ಡಾಕರ್ ರ್ಯಾಲಿ: ಬೆಂಗಳೂರಿನ ಸಂತೋಷ್ ರಾಷ್ಟ್ರೀಯ ದಾಖಲೆ
Team Udayavani, Jan 22, 2018, 3:10 PM IST
ಬೆಂಗಳೂರು: ಅರ್ಜೆಂಟೀನಾದಲ್ಲಿ ಮುಕ್ತಾಯಗೊಂಡ ಡಾಕರ್ ರ್ಯಾಲಿಯಲ್ಲಿ ಬೆಂಗಳೂರಿನ ಬೈಕ್ ಚಾಲಕ ಸಿ.ಎಸ್.ಸಂತೋಷ್ ಭಾರತೀಯ ದಾಖಲೆ ನಿರ್ಮಿಸಿದ್ದಾರೆ. ಒಟ್ಟಾರೆ 14 ಸುತ್ತಿನ ರ್ಯಾಲಿ ಭಾನುವಾರ ಮುಕ್ತಾಯಗೊಂಡಿದ್ದು ಕೂಟದಲ್ಲಿ ಸಂತೋಷ್ ಒಟ್ಟಾರೆ 35ನೇ ಸ್ಥಾನ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಒಟ್ಟಾರೆ ವೃತ್ತಿ ಜೀವನದಲ್ಲಿ ಮೂರನೇ ಸಲ ಈ ರ್ಯಾಲಿ ಪೂರ್ಣಗೊಳಿಸಿದ್ದಾರೆ. ಇಂತಹದೊಂದು ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ.
ಅತ್ಯುತ್ತಮ ಮುಕ್ತಾಯ: ಸಿ.ಎಸ್.ಸಂತೋಷ್ ಒಟ್ಟಾರೆ 4 ಡಾಕರ್ ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದಾರೆ. ಅವರು ಹೀರೋ ಮೋಟೋ ನ್ಪೋರ್ಟ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 2015ರ ಡಾಕರ್ ರ್ಯಾಲಿಯಲ್ಲಿ ಸಂತೋಷ್ 36ನೇ ಸ್ಥಾನ ಪಡೆದುಕೊಂಡಿದ್ದರು. ಇದು ಹಿಂದಿನ ಸಂತೋಷ್ ಶ್ರೇಷ್ಠ ಸಾಧನೆಯಾಗಿತ್ತು. ಸಂತೋಷ್ ಮಹತ್ವದ ರ್ಯಾಲಿನಲ್ಲಿ 20 ಅಮೂಲ್ಯ ಅಂಕವನ್ನು ಕಲೆ ಹಾಕಿದ್ದರು. ಇದಕ್ಕೂ ಮೊದಲು ಸಂತೋಷ್ ಒಂದು ಸಲ ಅಪಘಾತಕ್ಕೆ ತುತ್ತಾಗಿದ್ದರು. ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಬಚಾವ್ ಕೂಡ ಆಗಿದ್ದರು. ಜತೆಗೆ ಇಂಧನ ಖಾಲಿಯಾದ ಕಾರಣ ಅವರಿಗೆ ಅಡಚಣೆಯಾಗಿತ್ತು. ಹೀಗಿದ್ದರೂ ಕೂಟದಲ್ಲಿ ಅತ್ಯುನ್ನತ ಪ್ರದರ್ಶನ ನೀಡಿರುವುದು ವಿಶೇಷವಾಗಿದೆ.
ವಿವಿಧ ಹಂತದಲ್ಲಿ ಪ್ರಬಲ ಸ್ಪರ್ಧೆ: ವಿವಿಧ ಹಂತಗಳ ಸವಾಲು ಅತ್ಯಂತ ಕಠಿಣವಾಗಿತ್ತು. ಆರಂಭದಲ್ಲಿ ಕೆಲವೊಂದು ಅಂಕಗಳು ಸುಲಭವಾಗಿ ಸಿಕ್ಕಿದವು. ಬಳಿಕ ಅಂಕ ಸಂಪಾದಿಸಲು ವಿಫಲನಾದೆ. ಎರಡೂ ರೀತಿಯ ಅನುಭವವೂ ನನ್ನದಾಯಿತು. ಆದರೆ ಇದುವರೆಗಿನ ವೃತ್ತಿ ಜೀವನದ ಶ್ರೇಷ್ಠ ಡಾಕರ್ ರ್ಯಾಲಿ ಕಂಡಿರುವುದಕ್ಕೆ ಖುಷಿ ಇದೆ ಎಂದು ಅವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.