ಜಿಮ್ನಾಸ್ಟಿಕ್: ರಾಕೇಶ್ ಕುಮಾರ್ ನಿರಾಸೆ
Team Udayavani, Apr 10, 2018, 6:45 AM IST
ಗೋಲ್ಡ್ಕೋಸ್ಟ್: ಭಾರತದ ಜಿಮ್ನಾಸ್ಟ್ ರಾಕೇಶ್ ಕುಮಾರ್ ಪಾತ್ರ ಗೇಮ್ಸ್ನಲ್ಲಿ ನಿರಾಸೆ ಮೂಡಿಸಿದ್ದಾರೆ. ಜಿಮ್ನಾಸ್ಟಿಕ್ನ ಲ್ಯಾಂಡಿಂಗ್ ವೈಫಲ್ಯದಿಂದಾಗಿ ಅವರು ಪದಕವಿಲ್ಲದೆ ಬರಿಗೈಲಿ ವಾಪಸಾಗುವಂತಾಗಿದೆ.
ಪುರುಷರ ರಿಂಗ್ಸ್ ಜಿಮ್ನಾಸ್ಟಿಕ್ ಫೈನಲ್ನಲ್ಲಿ ಪಾಲ್ಗೊಂಡಿದ್ದ ರಾಕೇಶ್ ಉತ್ತಮ ಪ್ರದರ್ಶನವನ್ನೇ ನೀಡಿದರು. ಆದರೆ ಪ್ರದರ್ಶನ ಮುಗಿಸಿ ನೆಲಕ್ಕಿಳಿಯುವಾಗ ಅವರ ಬೆನ್ನು ಮ್ಯಾಟಿಗೆ ಬಡಿಯಿತು. ಹೀಗಾಗಿ ಅವರು ಅಂಕ ಕಡಿತಕ್ಕೆ ಒಳಗಾದ ಕಾರಣ ಬೆಲೆ ತೆರಬೇಕಾಯಿತು. ಒಟ್ಟಾರೆ ಕೇವಲ 12.933 ಅಂಕಗಳಷ್ಟೇ ಲಭಿಸಿದ್ದ ರಾಕೇಶ್ 8ನೇ ಸ್ಥಾನ ಪಡೆದುಕೊಂಡರು.
“1.300 ಅಂಕಗಳನ್ನು ನಾನು ಕ್ರ್ಯಾಶ್ ಲ್ಯಾಂಡಿಂಗ್ಗಾಗಿ ಕಳೆದುಕೊಂಡೆ. ಲ್ಯಾಡಿಂಗ್ಗಾಗಿ ತಯಾರಿ ನಡೆಸುವಾಗಿನ ತಪ್ಪಿಗಾಗಿ ಮತ್ತು ಲ್ಯಾಂಡಿಂಗ್ ವೇಳೆ ಬಿದ್ದಿದ್ದಕ್ಕಾಗಿ ನಾನು ಅಂಕ ಕಡಿತಕ್ಕೆ ಒಳಗಾದೆ’ ಎಂದು ಸ್ಪರ್ಧೆಯ ಬಳಿಕ ರಾಕೇಶ್ ಪ್ರತಿಕ್ರಿಯಿಸಿದರು.
ಪುರುಷರ ಜಿಮ್ನಾಸ್ಟಿಕ್ನಲ್ಲಿ ರಾಕೇಶ್ ಪಾತ್ರ ಗಮನ ಸೆಳೆದಿದ್ದರು. ಗೇಮ್ಸ್ನಲ್ಲಿ ಪದಕ ಗೆಲ್ಲುವ ನಿರೀಕ್ಷೆಯನ್ನೂ ಮೂಡಿಸಿದ್ದರು. ಪದಕ ಸುತ್ತಿನ ವರೆಗೂ ಪ್ರವೇಶ ಗಿಟ್ಟಿಸಿದ್ದ ರಾಕೇಶ್ಗೆ ನಿರ್ಣಾಯಕ ಹಂತದಲ್ಲಿನ ವೈಫಲ್ಯ ಪದಕದಾಸೆಗೆ ತಣ್ಣೀರೆರಚಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
ಧ್ಯಾನ್ಚಂದ್ ಖೇಲ್ರತ್ನ ನನಗೇಕಿಲ್ಲ: ಹರ್ವಿಂದರ್ ಸಿಂಗ್ ಪ್ರಶ್ನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.