ಡೇವಿಡ್ ವಾರ್ನರ್ ‘ಚೀಟರ್’!
Team Udayavani, May 11, 2019, 6:00 AM IST
ಲಂಡನ್: ಕ್ರಿಕೆಟಿನ ಬದ್ಧ ಎದುರಾಳಿಗಳು ಯಾರು? ಭಾರತ-ಪಾಕಿಸ್ಥಾನ ಎಂಬುದು ಸಿದ್ಧ ಉತ್ತರ. ಆದರೆ ಇದು ತಪ್ಪು ಎಂದು ಇತಿಹಾಸ ಸಾರುತ್ತದೆ. ಜಾಗತಿಕ ಕ್ರಿಕೆಟಿನ ಅತ್ಯಂತ ಪುರಾತನ ರಾಷ್ಟ್ರಗಳಾದ ಇಂಗ್ಲೆಂಡ್-ಆಸ್ಟ್ರೇಲಿಯಗಳೇ ಬದ್ಧ ಎದುರಾಳಿಗಳಾಗಿವೆ ಎಂಬುದನ್ನು ಇದು ಸಾರುತ್ತ ಬಂದಿದೆ. ಇದರ ತೀವ್ರತೆಯನ್ನು ಅರಿಯಬೇಕಾದರೆ ಪ್ರತಿಷ್ಠಿತ ‘ಆ್ಯಶಸ್’ ಸರಣಿಯನ್ನು ಗಮನಿಸಬೇಕು.
ಇದೀಗ ವಿಶ್ವಕಪ್ ಸರದಿ. ಆಸ್ಟ್ರೇಲಿಯ ತಂಡ ಇನ್ನೂ ಇಂಗ್ಲೆಂಡಿಗೆ ಕಾಲಿಟ್ಟಿಲ್ಲ, ಅಷ್ಟರಲ್ಲಿ ಇಂಗ್ಲೆಂಡ್ ಅಭಿಮಾನಿಗಳ ಸಂಘಟನೆಯಾದ ‘ಬಾರ್ಮಿ ಆರ್ಮಿ’ ಕಾಂಗರೂಗಳನ್ನು ಟ್ರೋಲ್ ಮಾಡಲಾರಂಭಿಸಿದೆ. ಇದಕ್ಕೆ ಮೊದಲು ‘ಬಲಿ’ಯಾದವರು ಆರಂಭಕಾರ ಡೇವಿಡ್ ವಾರ್ನರ್.
ಬೌಲರ್ ಕೈಯಲ್ಲಿ ಸ್ಯಾಂಡ್ ಪೇಪರ್!
ಬಾರ್ಮಿ ಆರ್ಮಿ ತನ್ನ ಅಧಿಕೃತ ಟ್ವಿಟರ್‌ನಲ್ಲಿ ವಾರ್ನರ್ ಅವರ ಜೆರ್ಸಿಯ ಮೇಲೆ ‘ಆಸ್ಟ್ರೇಲಿಯ’ ಶಬ್ದವನ್ನು ತೆಗೆದು ಅದರ ಮೇಲೆ ‘ಚೀಟ್ಸ್’ (ಮೋಸ) ಎಂದು ಬರೆದ ಚಿತ್ರವೊಂದನ್ನು ಪೋಸ್ಟ್ ಮಾಡಿದೆ. ಜತೆಗೆ ಮಿಚೆಲ್ ಸ್ಟಾರ್ಕ್, ನಥನ್ ಲಿಯೋನ್ ಕೂಡ ‘ಬಾರ್ಮಿ ಆರ್ಮಿ’ಯ ಫೋಟೋ ಶಾಪ್ ತಂತ್ರಕ್ಕೆ ವಸ್ತುವಾಗಿದ್ದಾರೆ. ಇವರಿಬ್ಬರ ಕೈಯಲ್ಲೂ ಸ್ಯಾಂಡ್ ಪೇಪರ್ ನೀಡಿ ನಿಲ್ಲಿಸಲಾಗಿದೆ!
ಇದರ ಕಾರಣವನ್ನು ಎಲ್ಲರೂ ಅರಿಯಬಹುದಾಗಿದೆ. ದಕ್ಷಿಣ ಆಫ್ರಿಕಾ ಎದುರಿನ ಕೇಪ್‌ಟೌನ್ ಟೆಸ್ಟ್ ಪಂದ್ಯದ ವೇಳೆ ವಾರ್ನರ್, ಸ್ಮಿತ್ ಮತ್ತು ಬಾನ್‌ಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸಿ ಒಂದು ವರ್ಷದ ನಿಷೇಧಕ್ಕೊಳಗಾಗಿದ್ದರು. ಇದಕ್ಕಾಗಿ ಇಲ್ಲಿ ವಾರ್ನರ್ ಟ್ರೋಲ್ ಆಗಿದ್ದಾರೆ. ಹಾಗೆಯೇ ವಿಶ್ವಕಪ್ ಪಂದ್ಯಾವಳಿ ವೇಳೆ ಸ್ಟಾರ್ಕ್, ಲಿಯೋನ್ ಕೂಡ ಸ್ಯಾಂಡ್ ಪೇಪರ್ ಮೂಲಕ ಚೆಂಡನ್ನು ವಿರೂಪಗೊಳಿಸಬಹುದು ಎಂದು ಬಾರ್ಮಿ ಆರ್ಮಿ ವಿಡಂಬನಾತ್ಮಕವಾಗಿ ಎಚ್ಚರಿಸಿದೆ!
ಇದಕ್ಕೆಲ್ಲ ಸಜ್ಜಾಗಿಯೇ ಬರಲಿದ್ದೇವೆ!
ಇದಕ್ಕೆ ಪ್ರತಿಕ್ರಿಯಿಸಿದ ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್, ‘ಇದ ಕ್ಕೆಲ್ಲ ನಾವು ಸಿದ್ಧರಾಗಿದ್ದೇವೆ. ಇಂಗ್ಲೆಂಡ್‌ನಲ್ಲಿ ವಿಮಾನ ಇಳಿದೊಡನೆ ನಮಗೆ ಇಂಥ ಸ್ವಾಗತ ಕಾದಿರುತ್ತದೆಂಬುದು ಗೊತ್ತು. ನಾವು ಇದನ್ನು ಎದುರಿಸಲು ಸನ್ನದ್ಧರಾಗಿರುತ್ತೇವೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.