David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ
Team Udayavani, Jun 16, 2024, 9:02 AM IST
ಆ್ಯಂಟಿಗಾ: ಈ ಹಿಂದಿನ ದಕ್ಷಿಣ ಆಫ್ರಿಕಾ ಕ್ರಿಕೆಟರ್, ಸದ್ಯ ನಮೀಬಿಯಾ ತಂಡದ ಪರ ಆಡುತ್ತಿದ್ದ ಆಲ್ ರೌಂಡರ್ ಡೇವಿಡ್ ವೀಸ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ನ ಗುಂಪು ಹಂತದ ಇಂಗ್ಲೆಂಡ್ ವಿರುದ್ದದ ಪಂದ್ಯದ ಬಳಿಕ ವೀಸೆ ತಮ್ಮ ನಿರ್ಧಾರ ಪ್ರಕಟಿಸಿದರು.
ದಕ್ಷಿಣ ಆಫ್ರಿಕಾದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆರಂಭಿಸಿದ್ದ ವೀಸ, ಬಳಿಕ 2021ರಲ್ಲಿ ನಮೀಬಿಯಾ ತಂಡ ಸೇರಿದ್ದರು. ಟಿ20 ವಿಶ್ವಕಪ್ ಗಳಲ್ಲಿ ವೀಸ ನಮೀಬಿಯಾ ಪರ ಉತ್ತಮ ಪ್ರದರ್ಶನ ತೋರಿದ್ದಾರೆ. 2024 ರ ಟಿ20 ವಿಶ್ವಕಪ್ ಅಭಿಯಾನದಲ್ಲಿ ವೀಸ ಅವರು ಒಮಾನ್ ವಿರುದ್ಧದ ಪಂದ್ಯವನ್ನು ಬ್ಯಾಟಿಂಗ್ ಮತ್ತು ಸೂಪರ್ ಓವರ್‌ನಲ್ಲಿ ಬೌಲಿಂಗ್ ಮಾಡುವ ಮೂಲಕ ಗೆದ್ದು ನಮೀಬಿಯಾ ಪರ ಹೀರೋ ಆಗಿದ್ದರು.
ಆ್ಯಂಟಿಗುವಾದಲ್ಲಿ ನಡೆದ ಇಂಗ್ಲೆಂಡ್ ಪಂದ್ಯದಲ್ಲಿ ಔಟಾಗಿ ಮರಳುತ್ತಿದ್ದ ಆಲ್‌ರೌಂಡರ್‌ಗೆ ನಮೀಬಿಯಾ ಮತ್ತು ಇಂಗ್ಲೆಂಡ್ ಆಟಗಾರರು ವಂದನೆ ಸಲ್ಲಿಸಿದರು.
Congratulations on your retirement @David_Wiese 🫡🫡🫡
You are truly a champion ♥️♥️♥️#T20IWorldCup2024 #NAMvsENG #ENGvsNAM #CricketinUSA pic.twitter.com/Gh2lSZDmFy
— Sai (@sai_whispers) June 15, 2024
ಇಂಗ್ಲೆಂಡ್ ವಿರುದ್ದ ಪಂದ್ಯದಲ್ಲಿ ಬ್ಯಾಟ್ ಬೀಸಿದ ವೀಸ 12 ಎಸೆತಗಳಲ್ಲಿ 27 ರನ್ ಗಳಿಸಿದರು.
15 ಏಕದಿನ ಪಂದ್ಯಗಳನ್ನು ಆಡಿರುವ ವೀಸ 330 ರನ್ ಗಳಿಸಿದ್ದು, 15 ವಿಕೆಟ್ ಪಡೆದಿದ್ದಾರೆ. 54 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 624 ರನ್ ಗಳಿಸಿದ್ದು, 59 ವಿಕೆಟ್ ಕಿತ್ತಿದ್ದಾರೆ. ನಮೀಬಿಯಾ ಪರ 34 ಟಿ20 ಪಂದ್ಯಗಳನ್ನು ಆಡಿರುವ ವೀಸ 500 ರನ್ ಗಳಿಸಿದ್ದು, 35 ವಿಕೆಟ್ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.