ಡೇವಿಡ್ ವಾರ್ನರ್ 335 ನಾಟೌಟ್ !
Team Udayavani, Dec 1, 2019, 12:57 AM IST
ಅಡಿಲೇಡ್: ಆಸ್ಟ್ರೇಲಿಯದ ಎಡಗೈ ಆರಂಭಕಾರ ಡೇವಿಡ್ ವಾರ್ನರ್ ಅಸಾಮಾನ್ಯ ಬ್ಯಾಟಿಂಗ್ ಪರಾಕ್ರಮದ ಮೂಲಕ ಟೆಸ್ಟ್ ಕ್ರಿಕೆಟಿನ ಪುಟಗಳಲ್ಲಿ ಸಾಲು ಸಾಲು ದಾಖಲೆಗಳನ್ನು ಬರೆದಿದ್ದಾರೆ. ಅಜೇಯ 335 ರನ್ ಬಾರಿಸಿ “ಅಡಿಲೇಡ್ ಓವಲ್’ನಲ್ಲಿ ಮೆರೆದಾಡಿದ್ದಾರೆ. ಇವರ ಜತೆಗಾರ ಮಾರ್ನಸ್ ಲಬುಶೇನ್ ಕೊಡುಗೆ 162 ರನ್.
ವಾರ್ನರ್-ಲಬುಶೇನ್ ಸಾಹಸದಿಂದ ಪಾಕಿಸ್ಥಾನದೆದುರಿನ ಹಗಲು-ರಾತ್ರಿ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಆಸ್ಟ್ರೇಲಿಯ 3 ವಿಕೆಟಿಗೆ 589 ರನ್ ಪೇರಿಸಿ ಡಿಕ್ಲೇರ್ ಮಾಡಿದೆ. ಜವಾಬು ನೀಡಲಾರಂಭಿಸಿದ ಪಾಕಿಸ್ಥಾನ 96 ರನ್ ಮಾಡುವಷ್ಟರಲ್ಲಿ 6 ವಿಕೆಟ್ ಉದುರಿಸಿಕೊಂಡು ಚಿಂತಾಜನಕ ಸ್ಥಿತಿ ತಲುಪಿದೆ.
ತಪ್ಪಿತು ವಿಶ್ವದಾಖಲೆ ಅವಕಾಶ
166 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ವಾರ್ನರ್ ಶನಿವಾರವೂ ಪಾಕ್ ಬೌಲರ್‌ಗಳಿಗೆ ಬೆವರಿಳಿಸುತ್ತ ಸಾಗಿದರು. ತಮ್ಮ ಟೆಸ್ಟ್ ಬಾಳ್ವೆಯ ಮೊದಲ ತ್ರಿಶತಕ ಬಾರಿಸಿ ಕಳೆದ ಆ್ಯಶಸ್ ವೈಫಲ್ಯವನ್ನೆಲ್ಲ ಹೊಡೆದೋಡಿಸಿದರು. ಇನ್ನೂ ಸ್ವಲ್ಪ ಹೊತ್ತು ಬ್ಯಾಟಿಂಗ್ ಲಭಿಸಿದ್ದರೆ ಬ್ರಿಯಾನ್ ಲಾರಾ ಅವರ 400 ರನ್ನುಗಳ ವಿಶ್ವದಾಖಲೆಯನ್ನು ಮುರಿಯುವ ಅವಕಾಶವೊಂದು ವಾರ್ನರ್‌ಗೆ ಲಭಿಸುವ ಸಾಧ್ಯತೆ ಇತ್ತು. ಆದರೆ ಆಸೀಸ್ ನಾಯಕ ಟಿಮ್ ಪೇನ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ್ದರಿಂದ ವಾರ್ನರ್ ಆಟ 335ಕ್ಕೆ ನಿಂತಿತು.
418 ಎಸೆತಗಳಿಗೆ ಜವಾಬಿತ್ತ ವಾರ್ನರ್ 39 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ ತಮ್ಮ ಜೀವನಶ್ರೇಷ್ಠ ಇನ್ನಿಂಗ್ಸ್ ಕಟ್ಟಿದರು. 126ರಲ್ಲಿದ್ದ ಲಬುಶೇನ್ 162ರ ತನಕ ಬ್ಯಾಟಿಂಗ್ ವಿಸ್ತರಿಸಿದರು. 238 ಎಸೆತಗಳ ಈ ಸೊಗಸಾದ ಆಟದಲ್ಲಿ 22 ಬೌಂಡರಿ ಒಳಗೊಂಡಿತ್ತು. ಇವರಿಬ್ಬರ ಬ್ಯಾಟಿಂಗ್ ವೈಭವದ ನಡುವೆ ಸ್ಟೀವನ್ ಸ್ಮಿತ್ (36) ಟೆಸ್ಟ್ ಇತಿಹಾಸದಲ್ಲಿ ಅತೀ ಕಡಿಮೆ ಇನ್ನಿಂಗ್ಸ್‌ಗಳಿಂದ 7 ಸಾವಿರ ರನ್ ಗಳಿಸಿದ ದಾಖಲೆ ಸ್ಥಾಪಿಸಿದರು.
ಮಿಚೆಲ್ ಸ್ಟಾರ್ಕ್ ಶಾಕ್
ಪಾಕಿಸ್ಥಾನಕ್ಕೆ ಆಘಾತವಿಕ್ಕಿದವರು ವೇಗಿ ಮಿಚೆಲ್ ಸ್ಟಾರ್ಕ್. ಆರರಲ್ಲಿ 4 ವಿಕೆಟ್ ಸ್ಟಾರ್ಕ್ ಪಾಲಾಗಿದೆ. 43 ರನ್ ಮಾಡಿರುವ ಬಾಬರ್ ಆಜಂ ಕ್ರೀಸಿನಲ್ಲಿದ್ದಾರೆ.
ಎಕ್ಸ್‌ಟ್ರಾ ಇನ್ನಿಂಗ್ಸ್
– ಡೇವಿಡ್ ವಾರ್ನರ್ ಅಜೇಯ 335 ರನ್ ಬಾರಿಸಿದರು. ಇದು ಟೆಸ್ಟ್ ಇತಿಹಾಸದ 31ನೇ ತ್ರಿಶತಕ (ಇದರಲ್ಲೊಂದು 400 ರನ್). ಇಂಗ್ಲೆಂಡ್ ಎದುರಿನ 2016ರ ಚೆನ್ನೈ ಪಂದ್ಯದಲ್ಲಿ ಕರುಣ್ ನಾಯರ್ ಅಜೇಯ 303 ರನ್ ಬಾರಿಸಿದ ಬಳಿಕ ದಾಖಲಾದ ಮೊದಲ ತ್ರಿಬಲ್ ಸೆಂಚುರಿ.
– ಇದು ಡೇ-ನೈಟ್ ಪಂದ್ಯದಲ್ಲಿ ಸಿಡಿಯಲ್ಪಟ್ಟ 2ನೇ ತ್ರಿಬಲ್ ಸೆಂಚುರಿ. ಇದಕ್ಕೂ ಮೊದಲು ವೆಸ್ಟ್ ಇಂಡೀಸ್ ಎದುರಿನ 2016ರ ದುಬಾೖ ಪಂದ್ಯದಲ್ಲಿ ಪಾಕಿಸ್ಥಾನದ ಅಜರ್ ಅಲಿ ಅಜೇಯ 302 ರನ್ ಬಾರಿಸಿದ್ದರು.
– ವಾರ್ನರ್ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಆಸ್ಟ್ರೇಲಿಯದ 7ನೇ ಕ್ರಿಕೆಟಿಗ. ಉಳಿದವರೆಂದರೆ ಡಾನ್ ಬ್ರಾಡ್‌ಮನ್ (2), ಬಾಬ್ ಸಿಂಪ್ಸನ್, ಬಾಬ್ ಕೌಪರ್, ಮಾರ್ಕ್ ಟೇಲರ್, ಮ್ಯಾಥ್ಯೂ ಹೇಡನ್ ಮತ್ತು
ಮೈಕಲ್ ಕ್ಲಾರ್ಕ್.
– ವಾರ್ನರ್ ಆಸ್ಟ್ರೇಲಿಯ ಪರ ಸರ್ವಾಧಿಕ ವೈಯಕ್ತಿಕ ರನ್ ಬಾರಿಸಿದ ಸಾಧಕರ ಯಾದಿಯಲ್ಲಿ 2ನೇ ಹಾಗೂ ವಿಶ್ವ ಮಟ್ಟದಲ್ಲಿ 10ನೇ ಸ್ಥಾನ ಅಲಂಕರಿಸಿದರು (ಔಟಾಗದೆ 335). ಜಿಂಬಾಬ್ವೆ ಎದುರಿನ 2003ರ ಪರ್ತ್ ಟೆಸ್ಟ್‌ನಲ್ಲಿ ಮ್ಯಾಥ್ಯೂ ಹೇಡನ್ 380 ರನ್ ಹೊಡೆದದ್ದು ಆಸೀಸ್ ದಾಖಲೆ.
– ಟೆಸ್ಟ್ ಇತಿಹಾಸದಲ್ಲಿ ಪಾಕಿಸ್ಥಾನ ವಿರುದ್ಧ 4ನೇ ತ್ರಿಶತಕ ದಾಖಲಾಯಿತು. ಉಳಿದ ಮೂವರು ಸಾಧಕರೆಂದರೆ ಗ್ಯಾರಿ ಸೋಬರ್ (ಅಜೇಯ 365), ಮಾರ್ಕ್ ಟೇಲರ್ (ಅಜೇಯ 334) ಮತ್ತು ವೀರೇಂದ್ರ ಸೆಹವಾಗ್ (309).
– ಇದು ಅಡಿಲೇಡ್ ಓವಲ್‌ನಲ್ಲಿ ದಾಖಲಾದ ಮೊದಲ ತ್ರಿಶತಕ. 1932ರ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ನಲ್ಲಿ ಡಾನ್ ಬ್ರಾಡ್‌ಮನ್ ಅಜೇಯ 299 ರನ್ ಬಾರಿಸಿದ್ದು ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. ಒಟ್ಟಾರೆಯಾಗಿ ಆಸ್ಟ್ರೇಲಿಯದಲ್ಲಿ ದಾಖಲಾದ 4ನೇ ತ್ರಿಶತಕ ಇದಾಗಿದೆ. ವಾರ್ನರ್-ಲಬುಶೇನ್ 316 ರನ್ ಜತೆಯಾಟ ನಿಭಾಯಿಸಿದರು. ಇದು 2ನೇ ವಿಕೆಟಿಗೆ ಆಸ್ಟ್ರೇಲಿಯ ದಾಖಲಿಸಿದ 2ನೇ ಅತೀ ದೊಡ್ಡ ಜತೆಯಾಟ. 1934ರ ಇಂಗ್ಲೆಂಡ್ ಎದುರಿನ ಓವಲ್ ಮುಖಾಮುಖೀಯಲ್ಲಿ ಡಾನ್ ಬ್ರಾಡ್‌ಮನ್-ಬಿಲ್ ಪೋನ್ಸ್‌ಫೋರ್ಡ್ 451 ರನ್ ಪೇರಿಸಿದ್ದು ದಾಖಲೆ.
– ವಾರ್ನರ್-ಲಬುಶೇನ್ ಆಸೀಸ್ ಪರ ಎಲ್ಲ ವಿಕೆಟ್‌ಗಳಿಗೆ ಅನ್ವಯವಾಗುವಂತೆ 8ನೇ ಅತೀ ದೊಡ್ಡ ಜತೆಯಾಟ ನಡೆಸಿದರು. ಹಾಗೆಯೇ ಇದು ಟೆಸ್ಟ್ ಇತಿಹಾಸದಲ್ಲಿ 2ನೇ ವಿಕೆಟಿಗೆ ದಾಖಲಾದ 8ನೇ ಅತೀ ದೊಡ್ಡ ಜತೆಯಾಟವಾಗಿದೆ.
– ಸ್ಟೀವನ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ 7 ಸಾವಿರ ರನ್ ಪೂರೈಸಿದ 50ನೇ ಬ್ಯಾಟ್ಸ್ ಮನ್ ಎನಿಸಿದರು. ಅತೀ ಕಡಿಮೆ 126 ಇನ್ನಿಂಗ್ಸ್‌ಗಳಿಂದ 7 ಸಾವಿರ ರನ್ ಪೂರ್ತಿಗೊಳಿಸಿದ ದಾಖಲೆಯನ್ನೂ ಬರೆದರು. ಇಂಗ್ಲೆಂಡಿನ ವಾಲೀ ಹ್ಯಾಮಂಡ್ 131 ಇನ್ನಿಂಗ್ಸ್ ಗಳಿಂದ 7 ಸಾವಿರ ರನ್ ಗಳಿಸಿದ ದಾಖಲೆ ಪತನಗೊಂಡಿತು. ಆಸ್ಟ್ರೇಲಿಯದ ಹಿಂದಿನ ದಾಖಲೆ ಮ್ಯಾಥ್ಯೂ ಹೇಡನ್ ಹೆಸರಲ್ಲಿತ್ತು (142 ಇನ್ನಿಂಗ್ಸ್).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
Pro Kabaddi League: ಯುಪಿ ಯೋಧಾಸ್,ಪಾಟ್ನಾ ಪೈರೇಟ್ಸ್ ಸೆಮಿಫೈನಲಿಗೆ
IND Vs AUS ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯ ರನ್ ಓಟಕ್ಕೆ ಬುಮ್ರಾ ಬ್ರೇಕ್
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ
Uttarakhand ಹೈಕೋರ್ಟ್ ಸಿ.ಜೆ. ಆಗಿ ನರೇಂದ್ರ ಪ್ರಮಾಣ ವಚನ ಸ್ವೀಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.