ಸಿಎಸ್ಕೆ ಜೊಹಾನ್ಸ್ಬರ್ಗ್ ತಂಡದಲ್ಲಿ ಡು ಪ್ಲೆಸಿಸ್
Team Udayavani, Aug 21, 2022, 10:23 PM IST
ಜೊಹಾನ್ಸ್ಬರ್ಗ್: ಕ್ರಿಕೆಟ್ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಾಲಕತ್ವದ ಜೊಹಾನ್ಸ್ಬರ್ಗ್ ಫ್ರಾಂಚೈಸಿ ಫಾ ಡು ಪ್ಲೆಸಿಸ್ ಅವರಿಗೆ ಬಲೆ ಬೀಸುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಕೆಲವು ದಿನಗಳಿಂದ ಸುದ್ದಿ ಹರಿದಾಡುತ್ತಲೇ ಇತ್ತಾದರೂ ರವಿವಾರ ಇದು ದೃಢಪಟ್ಟಿದೆ.
ಮೊಯಿನ್ ಅಲಿ, ಮಹೀಶ್ ತೀಕ್ಷಣ, ರೊಮಾರಿಯೊ ಶೆಫರ್ಡ್, ಗೆರಾಲ್ಡ್ ಕೋಟ್ಝಿ ಕೂಡ ಜೊಹಾನ್ಸ್ಬರ್ಗ್ ತಂಡದ ಪಾಲಾಗಿದ್ದಾರೆ. ಇವರಲ್ಲಿ ಅಲಿ ಮತ್ತು ತೀಕ್ಷಣ ಪ್ರಸ್ತುತ ಸಿಎಸ್ಕೆ ತಂಡದ ಸದಸ್ಯರಾಗಿದ್ದಾರೆ. ಸತತವಾಗಿ ಸಿಎಸ್ಕೆ ಪರ ಆಡುತ್ತಲೇ ಬಂದ ಡು ಪ್ಲೆಸಿಸ್ ಅವರನ್ನು ಮೆಗಾ ಹರಾಜಿನ ಸಮಯದಲ್ಲಿ ಉಳಿಸಿಕೊಂಡಿರಲಿಲ್ಲ. ಅವರು ಆರ್ಸಿಬಿ ತಂಡಕ್ಕೆ ಸೇರ್ಪಡೆ ಗೊಂಡು ನಾಯಕರೂ ಆದರು. ಇದೀಗ ದಕ್ಷಿಣ ಆಫ್ರಿಕಾ ಲೀಗ್ನಲ್ಲಿ ಮತ್ತೆ ಸಿಎಸ್ಕೆ ಒಡೆತನದ ತಂಡಕ್ಕೆ ಆಪ್ತರಾಗಿದ್ದಾರೆ.
ರೊಮಾರಿಯೊ ಶೆಫರ್ಡ್ ಕೆರಿಬಿಯನ್ ಕ್ರಿಕೆಟ್ ಲೀಗ್ನಲ್ಲಿ ಗಯಾನಾ ಅಮೆಜಾನ್ ವಾರಿಯರ್ ಹಾಗೂ ಐಪಿಎಲ್ನಲ್ಲಿ ಸನ್ರೈಸರ್ ಹೈದರಾಬಾದ್ ತಂಡದ ಸದಸ್ಯರಾಗಿದ್ದಾರೆ.
ಗೆರಾಲ್ಡ್ ಕೋಟ್ಝಿ ದಕ್ಷಿಣ ಆಫ್ರಿಕಾದವರೇ ಆಗಿದ್ದು, ಇನ್ನೂ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿಲ್ಲ. ಡು ಪ್ಲೆಸಿಸ್ ಅವರ ಶಿಫಾರಸಿನ ಮೇರೆಗೆ ಇವರನ್ನು ಸೇರಿಸಿಕೊಳ್ಳಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ
Womens Cricket: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್
Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹವಾ
Womens T20 World Cup: 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿ ಫೈನಲ್ಗೇರಿದ ದ.ಆಫ್ರಿಕಾ
Virat Kohli ಸಮಸ್ಯೆಗಳನ್ನು ಜಟಿಲಗೊಳಿಸಿದ್ದಾರೆ!; ಖ್ಯಾತ ಕ್ರಿಕೆಟ್ ವಿಶ್ಲೇಷಕ ಟೀಕೆ
MUST WATCH
ಹೊಸ ಸೇರ್ಪಡೆ
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.