ಅತ್ಯಾಚಾರ ಸಾಬೀತಾದರೆ ಗುಣತಿಲಕಗೆ 14 ವರ್ಷ ಜೈಲು!
ಗುಣತಿಲಕ ತನ್ನನ್ನು 3 ಬಾರಿ ಉಸಿರುಗಟ್ಟಿಸಿದ್ದರು: ಆಸೀಸ್ ಮಹಿಳೆ ಆರೋಪ
Team Udayavani, Nov 11, 2022, 6:40 AM IST
ಸಿಡ್ನಿ: ಅತ್ಯಾಚಾರ ಆರೋಪದ ಮೇಲೆ ಆಸ್ಟ್ರೇಲಿಯದಲ್ಲಿ ಬಂಧಿಸಲ್ಪಟ್ಟಿರುವ ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಸದ್ಯದ ಸ್ಥಿತಿಯಲ್ಲಿ ಅವರು ತಪ್ಪಿತಸ್ಥ ಎಂದೇ ಸಾಬೀತಾದರೆ 14 ವರ್ಷ ಜೈಲುಶಿಕ್ಷೆಗೊಳಗಾಗಬಹುದು. ಈ ಬಗ್ಗೆ ಮಹಿಳೆ ಮಾಡಿರುವ ಆರೋಪಗಳಲ್ಲಿ ಗಂಭೀರ ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ. ಈಗಾಗಲೇ ಅವರನ್ನು ಲಂಕಾ ಕ್ರಿಕೆಟ್ ಮಂಡಳಿ ಎಲ್ಲ ಮಾದರಿಯ ಕ್ರಿಕೆಟ್ನಿಂದ ನಿಷೇಧಿಸಿದೆ. ಅಲ್ಲಿನ ಸರ್ಕಾರವೂ ಸಮಗ್ರ ತನಿಖೆಗೆ ಆದೇಶಿಸಿದೆ.
ಆಗಿದ್ದೇನು?: ದನುಷ್ಕ ಗುಣತಿಲಕ ಮತ್ತು ಆಸೀಸ್ ಮಹಿಳೆ ಡೇಟಿಂಗ್ ಆ್ಯಪ್ ಒಂದರ ಮೂಲಕ ಪರಿಚಿತರಾಗಿದ್ದರು. ನ.2ರಂದು ಇಬ್ಬರೂ ಹೊರಗೆ ಸುತ್ತಾಡಿ ಬಂದ ನಂತರ ಸಿಡ್ನಿಯ ರೋಸ್ ಬೇನಲ್ಲಿರುವ ಮಹಿಳೆಯ ಮನೆಯಲ್ಲಿ ಒಟ್ಟಾಗಿದ್ದರು. ಆಗ ಗುಣತಿಲಕ ನಾಲ್ಕು ಬಾರಿ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾರೆ. ಈ ನಡುವೆ ಮೂರು ಬಾರಿ ಮಹಿಳೆಗೆ ಉಸಿರುಗಟ್ಟುವಂತೆ ಮಾಡಿದ್ದಾರೆ ಎನ್ನುವುದು ಆರೋಪ. ಆಕೆಯ ಕತ್ತನ್ನು ಬಿಗಿಯಾಗಿ ಹಿಡಿದಿದ್ದ ಗುಣತಿಲಕ, ಮಹಿಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದರೂ ಬಿಟ್ಟಿಲ್ಲ. ಇದರಿಂದ ತಾನೆಲ್ಲಿ ಸತ್ತು ಹೋಗುತ್ತೇನೋ ಎಂದು ಮಹಿಳೆಗೆ ಗಾಬರಿಯಾಗಿತ್ತು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಆದರೆ ಇಲ್ಲಿ ಹಲವು ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಇಬ್ಬರ ನಡುವೆ ನಾಲ್ಕು ಬಾರಿ ದೈಹಿಕ ಸಂಪರ್ಕ ನಡೆದಿದೆ. ಮಹಿಳೆಯ ಅನುಮತಿ ಇಲ್ಲದ ಪಕ್ಷದಲ್ಲಿ ನಾಲ್ಕು ಬಾರಿ ಸಂಪರ್ಕ ನಡೆಯಲು ಹೇಗೆ ಸಾಧ್ಯ? ಇದು ಅತ್ಯಾಚಾರವಾಗುವುದು ಹೇಗೆ? ಗುಣತಿಲಕ ಉಸಿರಗಟ್ಟಿಸುವಂತೆ ಆಕೆಯ ಕತ್ತನ್ನು ಒತ್ತಿ ಹಿಡಿದಿದ್ದೂ ತಪ್ಪೆನ್ನುವುದು ಶೇ.100 ಸತ್ಯ. ಮೊದಲ ಬಾರಿ ಹಾಗೆ ಮಾಡಿದಾಗಲೇ ಅವರೇಕೆ ದೂರ ಸರಿಯಲಿಲ್ಲ? ಅಲ್ಲದೇ ಇಬ್ಬರೂ ಒಪ್ಪಿಯೇ ಡೇಟಿಂಗ್ಗೆ ತೆರಳಿದ್ದಾರೆ. ಇದರ ಮುಂದುವರಿದ ಭಾಗವಾಗಿ ಆಕೆಯ ಮನೆಯಲ್ಲೇ ಇಬ್ಬರೂ ಒಂದಾಗಿದ್ದಾರೆ. ಹೀಗಿರುವಾಗ ಅದು ಅತ್ಯಾಚಾರ ಎನಿಸಿಕೊಳ್ಳುವುದು ಹೇಗೆ? ಈ ನಿಟ್ಟಿನಲ್ಲೂ ತನಿಖೆ ನಡೆಯುವ ನಿರೀಕ್ಷೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.