World Chess Championship: ಗುಕೇಶ್-ಲಿರೆನ್ 5ನೇ ಪಂದ್ಯ ಡ್ರಾ
Team Udayavani, Nov 30, 2024, 9:23 PM IST
ಸಿಂಗಾಪುರ: ಇಲ್ಲಿ ಚೀನಾ ಗ್ರ್ಯಾಂಡ್ ಮಾಸ್ಟರ್ ಡಿಂಗ್ ಲಿರೆನ್ ಮತ್ತು ಭಾರತ ಗ್ರ್ಯಾಂಡ್ ಮಾಸ್ಟರ್ ಡಿ.ಗುಕೇಶ್ ಮಧ್ಯೆ ನಡೆಯುತ್ತಿರುವ ವಿಶ್ವ ಚೆಸ್ ಚಾಂಪಿಯನ್ಶಿಪ್ ಪಂದ್ಯಾವಳಿ ದಿನ ದಿನಕ್ಕೂ ಕುತೂಹಲಕಾರಿ ತಿರುವು ಪಡೆಯುತ್ತಿದೆ. ಕಾರಣ, ಇಬ್ಬರ ನಡುವಿನ 5ನೇ ಪಂದ್ಯ ಡ್ರಾದೊಂದಿಗೆ ಅಂತ್ಯಗೊಂಡಿದ್ದು, ಇಬ್ಬರೂ ತಲಾ 2.5 ಅಂಕದೊಂದಿಗೆ ಸಮಬಲ ಸಾಧಿಸಿದ್ದಾರೆ. 14 ಪಂದ್ಯಗಳ ಈ ಸರಣಿಯಲ್ಲಿ ಮೊದಲು 7.5 ಅಂಕ ಗಳಿಸುವ ಸ್ಪರ್ಧಿ ವಿಶ್ವ ಚಾಂಪಿಯನ್ ಆಗುತ್ತಾರೆ.
ಶನಿವಾರದ 5ನೇ ಸ್ಪರ್ಧೆಯಲ್ಲಿ ಕಪ್ಪು ಕಾಯಿಯೊಂದಿಗೆ ಆಡಿದ ಡಿಂಗ್ ಲಿರೆನ್ ಮತ್ತು ಬಿಳಿ ಕಾಯಿಯೊಂದಿಗೆ ಆಡಿದ ಡಿ.ಗುಕೇಶ್ ತಮ್ಮ 40ನೇ ನಡೆಯಲ್ಲಿ ಪಂದ್ಯವನ್ನು ಡ್ರಾಗೊಳಿಸಿಕೊಂಡರು. ಡ್ರಾ ಪಂದ್ಯಕ್ಕೆ ಅರ್ಧ ಅಂಕ ಸಿಗುವ ಕಾರಣ, ತಲಾ 2 ಅಂಕ ಪಡೆದಿದ್ದ ಇಬ್ಬರೂ ಒಟ್ಟಾರೆ 2.5 ಅಂಕದೊಂದಿಗೆ ಸಮಬಲದೊಂದಿಗೆ ಪಂದ್ಯಾವಳಿಯಲ್ಲಿ ಮುಂದುವರಿಸಿದ್ದಾರೆ.
ಆರಂಭದಿಂದಲೂ ಜಿದ್ದಾಜಿದ್ದಿ ಸೆಣಸಾಟ:
ಟೂರ್ನಿ ಆರಂಭದಿಂದಲೂ ಜಿದ್ದಾಜಿದ್ದಿ ಹಂತದಲ್ಲೇ ಸಾಗುತ್ತಿರುವುದು ವಿಶೇಷ. ಆರಂಭಿಕ ಪಂದ್ಯದಲ್ಲಿ ಲಿರೆನ್ ಗೆದ್ದು 1-0ಯ ಮುನ್ನಡೆ ಸಾಧಿಸಿದ್ದರು. ಮುಂದಿನ ಪಂದ್ಯ ಡ್ರಾ ಎನಿಸಿತು. ಬಳಿಕ ಗುಕೇಶ್ ಗೆದ್ದು ಅಂಕವನ್ನು ತಲಾ 1.5ಕ್ಕೆ ತಂದರು. ಮುಂದಿನ ಎರಡೂ ಪಂದ್ಯ ಡ್ರಾಗೊಂಡಿದ್ದರಿಂದ ಸಮಬಲದ ಹೋರಾಟ ಮುಂದುವರಿಸಿದೆ. ಒಂದು ವೇಳೆ 14 ಪಂದ್ಯಗಳ ಬಳಿಕ ಅಂಕ ಟೈ ಎನಿಸಿದರೆ ಟೈ ಬ್ರೇಕರ್ ನಡೆಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.