![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Oct 8, 2023, 11:42 AM IST
ಧರ್ಮಶಾಲಾ: ಕಳೆದ ಐಪಿಎಲ್ ವೇಳೆಯಿಂದ ಅಫ್ಘಾನಿಸ್ಥಾನದ ವೇಗಿ ನವೀನ್ ಉಲ್ ಹಕ್ ಅವರು ಭಾರತದಲ್ಲಿ ಭಾರೀ ಫೇಮಸ್. ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಐಪಿಎಲ್ ಪಂದ್ಯವೊಂದರ ವೇಳೆ ಕೆಣಕಿದ್ದ ಲಕ್ನೋ ಆಟಗಾರ ನವೀನ್ ಉಲ್ ಹಕ್ ಭಾರಿ ಟ್ರೋಲ್ ಗೆ ಒಳಗಾಗಿದ್ದರು. ಬಳಿಕ ನವೀನ್ ಹೋದಾಗಲೆಲ್ಲಾ ವಿರಾಟ್ ಹೆಸರಲ್ಲಿ ಅವರನ್ನು ಟ್ರೋಲ್ ಮಾಡುತ್ತಾರೆ.
ಇದೀಗ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ನವೀನ್ ಉಲ್ ಹಕ್ ಅವರು ಅಫ್ಘಾನಿಸ್ಥಾನ ಪರ ಆಡುತ್ತಿದ್ದಾರೆ. ಶನಿವಾರ ಧರ್ಮಶಾಲಾದಲ್ಲಿ ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶ ನಡುವೆ ವಿಶ್ವಕಪ್ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ನವೀನ್ ಉಲ್ ಹಕ್ ಆಡಿದ್ದರು. ಆದರೆ ಇದೇ ವೇಳೆ ಮತ್ತೆ ಟ್ರೋಲ್ ಗಳಿಗೆ ಆಹಾರವಾಗಿದ್ದಾರೆ.
ನವೀನ್-ಉಲ್-ಹಕ್ ಅವರನ್ನು ಚುಡಾಯಿಸಲು ಧರ್ಮಶಾಲಾದ ಪ್ರೇಕ್ಷಕರು ವಿರಾಟ್ ಕೊಹ್ಲಿ ಹೆಸರನ್ನು ಜೋರಾಗಿ ಕೂಗುತ್ತಿದ್ದರು. 5.4 ಓವರ್ ಗಳನ್ನು ಎಸೆದ ನವೀನ್ 31 ರನ್ ನೀಡಿ ಒಂದು ವಿಕೆಟ್ ಪಡೆದರು. ಅಫ್ಘಾನಿಸ್ತಾನವು ತನ್ನ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 6 ವಿಕೆಟ್‌ಗಳಿಂದ ಸೋತಿತು.
Kohli Kohli chants infront of Naveen ul haq. We’re massive Virat Kohli FC 🔥pic.twitter.com/HOQfOPdGLO
— leisha (@katyxkohli17) October 7, 2023
ಭಾರತ ಮತ್ತು ಅಫ್ಘಾನಿಸ್ಥಾನ ನಡುವಿನ ವಿಶ್ವಕಪ್ ಪಂದ್ಯವು ಅ.11ರಂದು ಹೊಸದಿಲ್ಲಿಯ ಅರುಣ್ ಜೇಟ್ಲಿಯ ಸ್ಟೇಡಿಯಂನಲ್ಲಿ ನಡೆಯಲಿದೆ.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.