಾಗೂ ಎಸ್‌ಆರ್‌ಎಚ್ ವಿರುದ್ಧ ಹೈದರಾಬಾದ್‌ನಲ್ಲಿ ಕ್ರಮವಾಗಿ 20 ರನ್ ಹಾಗೂ 6 ವಿಕೆಟ್ ಅಂತರದ ಸೋಲನುಭವಿಸಿತು.
ನಾಯಕ ಋತುರಾಜ್ ಗಾಯ ಕ್ವಾಡ್ ಮತ್ತು ರಚಿನ್ ರವೀಂದ್ರ ಕಳೆದೆರಡು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಪವರ್ ಪ್ಲೇಯಲ್ಲಿ ಸಾಕಷ್ಟು ರನ್ ಪೇರಿಸಲು ಸಾಧ್ಯವಾಗಲಿಲ್ಲ. ಅಜಿಂಕ್ಯ ರಹಾನೆ, ಶಿವಂ ದುಬೆ, ರವೀಂದ್ರ ಜಡೇಜ ಅವರನ್ನೊಳಗೊಂಡ ಮಧ್ಯಮ ಕ್ರಮಾಂಕದ ಪ್ರದರ್ಶನ ಸಾಲದು. ಇದ್ದುದರಲ್ಲಿ ದುಬೆ ಬ್ಯಾಟಿಂಗ್ ಪರಾÌಗಿಲ್ಲ. 148 ರನ್ ಗಳಿಸಿರುವ ಅವರೇ ಚೆನ್ನೈ ತಂಡದ ಟಾಪ್ ಸ್ಕೋರರ್. 20 ವರ್ಷದ ಯುವ ಬ್ಯಾಟರ್ ಸಮೀರ್ ರಿಝಿÌ ನಿರೀಕ್ಷಿತ ಆಟವಾಡಿಲ್ಲ. ಹೀಗಾಗಿ ಹೈದರಾಬಾದ್ ಎದು ರಿನ ಕಳೆದ ಪಂದ್ಯದಿಂದ ಹೊರ ಗುಳಿಯಬೇಕಾಯಿತು.
ಚೆನ್ನೈ ಬೌಲಿಂಗ್ ವಿಭಾಗದಲ್ಲೂ ಸಮಸ್ಯೆ ಎದುರಿಸುತ್ತಿದೆ. ಪೇಸರ್‌ಗಳಾದ ಮುಸ್ತಫಿಜುರ್ ರೆಹಮಾನ್ ಮತ್ತು ಮತೀಶ ಪತಿರಣ ನಾನಾ ಕಾರಣಗಳಿಂದ ತಂಡದಿಂದ ಬೇರ್ಪಟ್ಟಿದ್ದಾರೆ.
ನಾನ್‌ಸ್ಟಾಪ್ ನಾರಾಯಣ!
ಕೆಕೆಆರ್ ಬ್ಯಾಟಿಂಗ್ ಸರದಿಯುದ್ದಕ್ಕೂ ಬಿಗ್ ಹಿಟ್ಟರ್‌ಗಳನ್ನು ಒಳಗೊಂಡಿರುವ ತಂಡ. ಅದರಲ್ಲೂ ಸುನೀಲ್ ನಾರಾಯಣ್ ನಾನ್‌ಸ್ಟಾಪ್ ಓಟ ಬೆಳೆಸಿ ಎದುರಾಳಿಗಳನ್ನು ಬೆಚ್ಚಿಬೀಳಿಸುತ್ತಿದ್ದಾರೆ. ಇವರ ಸ್ಫೋಟಕ ಬ್ಯಾಟಿಂಗ್ ಕೆಕೆಆರ್ ಪಾಲಿಗೊಂದು ಬಿಗ್ ಬೋನಸ್. ಜತೆಗೆ ಸಾಲ್ಟ್, ರಘುವಂಶಿ, ರಸೆಲ್, ರಿಂಕು, ರಮಣ್‌ದೀಪ್, ಅಯ್ಯರ್‌ದ್ವಯರು… ಇವರಲ್ಲಿ ಇಬ್ಬರು ಸಿಡಿದರೂ ಎದುರಾಳಿ ತಂಡದ ಪರಿಸ್ಥಿತಿ ಬಿಗಡಾಯಿಸಲಿದೆ. ಡೆಲ್ಲಿ ಎದುರಿನ ಕಳೆದ ಪಂದ್ಯದಲ್ಲಿ ಕೋಲ್ಕತಾ 7ಕ್ಕೆ 272 ರನ್ ಪೇರಿಸಿದ್ದನ್ನು ಮರೆಯುವಂತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ
Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ
Pegasus spyware ಬಗ್ಗೆ ಸುಪ್ರೀಂಕೋರ್ಟ್ ತನಿಖೆ ನಡೆಸಲಿ: ಸುರ್ಜೇವಾಲಾ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.