ಹಾಕಿ: ಭಾರತಕ್ಕೆ ಪದಕವಿಲ್ಲ!
Team Udayavani, Apr 15, 2018, 7:10 AM IST
ಗೋಲ್ಡ್‌ಕೋಸ್ಟ್: ಕಂಚಿನ ಪದಕ ಸ್ಪರ್ಧೆಯಲ್ಲಿ ಇಂಗ್ಲೆಂಡಿಗೆ 1-2 ಗೋಲುಗಳಿಂದ ಶರಣಾದ ಭಾರತದ ಪುರುಷರ ಹಾಕಿ ತಂಡ ಬರಿಗೈಯಲ್ಲಿ ತವರಿಗೆ ಮರಳುವ ಸಂಕಟಕ್ಕೆ ಸಿಲುಕಿದೆ.
ಕಳೆದೆರಡೂ ಗೇಮ್ಸ್‌ಗಳಲ್ಲಿ ಫೈನಲ್‌ಗೆ ಲಗ್ಗೆ ಇರಿಸಿ, ಎರಡೂ ಸಲ ಆಸ್ಟ್ರೇಲಿಯಕ್ಕೆ ಶರಣಾಗಿ ಬೆಳ್ಳಿ ಪದಕ ಜಯಿಸಿದ್ದ ಭಾರತ ಈ ಬಾರಿ ತೀವ್ರ ನಿರಾಶಾದಾಯಕ ಪ್ರದರ್ಶನ ನೀಡಿತು. ಶನಿವಾರದ ಸ್ಪರ್ಧೆಯಲ್ಲಿ ಜಯ ಸಾಧಿಸುವ ಮೂಲಕ ಇಂಗ್ಲೆಂಡ್ ಕಂಚಿನ ಪದಕ ಜಹಯಿಸಿತಷ್ಟೇ ಅಲ್ಲ, ಗ್ರೂಪ್ ಹಂತದಲ್ಲಿ ಭಾರತದ ವಿರುದ್ಧ ಅನುಭವಿಸಿದ 3-4 ಅಂತರದ ಸೋಲಿಗೆ ಸೇಡನ್ನೂ ತೀರಿಸಿಕೊಂಡಿತು.
ಇಂಗ್ಲೆಂಡ್ ಪರ ದಾಖಲಾದ ಎರಡೂ ಗೋಲುಗಳನ್ನು ಸ್ಯಾಮ್ ವಾರ್ಡ್ ಹೊಡೆದರು (7 ಹಾಗೂ 43ನೇ ನಿಮಿಷ). ಭಾರತದ ಏಕೈಕ ಗೋಲನ್ನು ವರುಣ್ ಕುಮಾರ್ 27ನೇ ನಿಮಿಷದಲ್ಲಿ ದಾಖಲಿಸಿದರು.
ಈ ಫಲಿತಾಂಶಕ್ಕೆ ಭಾರತ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka sports meet: ಈಜು ಸ್ಪರ್ಧೆ ಆರಂಭ; ದಕ್ಷಿಣ ಕನ್ನಡ ಮೇಲುಗೈ
Under-19 Women’s T20 World Cup: ವೈಷ್ಣವಿ ಹ್ಯಾಟ್ರಿಕ್, 5 ರನ್ನಿಗೆ 5 ವಿಕೆಟ್ ದಾಖಲೆ
Australia Open: 50ನೇ ಬಾರಿಗೆ ಗ್ರ್ಯಾನ್‌ಸ್ಲಾಮ್ ಸೆಮೀಸ್‌ಗೇರಿದ ಜೋಕೋ
Women’s ODI rankings: ಅಗ್ರಸ್ಥಾನಕ್ಕೆ ಮಂಧನಾ ಸನಿಹ
Rinku Singh: ತಂದೆಗೆ ಸೂಪರ್ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್… ಬೆಲೆ ಎಷ್ಟು ಗೊತ್ತಾ?