ಡೇವಿಡ್ ವಾರ್ನರ್ ವಾಪಸ್: ಬಲಿಷ್ಠ ತಂಡ ಕಟ್ಟುವ ಯೋಜನೆಯಲ್ಲಿ ಆಸ್ಟ್ರೇಲಿಯ
Team Udayavani, Dec 31, 2020, 11:20 AM IST
ಮೆಲ್ಬರ್ನ್: ಅಡಿಲೇಡ್‌ನ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಕಳೆದುಕೊಂಡಿದ್ದ ಗೌರವವನ್ನು ಅಜಿಂಕ್ಯ ರಹಾನೆ ಅವರ ಸ್ಫೂರ್ತಿಯುತ ನಾಯಕತ್ವದಲ್ಲಿ ಭಾರತ ಮರಳಿ ಸಂಪಾದಿಸಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ಇಡೀ ಕ್ರಿಕೆಟ್ ಜಗತ್ತನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದು ಈಗ ಇತಿಹಾಸ.
ಇನ್ನೊಂದೆಡೆ ಆಸ್ಟ್ರೇಲಿಯ ಸೋಲಿನ ಪರಾಮರ್ಶೆಯಲ್ಲಿ ತೊಡಗಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡಿದ್ದೇ ತಂಡದ ಸೋಲಿಗೆ ಪ್ರಮುಖ ಕಾರಣ ಎಂದಿದ್ದಾರೆ ನಾಯಕ ಪೇನ್. ಜತೆಗೆ ನ್ಯೂ ಇಯರ್ ಟೆಸ್ಟ್ ಪಂದ್ಯಕ್ಕೆ ಕಾರ್ಯತಂತ್ರ ರೂಪಿಸುವ ಬಗ್ಗೆ ಆಸ್ಟ್ರೇಲಿಯ ಬಲಿಷ್ಠ ಆಡುವ ಬಳಗವನ್ನು ಕಟ್ಟುವ ಯೋಜನೆಯೊಂದನ್ನು ರೂಪಿಸಿದೆ.
ಮಹತ್ವದ ಬದಲಾವಣೆ
ಸಿಡ್ನಿಯಲ್ಲಿ ಜ. 7ರಿಂದ ಆರಂಭವಾಗಲಿರುವ 3ನೇ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯ ತನ್ನ ಬ್ಯಾಟಿಂಗ್ ಬಲ ಹೆಚ್ಚಿಸಿಕೊಳ್ಳುವ ಸಲುವಾಗಿ ತಂಡದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿಕೊಂಡಿದೆ.
ಮೊದಲ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಘೋರ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಓಪನರ್ ಜೋ ಬರ್ನ್ಸ್ ಅವರನ್ನು ಕೈಬಿಡಲಾಗಿದೆ. ಗಾಯದಿಂದ ಚೇತರಿಸಿರುವ ಸ್ಟಾರ್ ಓಪನರ್ ಡೇವಿಡ್ ವಾರ್ನರ್, ಯುವ ಪ್ರತಿಭೆ ವಿಲ್ ಪುಕೋವ್‌ಸ್ಕಿ ಮತ್ತು ವೇಗಿ ಸೀನ್ ಅಬೋಟ್ ತಂಡಕ್ಕೆ ಮರಳಿದ್ದಾರೆ.
ಇದನ್ನೂ ಓದಿ:ಕ್ವಾರಂಟೈನ್ ಮುಗಿಸಿ ತಂಡವನ್ನು ಕೂಡಿಕೊಂಡ ರೋಹಿತ್ ಶರ್ಮ
“ಆಯ್ಕೆಗಾರರ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುವಲ್ಲಿ ಜೋ ಬರ್ನ್ಸ್ ವಿಫಲರಾಗಿದ್ದಾರೆ. ಅವರ ಮೇಲೆ ನಾವಿಟ್ಟಿದ್ದ ನಂಬಿಕೆ ಹುಸಿಯಾಗಿದೆ. ವಾರ್ನರ್ ಚೇತರಿಕೆಯಲ್ಲಿ ಅದ್ಭುತ ಪ್ರಗತಿ ಕಂಡಿದ್ದಾರೆ. ಹೀಗಾಗಿ ಅವರನ್ನು ಮೂರನೇ ಟೆಸ್ಟ್ ಪಂದ್ಯಕ್ಕಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ’ ಎಂದು ಆಸೀಸ್ ಆಯ್ಕೆ ಸಮಿತಿ ಮುಖ್ಯಸ್ಥ ಟ್ರೆವರ್ ಹಾನ್ಸ್ ಹೇಳಿದ್ದಾರೆ.
ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ನಡೆದ ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ವೇಗಿ ಕಾರ್ತಿಕ್ ತ್ಯಾಗಿ ಎಸೆದ ಬೌನ್ಸರ್ ಪೆಟ್ಟಿನಿಂದಾಗಿ ವಿಲ್ ಪುಕೋವ್‌ಸ್ಕಿ “ಕನ್‌ಕಶನ್’ಗೆ ಒಳಗಾಗಿದ್ದರು. ಹೀಗಾಗಿ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಿರಲಿಲ್ಲ.
ಆಸ್ಟ್ರೇಲಿಯ ತಂಡ
ಟಿಮ್ ಪೇನ್( ನಾಯಕ), ಸೀನ್ ಅಬೋಟ್, ಪ್ಯಾಟ್ ಕಮಿನ್ಸ್, ಕ್ಯಾಮರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಝಲ್‌ವುಡ್, ಟ್ರ್ಯಾವಿಸ್ ಹೆಡ್, ಮೊಸಸ್ ಹೆನ್ರಿಕ್ಸ್, ಮಾರ್ನಸ್ ಲಬುಶೇನ್, ಮ್ಯಾಥ್ಯೂ ವೇಡ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್‌ವುಡ್, ನಥನ್ ಲಿಯಾನ್, ಜೇಮ್ಸ್ ಪ್ಯಾಟಿನ್ಸನ್, ವಿಲ್ ಪುಕೋವ್‌ಸ್ಕಿ , ಡೇವಿಡ್ ವಾರ್ನರ್, ಮಿಚೆಲ್ ಸ್ವೆಪ್ಸನ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.