7 ಖಂಡ 7 ಪಂದ್ಯ ಆಡಲಿರುವ ಬೆಕಂ
Team Udayavani, May 25, 2017, 12:02 PM IST
ಹೊಸದಿಲ್ಲಿ ತನ್ನ ಹೊಸ ಟಿವಿ ಕಾರ್ಯಕ್ರಮ “ಡೇವಿಡ್ ಬೆಕೆಂ-ಫಾರ್ ದ ಲವ್ ಆಫ್ ಗೇಮ್’ಗಾಗಿ ಇಂಗ್ಲೆಂಡಿನ ಫುಟ್ಬಾಲ್ ದಂತಕಥೆ ಡೇವಿಡ್ ಬೆಕಂ 13 ದಿನಗಳ ಅವಧಿಯಲ್ಲಿ ಏಳು ಖಂಡಗಳಲ್ಲಿ ಏಳು ಪಂದ್ಯಗಳನ್ನಾಡುವ ಯೋಜನೆ ಹಾಕಿಕೊಂಡಿದ್ದಾರೆ. ಈ ಟಿವಿ ಕಾರ್ಯಕ್ರಮ ಮೇ 28ರಿಂದ ಪ್ರಸಾರಗೊಳ್ಳಲಿದೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಬೆಕಂ ಎರಡು ವಾರಗಳ ಅಂತರದಲ್ಲಿ ವಿಶ್ವದಾದ್ಯಂತ ಪ್ರಯಾಣ ಮಾಡಿ ಯುನೈಟೆಡ್ ಕಿಂಗ್‌ಡಂಗೆ ಮರಳಿ ತನ್ನದೇ ಪ್ರಖ್ಯಾತ ಆಟಗಾರರನ್ನು ಒಳಗೊಂಡ ಯುನಿಸೆಫ್ ನಿಧಿ ಸಂಗ್ರಹ ಪಂದ್ಯದಲ್ಲಿ ಆಡಲಿದ್ದಾರೆ.
ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಮಾಜಿ ಆಟಗಾರರಾದ ಬೆಕಂ ವಿಶ್ವ ಪರ್ಯಟನೆ ವೇಳೆ ಫುಟ್ಬಾಲ್ ಆಡಲು ತೀರಾ ಗ್ರಾಮೀಣ ಪ್ರದೇಶಕ್ಕೂ ಭೇಟಿ ನೀಡಿದ್ದಾರೆ. ಬಡತನದಲ್ಲಿ ನರಳುತ್ತಿರುವ ಜನರ ಕಥೆ ಮತ್ತು ನರಳಾಟದ ಚಿತ್ರಣವನ್ನು ತೋರಿಸಿದ್ದಾರಲ್ಲದೇ ಅವರೊಂದಿಗೆ ಫುಟ್ಬಾಲ್ ಆಟ ಆಡಿದ್ದಾರೆ. ನೇಪಾಳದಲ್ಲಿ ನಡೆದ ಭೂಕಂಪದಿಂದ ಹಾನಿಗೊಳಗಾದ ಶಾಲೆಯಿಂದ ಹಿಡಿದು ಪಪುವಾ ನ್ಯೂ ಗೈನಿಯದ ಕಾಡಿನ ಬುಡಕಟ್ಟು ಪ್ರದೇಶ, ಮಿಯಾಮಿಯ ವನಿತಾ ಫುಟ್ಬಾಲ್ ತಂಡದ ಜತೆ ಚರ್ಚಿಸಿ ಫುಟ್ಬಾಲ್ ಪ್ರೀತಿ ಯಾವ ರೀತಿ ಜನರನ್ನು ಒಟ್ಟುಗೂಡಿಸುತ್ತಿದೆ ಎಂಬುದನ್ನು ಪತ್ತೆಹಚ್ಚಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Junior Doctor: ಹಾಸ್ಟೆಲ್ ಗೆ ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…
Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್
Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.