ರೂಮ್ನಲ್ಲಿ ಸಿರಿಂಜ್ ಪತ್ತೆ: ಇರ್ಫಾನ್, ರಾಕೇಶ್ ಮನೆಗೆ!
Team Udayavani, Apr 14, 2018, 6:00 AM IST
ಗೋಲ್ಡ್ಕೋಸ್ಟ್: ಭಾರತದ ವಾಕ್ ರೇಸರ್ ಕೆ.ಟಿ. ಇರ್ಫಾನ್ ಮತ್ತು ಟ್ರಿಪಲ್ ಜಂಪರ್ ರಾಕೇಶ್ ಬಾಬು ಅವರ ಕೋಣೆಯಲ್ಲಿ ಸೂಜಿ ಪತ್ತೆಯಾಗಿದ್ದು, ಇವರಿಬ್ಬರನ್ನೂ ಕಾಮನ್ವೆಲ್ತ್ ಗೇಮ್ಸ್ನಿಂದ ಮನೆಗೆ ಕಳುಹಿಸಲಾಗಿದೆ. ಇದನ್ನು ಭಾರತ ಖಂಡಿಸಿದ್ದು, ಇದರ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಾಮನ್ವೆಲ್ತ್ ಗೇಮ್ಸ್ ಒಕ್ಕೂಟ (ಸಿಜಿಎಫ್), ಇಬ್ಬರ ರೂಮಿನಲ್ಲಿಯೂ ಸೂಜಿ ಪತ್ತೆಯಾಗಿದೆ. ಹೀಗಾಗಿ ಉದ್ದೀಪನ ಶಂಕೆಯ ಮೇಲೆ ಇಬ್ಬರನ್ನು ಮನೆಗೆ ಕಳುಹಿಸಲಾಗಿದೆ ಎಂದು ತಿಳಿಸಿದೆ.
ವಾಕ್ ರೇಸರ್ ಆಗಿರುವ ಇರ್ಫಾನ್ 20 ಕಿ.ಮೀ ವಾಕ್ ರೇಸ್ನಲ್ಲಿ 13ನೇ ಸ್ಥಾನ ಪಡೆದಿದ್ದರು. ಆದರೆ ಟ್ರಿಪಲ್ ಜಂಪರ್ ರಾಕೇಶ್ ಬಾಬು ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಫೈನಲ್ ಪ್ರವೇಶಿಸಿದ್ದರು. 12 ಆ್ಯತ್ಲೀಟ್ಗಳ ಫೈನಲ್ ಕಾದಾಟ ಶುಕ್ರವಾರ ನಡೆಯಲಿತ್ತು. ಆದರೆ, ಉದ್ದೀಪನ ಶಂಕೆಯ ಮೇಲೆ ರಾಕೇಶ್ ಬಾಬು ಅವರನ್ನು ಹೊರಹಾಕಿರುವುದು ಆಘಾತ ಮೂಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಗೇಮ್ಸ್ ಒಕ್ಕೂಟದ ಕೋರ್ಟ್ ದೂರು ದಾಖಲಿಸಿಕೊಂಡು ಭಾರತೀಯ ಗೇಮ್ಸ್ ಸಂಸ್ಥೆಗೆ ನೊಟೀಸ್ ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.