Dattajirao Gaekwad: ಭಾರತದ ಹಿರಿಯ ಟೆಸ್ಟ್ ಕ್ರಿಕೆಟಿಗ ದತ್ತಾಜಿರಾವ್ ಗಾಯಕ್ವಾಡ್ ನಿಧನ
Team Udayavani, Feb 13, 2024, 1:30 PM IST
ಮುಂಬಯಿ: ಭಾರತದ ಹಿರಿಯ ಟೆಸ್ಟ್ ಕ್ರಿಕೆಟಿಗ ಮತ್ತು ಮಾಜಿ ನಾಯಕ ದತ್ತಾಜಿರಾವ್ ಗಾಯಕ್ವಾಡ್ ವಯೋಸಹಜ ಕಾಯಿಲೆಗಳಿಂದ ಮಂಗಳವಾರ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಕಳೆದ 12 ದಿನಗಳಿಂದ ಬರೋಡಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು(ಮಂಗಳವಾರ) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ರಾಷ್ಟ್ರೀಯ ಕೋಚ್ ಅಂಶುಮಾನ್ ಗಾಯಕ್ವಾಡ್ ಅವರ ತಂದೆಯಾಗಿದ್ದಾರೆ.
ಭಾರತ ಪರ 11 ಟೆಸ್ಟ್ ಪಂದ್ಯ ಆಡಿದ್ದರು:
ಗಾಯಕ್ವಾಡ್ ಅವರು 1952 ಮತ್ತು 1961 ರ ನಡುವೆ ಭಾರತಕ್ಕಾಗಿ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು 1959 ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ರಾಷ್ಟ್ರೀಯ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು.
ಬಲಗೈ ಬ್ಯಾಟ್ಸ್‌ಮನ್ ಆಗಿದ್ದ ಗಾಯಕ್ವಾಡ್ 1952 ರಲ್ಲಿ ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪಾದಾರ್ಪಣೆ ಮಾಡಿದರು ಮತ್ತು ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯವು 1961 ರಲ್ಲಿ ಚೆನ್ನೈನಲ್ಲಿ ಪಾಕಿಸ್ತಾನದ ವಿರುದ್ಧವಾಗಿತ್ತು. ದತ್ತಾಜಿರಾವ್ 1947 ರಿಂದ 1961 ರವರೆಗೆ ರಣಜಿ ಟ್ರೋಫಿಯಲ್ಲಿ ಬರೋಡಾವನ್ನು ಪ್ರತಿನಿಧಿಸಿದ್ದರು. ಅವರು 14 ಶತಕಗಳನ್ನು ಒಳಗೊಂಡಂತೆ 47.56 ಸರಾಸರಿಯಲ್ಲಿ 3139 ರನ್ ಗಳಿಸಿದರು.
ಅತ್ಯಂತ ಹಿರಿಯ ಕ್ರಿಕೆಟಿಗ:
1959–60ರ ಋತುವಿನಲ್ಲಿ ಮಹಾರಾಷ್ಟ್ರದ ವಿರುದ್ಧ ನಡೆದ ಪಂದ್ಯಾವಳಿಯಲ್ಲಿ 249 ರನ್ ಗಳಿಸಿ ಔಟಾಗದೆ ದತ್ತಾಜಿ ಅವರ ಅತ್ಯಧಿಕ ಸ್ಕೋರ್ ಆಗಿತ್ತು. ಅವರು 2016 ರಲ್ಲಿ ಭಾರತದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗರಾದರು. ಅವರಿಗಿಂತ ಮೊದಲು, ದೀಪಕ್ ಶೋಧನ್ ಭಾರತದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗರಾಗಿದ್ದರು. ಮಾಜಿ ಬ್ಯಾಟ್ಸ್‌ಮನ್ ಶೋಧನ್ ಅಹಮದಾಬಾದ್‌ನಲ್ಲಿ 87 ನೇ ವಯಸ್ಸಿನಲ್ಲಿ ನಿಧನರಾದರು.
ಇದನ್ನೂ ಓದಿ: Viral: ಪ್ರಧಾನಿ ಮೋದಿ ಕಟೌಟ್ ಎದುರು ಅಸಭ್ಯವಾಗಿ ಸೊಂಟ ಬಳುಕಿಸಿ ರೀಲ್ಸ್ ಮಾಡಿದ ಮಹಿಳೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.