CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ
Team Udayavani, May 19, 2024, 3:05 PM IST
ಬೆಂಗಳೂರು: 17ನೇ ಸೀಸನ್ ನ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಲ್ಕನೇ ತಂಡವಾಗಿ ಪ್ಲೇ ಆಫ್ ತಲುಪಿದೆ. ಸಿಎಸ್ ಕೆ ವಿರುದ್ಧ ಶನಿವಾರ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ತಂಡವು 27 ರನ್ ಅಂತರದಿಂದ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಹಲವು ದಾಖಲೆ ಬರೆಯಲ್ಪಟ್ಟವು. ಅವುಗಳ ಮಾಹಿತಿ ಇಲ್ಲಿದೆ.
ರನ್ ಮಶಿನ್ ವಿರಾಟ್ ಕೊಹ್ಲಿ ಅವರು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ 3000 ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದರು.
ವಿರಾಟ್ ಕೊಹ್ಲಿ ಅವರು ಈ ಆವೃತ್ತಿಯಲ್ಲಿ ಒಟ್ಟು 700 ರನ್ ಗಳಿಸಿದ ಮೊದಲಿಗ ಎನಿಸಿಕೊಂಡರು.
ಈ ಐಪಿಎಲ್‌ನಲ್ಲಿ ಕೊಹ್ಲಿ ಒಟ್ಟಾರೆ 37 ಸಿಕ್ಸರ್ ಗಳನ್ನು ಬಾರಿಸಿದರು. ಇದು ಈ ಕೂಟದಲ್ಲಿ ಬ್ಯಾಟರ್ ವೊಬ್ಬನ ಗರಿಷ್ಠ ಸಿಕ್ಸರ್ ಸಾಧನೆ. 2016ರ ಆವೃತ್ತಿಯಲ್ಲಿ 38 ಸಿಕ್ಸರ್ ಬಾರಿಸಿದ್ದು ಅವರ ಗರಿಷ್ಠ ಸಾಧನೆ.
ಆರ್‌ಸಿಬಿ ಈ ಐಪಿಎಲ್‌ನಲ್ಲಿ 150ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದೆ. ಟಿ20 ಕ್ರಿಕೆಟ್‌ನ ಒಂದು ಆವೃತ್ತಿಯಲ್ಲಿ ತಂಡವೊಂದು ಬಾರಿಸಿದ ಅತ್ಯಧಿಕ ಸಿಕ್ಸರ್ ಇದು. 146 ಸಿಕ್ಸರ್ ಬಾರಿಸಿರುವ ಹೈದರಾಬಾದ್ ದ್ವಿತೀಯ ಸ್ಥಾನದಲ್ಲಿದೆ.
ಇದೇ ವೇಳೆ ವಿರಾಟ್ ಕೊಹ್ಲಿ ಅವರು 700 ಐಪಿಎಲ್ ಬೌಂಡರಿ ಬಾರಿಸಿದರು. ಶಿಖರ್ ಧವನ್ 768 ಐಪಿಎಲ್ ಬೌಂಡರಿ ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ ಈಗ 702 ಬೌಂಡರಿಗಳು ಮತ್ತು 271 ಸಿಕ್ಸರ್ ಗಳನ್ನು ಬಾರಿಸಿದ್ದಾರೆ.
ಐಪಿಎಲ್ ನಲ್ಲಿ ಗೇಲ್ (357), ರೋಹಿತ್ ಶರ್ಮಾ (280), ಮತ್ತು ಎಬಿ ಡಿವಿಲಿಯರ್ಸ್ (251) ನಂತರ 250 ಐಪಿಎಲ್ ಸಿಕ್ಸರ್‌ಗಳನ್ನು ಪೂರೈಸಿದ ಆಟಗಾರ ಕೊಹ್ಲಿ.
ಮೇ 18ರಂದು ಮತ್ತೆ ಗೆದ್ದಆರ್‌ಸಿಬಿ
ಮೇ 18ರಂದು ಆರ್‌ಸಿಬಿ ತಾನಾಡಿದ ಪಂದ್ಯಗಳನ್ನು ಸೋತೇ ಇಲ್ಲ. ಈ ದಿನಾಂಕದಂದು ಅದರ ಸತತ ಗೆಲುವಿನ ಓಟ 5ಕ್ಕೇರಿದೆ. ಅಚ್ಚರಿಯೆಂದರೆ ಚೆನ್ನೈ ವಿರುದ್ಧವೇ 3ನೇ ಪಂದ್ಯ ಗೆದ್ದಿದೆ. ಇನ್ನೆರಡು ಗೆಲುವು ಪಂಜಾಬ್, ಹೈದ್ರಾಬಾದ್ ವಿರುದ್ಧ ದಾಖಲಾಗಿದೆ
ತುಳುಕಾಡಿದ ಚಿನ್ನಸ್ವಾಮಿ: 29680 ಪ್ರೇಕ್ಷಕರು
ಚಿನ್ನಸ್ವಾಮಿಯಲ್ಲಿ ಶನಿವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು- ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ನಿರ್ಣಾಯಕ ಪಂದ್ಯ ವೀಕ್ಷಿಸಲು ಅಭಿಮಾನಿಗಳ ಸಾಗರವೇ ಹರಿದುಬಂದಿತ್ತು. ಶನಿವಾರ ಒಟ್ಟು ಮೈದಾನದ ಬಹುತೇಕ ಆಸನಗಳು ತುಂಬಿಕೊಂಡಿದ್ದವು. ಹಾಜರಿದ್ದ ಒಟ್ಟು ಪ್ರೇಕ್ಷಕರ ಸಂಖ್ಯೆ 29680!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.