ಹರ್ಮನ್ಪ್ರೀತ್ ಸಿಂಗ್ ಹ್ಯಾಟ್ರಿಕ್: ಭಾರತದ ಪುರುಷರ ಹಾಕಿ ತಂಡ ಸೆಮಿಗೆ
Team Udayavani, Aug 4, 2022, 10:09 PM IST
ಬರ್ಮಿಂಗ್ಹ್ಯಾಮ್: ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪುರುಷರ ಹಾಕಿ ತಂಡ ಸೆಮಿಫೈನಲ್ ತಲುಪಿದೆ. ಗುರುವಾರ ನಡೆದ “ಬಿ’ ವಿಭಾಗದ ಮುಖಾಮುಖಿಯಲ್ಲಿ ಭಾರತ 4-1 ಗೋಲುಗಳಿಂದ ವೇಲ್ಸ್ ತಂಡವನ್ನು ಮಣಿಸಿತು.
ಉಪನಾಯಕ ಹರ್ಮನ್ಪ್ರೀತ್ ಸಿಂಗ್ ಅವರ ಹ್ಯಾಟ್ರಿಕ್ ಭಾರತದ ಆಕರ್ಷಣೆ ಆಗಿತ್ತು. ಅವರು 19ನೇ, 20ನೇ ಮತ್ತು 40ನೇ ನಿಮಿಷದಲ್ಲಿ ಗೋಲು ಸಿಡಿಸಿದರು. ಉಳಿದೊಂದು ಗೋಲು 49ನೇ ನಿಮಿಷದಲ್ಲಿ ಗುರ್ಜಂತ್ ಸಿಂಗ್ ಅವರಿಂದ ಸಿಡಿಯಿತು. ವೇಲ್ಸ್ ತಂಡದ ಏಕೈಕ ಗೋಲನ್ನು ಗ್ಯಾರೆತ್ ಫುರ್ಲಾಂಗ್ 55ನೇ ನಿಮಿಷದಲ್ಲಿ ಬಾರಿಸಿದರು.
ಈ ಜಯದೊಂದಿಗೆ ಭಾರತ “ಬಿ’ ವಿಭಾಗದ ಅಗ್ರಸ್ಥಾನವನ್ನು ಗಟ್ಟಿಗೊಳಿಸಿತು. ಇಂಗ್ಲೆಂಡ್ ವಿರುದ್ಧ 22 ಗೋಲುಗಳ ವ್ಯತ್ಯಾಸ ಹೊಂದಿರುವುದು ಭಾರತದ ಹೆಗ್ಗಳಿಕೆಯಾಗಿದೆ. ಇಂಗ್ಲೆಂಡ್ ತನ್ನ ಅಂತಿಮ ಲೀಗ್ ಪಂದ್ಯವನ್ನು ಕೆನಡಾ ವಿರುದ್ಧ ಆಡಲಿದೆ. ಭಾರತದ ವನಿತಾ ತಂಡ ಕೂಡ ಸೆಮಿಫೈನಲ್ ತಲುಪಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.