ದಬಾಂಗ್ ಡೆಲ್ಲಿಗೆ ಒಂದಂಕದ ಗೆಲುವು
Team Udayavani, Jul 26, 2019, 5:39 AM IST
ಹೈದರಾಬಾದ್: ಗುರುವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ದಬಾಂಗ್ ಡೆಲ್ಲಿ 30-29 ಅಂತರದ ರೋಚಕ ಗೆಲುವು ದಾಖಲಿಸಿತು.
ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಕೊನೆಯ ತನಕ ಅತ್ಯಂತ ಕುತೂಹಲಕಾರಿಯಾಗಿ ಸಾಗಿತು. ಅಂತ್ಯದಲ್ಲಿ ತಮಿಳ್ ತಲೈವಾಸ್ ತಂಡಕ್ಕೆ ನೀರು ಕುಡಿಸಿದ ದಬಾಂಗ್ ಡೆಲ್ಲಿ ಕೇವಲ ಒಂದು ಅಂಕದ ಅಂತರದಿಂದ ರೋಚಕ ಜಯ ಸಾಧಿಸಿ ಬೀಗಿತು. ಮೊದಲ ಪಂದ್ಯದಲ್ಲೂ ದಬಾಂಗ್ ಡೆಲ್ಲಿ ಆತಿಥೇಯ ತೆಲುಗು ಟೈಟಾನ್ಸ್ ವಿರುದ್ಧ ಇದೇ ರೀತಿಯಲ್ಲಿ (34-33) ಜಯಿಸಿದ್ದನ್ನು ಸ್ಮರಿಸಬಹುದು. ಇದು ಕೂಟದಲ್ಲಿ ದಬಾಂಗ್ ಡೆಲ್ಲಿ ದಾಖಲಿಸಿದ ಸತತ ಎರಡನೇ ಗೆಲುವು. ಕೊನೆಯ 3 ನಿಮಿಷಗಳಲ್ಲಿ ಪಂದ್ಯದ ಚಿತ್ರಣವೇ ಬದಲಾದದ್ದು ವಿಶೇಷ.
ತಮಿಳ್ ತಲೈವಾಸ್ ವೀರೋಚಿತ ಹೋರಾಟ ಪ್ರದರ್ಶಿಸಿದರೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ತಲೈವಾಸ್ ತನ್ನ ಲೀಗ್‌ನ ಮೊದಲ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್ ತಂಡವನ್ನು 39-26 ಅಂತರದಿಂದ ಸೋಲಿಸಿ ಶುಭಾರಂಭ ಮಾಡಿತ್ತು. ತಲೈವಾಸ್‌ಗೆ ಇದು ಮೊದಲ ಸೋಲು.
ಪಂದ್ಯ ಗೆಲ್ಲಿಸಿದ ನವೀನ್
ದಬಾಂಗ್ ಡೆಲ್ಲಿ -ತಮಿಳ್ ತಲೈವಾಸ್ ನಡುವಿನ ಪಂದ್ಯ ಜಿದ್ದಾಜಿದ್ದಿಯಿಂದ ಕೂಡಿತ್ತು. ಮೊದಲ ಅವಧಿಯಲ್ಲಿ ತಲೈವಾಸ್ 18-11ರ ಮುನ್ನಡೆ ಪಡೆದಿತ್ತು. ಆದರೆ ಎರಡನೇ ಅವಧಿಯಲ್ಲಿ ಡೆಲ್ಲಿ ಮಿಂಚಿನ ಆಟಪ್ರದರ್ಶಿಸಿತು. ಕೊನೆಯ ನಿಮಿಷದಲ್ಲಿ ಅಂಕವನ್ನು 29-29ಕ್ಕೆ ತಂದು ಸಮ ಮಾಡಿಕೊಂಡಿತ್ತು.
ಆದರೆ ನವೀನ್ ಕುಮಾರ್ ಅವರ ಕೊನೆಯ ಡು ಆರ್ ಡೈ ರೈಡಿಂಗ್ ವೇಳೆ ತಲೈವಾಸ್ ಆಟಗಾರ ಮಂಜೀತ್ ಚಿಲ್ಲರ್ ಸೆಲ್ಫ್ ಔಟ್ ಆದ ಕಾರಣ ಡೆಲ್ಲಿಗೆ ಒಂದಂಕ ಸಿಕ್ಕಿತು. ಇದು ಡೆಲ್ಲಿ ಗೆಲುವಿಗೆ ಕಾರಣವಾಯಿತು. ನವೀನ್ ರೈಡಿಂಗ್‌ನಲ್ಲಿ 7, ಟ್ಯಾಕಲ್‌ನಿಂದ ಒಂದು, ಒಟ್ಟು 8 ಅಂಕ ತಂದುಕೊಡುವ ಮೂಲಕ ಯಶಸ್ವಿ ರೈಡರ್ ಎನಿಸಿಕೊಂಡರು.
ದಿಗ್ಗಜರಿದ್ದರೂ ಸೋತ ತಲೈವಾಸ್
ತಮಿಳ್ ತಲೈವಾಸ್ ತಂಡದಲ್ಲಿ ರಾಹುಲ್ ಚೌಧರಿ, ಅಜಯ್ ಠಾಕೂರ್ ಹಾಗೂ ಮಂಜಿತ್ ಚಿಲ್ಲರ್ ಅವರಂತಹ ಖ್ಯಾತನಾಮರಿದ್ದರೂ ಗೆಲುವು ಸಿಗಲಿಲ್ಲ. ರಾಹುಲ್ ಚೌಧರಿ ಒಟ್ಟು 7 ಅಂಕಕ್ಕೆ ಸೀಮಿತರಾದರು. 13 ಸಲ ರೈಡ್ ಮಾಡಿದ ಅವರು 6 ಸಲ ಬರಿಗೈನಿಂದಲೇ ವಾಪಸ್ ಆಗಿದ್ದರು.
ಅಜಯ್ ಠಾಕೂರ್ 16 ಸಲ ರೈಡಿಂಗ್ ಮಾಡಿ ಗಳಿಸಿದ್ದು ಕೇವಲ 5 ಅಂಕ ಮಾತ್ರ. ಮಂಜಿತ್ ಚಿಲ್ಲರ್ 5 ಅಂಕವನ್ನು ಟ್ಯಾಕಲ್‌ನಿಂದ ಗಳಿಸಿದರು. ಆದರೆ ಆಲ್‌ರೌಂಡರ್ ಆಗಿರುವ ಅವರು ಸಂಪೂರ್ಣವಾಗಿ ರೈಡಿಂಗ್‌ನಲ್ಲಿ ವಿಫಲರಾದರು. ಉಳಿದಂತೆ ಅಜಿತ್ (2 ಅಂಕ), ಮೋಹಿತ್ ಚಿಲ್ಲರ್ (2 ಅಂಕ) ಹಾಗೂ ರಾಣ್ ಸಿಂಗ್ (1 ಅಂಕ) ಅವರಿಂದ ಪವಾಡ ಸಾಧ್ಯವಾಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.