ರಾಹುಲ್ ಆಸ್ಪೋಟ, ಬೆಚ್ಚಿ ಬಿದ್ದ ಚೆನ್ನೈ
Team Udayavani, Oct 8, 2021, 7:59 AM IST
ದುಬೈ: ತನ್ನ ಕಟ್ಟಕಡೆಯ ಲೀಗ್ ಪಂದ್ಯದಲ್ಲಿ ಚೆನ್ನೈಯನ್ನು 6 ವಿಕೆಟ್‌ಗಳಿಂದ ಪಂಜಾಬ್ ಕಿಂಗ್ಸ್ ತಂಡ ಸೋಲಿಸಿದೆ. ದೊಡ್ಡ ಅಂತರದಲ್ಲಿ ಗೆದ್ದು ರನ್‌ರೇಟ್ ಹೆಚ್ಚಿಸಿಕೊಳ್ಳಬೇಕಿದ್ದ ಪಂಜಾಬ್, ಗುರುವಾರದ ಮೊದಲ ಪಂದ್ಯದಲ್ಲಿ ಈ ಯೋಜನೆಯಲ್ಲಿ ಬಹುತೇಕ ಯಶಸ್ಸು ಸಾಧಿಸಿತು.
ಚೆನ್ನೈಯನ್ನು 20 ಓವರ್‌ಗಳಲ್ಲಿ 6 ವಿಕೆಟಿಗೆ 134 ರನ್‌ಗಳಿಗೆ ನಿಯಂತ್ರಿಸಿದ ಪಂಜಾಬ್, ಬಳಿಕ ಕೇವಲ 13 ಓವರ್ ಗಳಲ್ಲಿ 4 ವಿಕೆಟಿಗೆ 139 ರನ್ ಬಾರಿಸಿ ತನ್ನ 6ನೇ ಗೆಲುವನ್ನು ದಾಖಲಿಸಿತು. ಈ ಸೋಲಿನಿಂದ ಅಗ್ರಸ್ಥಾನಕ್ಕೆ ನೆಗೆಯುವ ಧೋನಿ ಪಡೆಯ ಯೋಜನೆ ವಿಫಲಗೊಂಡಿತು.
ಈ ಪಂದ್ಯವನ್ನು 10-11 ಓವರ್‌ಗಳಲ್ಲಿ ಅಥವಾ 7-8 ವಿಕೆಟ್‌ಗಳ ಅಂತರದಲ್ಲಿ ಗೆದ್ದದ್ದಿ ದ್ದರೆ ಪಂಜಾಬ್ ತಂಡದ ರನ್‌ರೇಟ್‌ನಲ್ಲಿ ಉತ್ತಮ ಪ್ರಗತಿಯಾಗಿ ಅದು “ಪ್ಲಸ್’ಗೆ ಏರುತ್ತಿತ್ತು. ಸದ್ಯ ಮೈನಸ್‌ನಲ್ಲೇ ಉಳಿದಿದೆ. ಆದರೆ ಅಂಕಪಟ್ಟಿಯಲ್ಲಿ ಮುಂಬೈಯನ್ನು ಹಿಂದಿಕ್ಕುವಲ್ಲಿ ಪಂಜಾಬ್ ಯಶಸ್ವಿಯಾಗಿದೆ ಎಂಬುದೊಂದು ಹೆಚ್ಚುಗಾರಿಕೆ.
ರಾಹುಲ್ ರಾಕೆಟ್ ವೇಗ…: ನಾಯಕ ಕೆ.ಎಲ್. ರಾಹುಲ್ ರಾಕೆಟ್ ವೇಗದ ಬೀಸುಗೆಯಲ್ಲಿ ಬಾರಿಸಿದ ಅಜೇಯ 98 ರನ್ ಸಾಹಸ ಎನ್ನುವುದು ಪಂಜಾಬ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು. ಒಂದು ತುದಿಯಲ್ಲಿ ಕ್ರೀಸ್ ಆಕ್ರಮಿಸಿಕೊಂಡು ಚೆನ್ನೈ ಬೌಲರ್‌ಗಳ ಮೇಲೆರಗಿ ಹೋದ ರಾಹುಲ್ ಕೇವಲ 42 ಎಸೆತಗಳಿಂದ ಈ ಪಂದ್ಯಶ್ರೇಷ್ಠ ಇನಿಂಗ್ಸ್ ಕಟ್ಟಿದರು.
8 ಸಿಕ್ಸರ್, 7 ಫೋರ್ ಸಿಡಿಸಿದ್ದು ರಾಹುಲ್ ಅವರ ಕಪ್ತಾನನ ಆಟಕ್ಕೆ ಹಾಗೂ ಏಕಾಂಗಿ ಹೋರಾಟಕ್ಕೆ ಸಾಕ್ಷಿ. ರಾಹುಲ್ ಅವರ ಬ್ಯಾಟಿಂಗ್ ಸಾಹಸವನ್ನು ಇನ್ನೊಂದು ಮಾನದಂಡದಿಂದಲೂ ಅಳೆಯ ಬಹುದು. ಅವರನ್ನು ಹೊರತುಪಡಿಸಿ ದರೆ ಉಳಿದವರ್ಯಾರಿಂದಲೂ ಗಮನಾರ್ಹ ಕೊಡುಗೆ ಸಂದಾಯವಾಗಲಿಲ್ಲ.
ಸಂಕ್ಷಿಪ್ತ ಸ್ಕೋರ್ : ಚೆನ್ನೈ 20 ಓವರ್, 134/6 (ಡು ಪ್ಲೆಸಿಸ್ 76, ಕ್ರಿಸ್ ಜೋರ್ಡಾನ್ 20ಕ್ಕೆ 2). ಪಂಜಾಬ್ 13 ಓವರ್, 139/4 (ರಾಹುಲ್ 98, ಶಾದ್ರೂಲ್ ಠಾಕೂರ್ 28ಕ್ಕೆ 3).
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.