ಐಪಿಎಲ್ ನಿಂದ ರೈನಾ ಔಟ್: ಅಭಿಮಾನಿಗಳಿಗೆ ಬಿಗ್ ಶಾಕ್ !
Team Udayavani, Aug 29, 2020, 12:33 PM IST
ಮಣಿಪಾಲ: ಸಿಎಸ್ ಕೆ ಬ್ಯಾಟ್ಸ್‌ಮನ್ ಸುರೇಶ್ ರೈನಾ ವೈಯಕ್ತಿಕ ಕಾರಣ ನೀಡಿ ಐಪಿಎಲ್ ಪಂದ್ಯಾಟದಿಂದ ದೂರ ಸರಿದಿದ್ದಾರೆ.
ಅನಿವಾರ್ಯ ಕಾರಣಗಳಿಂದಾಗಿ ಈ ಬಾರಿಯ ಪಂದ್ಯಾವಳಿಯಲ್ಲಿ ಭಾಗವಹಿಸಲಾಗುವುದಿಲ್ಲ ಎಂದಿದ್ದು ಮನೆಗೆ ಮರಳಿದ್ದಾರೆ.
ರೈನಾ ಐಪಿಎಲ್ ನ ಎಲ್ಲಾ ಪಂದ್ಯಗಳಿಂದ ಹೊರಗುಳಿಯಲಿರುವ ನಿರ್ಧಾರವನ್ನು ತಂಡದ ಸಿಇಒ ಕೆ.ಎಸ್.ವಿಶ್ವನಾಥನ್ ಖಚಿತಪಡಿಸಿದ್ದಾರೆ.
ರೈನಾ ಅವರ ಈ ನಿರ್ಧಾರಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಸಂಪೂರ್ಣ ಬೆಂಬಲ ನೀಡಿದೆ. ಆದರೆ ರೈನಾ ಹಿಂದಿರುಗಲು ನಿಖರವಾದ ಕಾರಣ ಸ್ಪಷ್ಟವಾಗಿಲ್ಲ.ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್‌ನ 11 ಮಂದಿ ಸಿಬ್ಬಂದಿ ಮತ್ತು ಒಬ್ಬ ಬೌಲರ್‌ಗೆ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆ ಆತಂಕ ಸೃಷ್ಟಿಮಾಡಿತ್ತು. ಇದು ಚೆನ್ನೈ ಗೆ ದೊಡ್ದ ಹಿನ್ನಡೆ ಎಂದು ಹೇಳಲಾಗಿತ್ತು. ಇದೀಗ ತಂಡದ ಸ್ಟಾರ್ ಆಟಗಾರ ಹೊರಗುಳಿದಿದ್ದು, ತಂಡಕ್ಕೆ ಬಿಗ್ ಶಾಕ್ ನೀಡಿದೆ.
Suresh Raina has returned to India for personal reasons and will be unavailable for the remainder of the IPL season. Chennai Super Kings offers complete support to Suresh and his family during this time.
KS Viswanathan
CEO— Chennai Super Kings (@ChennaiIPL) August 29, 2020
ನಿನ್ನೆ ಪಾಸಿಟಿವ್ ಬಂದಿದ್ದ ವೇಗಿ ದೀಪಕ್ ಚಹರ್ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಇದೀಗ ರೈನಾ ಅವರ ವಾಪಸಾತಿ ಚೆನ್ನೈ ಪ್ರಾಂಚೈಸಿಗೆ ಇನ್ನೊಂದು ಶಾಕ್ ಆಗಿದೆ. ಅಭಿಮಾನಿಗಳಿಗೆ ತುಂಬಾ ನಿರಾಸೆಯಾಗಿದೆ.
ರೈನಾ ಇತ್ತೀಚಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.