ಬ್ಯಾಡ್ಮಿಂಟನ್ ಸ್ಪರ್ಧೆ: ಭಾರತ ನಾಕೌಟ್ ಪ್ರವೇಶ
Team Udayavani, Jul 30, 2022, 11:53 PM IST
ಬರ್ಮಿಂಗ್‌ಹ್ಯಾಮ್: ಬ್ಯಾಡ್ಮಿಂಟನ್ ಸ್ಪರ್ಧೆಯ ಮಿಶ್ರ ತಂಡ ವಿಭಾಗದಲ್ಲಿ ತನ್ನ ಪ್ರಭುತ್ವವನ್ನು ಮುಂದುವರಿಸಿದ ಭಾರತ ನಾಕೌಟ್ ಹಂತ ಪ್ರವೇಶಿಸಿತು. “ಎ’ ವಿಭಾಗದ ದ್ವಿತೀಯ ಹಣಾಹಣಿ ಯಲ್ಲಿ ಶ್ರೀಲಂಕಾವನ್ನು 5-0 ಅಂತರ ದಿಂದ ಮಣಿಸಿ ಮುನ್ನಡೆ ಸಾಧಿಸಿತು.
ಪಾಕಿಸ್ಥಾನವನ್ನು 5-0 ಅಂತರದಿಂದ ಮಣಿಸಿದ ಹುಮ್ಮಸ್ಸಿನಲ್ಲಿದ್ದ ಭಾರತ, ನೆರೆಯ ಲಂಕಾ ವಿರುದ್ಧವೂ ಇದೇ ಪರಾಕ್ರಮವನ್ನು ಮುಂದುವರಿಸಿತು. ಮೊದಲ ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಜೋಡಿ ಸಚಿನ್ ಡಯಾಸ್-ತಿಲಿನಿ ಹೆಂಧಹೇವಾ ವಿರುದ್ಧ 21-14, 21-9 ಅಂತರದ ಗೆಲುವು ಸಾಧಿಸಿತು.
ಭುಜದ ನೋವಿನಿಂದ ಚೇತರಿಸಿ ಕೊಂಡ ಬಳಿಕ ಮೊದಲ ಪಂದ್ಯವಾಡಿದ ಲಕ್ಷ್ಯ ಸೇನ್ 21-18, 21-5ರಿಂದ ನಿಲುಕ ಕರುಣಾರತ್ನೆ ಅವರನ್ನು ಮಣಿಸಿದರು. 3ನೇ ಗೆಲುವು ತಂದಿ ತ್ತವರು ಆಕರ್ಷಿ ಕಶ್ಯಪ್. ಅವರು 21-3, 21-9ರಿಂದ ಸುಹಾಸಿನಿ ವಿದನಗೆ ಅವರ ನಗೆಗೆ ಮುಸುಕೆಳೆದರು.
ಪುರುಷರ ಡಬಲ್ಸ್‌ನಲ್ಲಿ ಚಿರಾಗ್ ಶೆಟ್ಟಿ-ಬಿ. ಸುಮೀತ್ ರೆಡ್ಡಿ ಸೇರಿಕೊಂಡು ದುಮಿಂದು ಅಭಯವಿಕ್ರಮ-ಸಚಿನ್ ಡಯಾಸ್ ಜೋಡಿಗೆ 21-10, 21-13ರಿಂದ; ವನಿತಾ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್-ತಿೃಷಾ ಜಾಲಿ ಸೇರಿಕೊಂಡು ತಿಲಿನಿ ಹೆಂಧಹೇವಾ-ಸುಹಾಸಿನಿ ವಿದನಗೆ ಜೋಡಿಗೆ 21-18, 21-6 ಅಂತರದ ಸೋಲುಣಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.