ಡೇವಿಸ್: ಆಸ್ಟ್ರೇಲಿಯ 2-1 ಮುನ್ನಡೆ
Team Udayavani, Sep 18, 2017, 6:20 AM IST
ಬ್ರುಸೆಲ್ಸ್: ಬೆಲ್ಜಿಯಂ ವಿರುದ್ಧ ನಡೆಯುತ್ತಿರುವ ಡೇವಿಸ್ ಕಪ್ ಸೆಮಿಫೈನಲ್ ಹೋರಾಟದಲ್ಲಿ 2-1 ಮುನ್ನಡೆ ಸಾಧಿಸಿರುವ ಆಸ್ಟ್ರೇಲಿಯ ತಂಡವು 14 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಫೈನಲಿಗೇರುವ ನಿರೀಕ್ಷೆಯಲ್ಲಿದೆ.
28 ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ತಂಡವು ಫೈನಲ್‌ನಲ್ಲಿ 9 ಬಾರಿಯ ವಿಜೇತ ಫ್ರಾನ್ಸ್ ತಂಡವನ್ನು ಎದುರಿಸುವ ಸಾಧ್ಯತೆಯಿದೆ. ಫ್ರಾನ್ಸ್ ಇನ್ನೊಂದು ಸೆಮಿಫೈನಲ್ ಹೋರಾಟದಲ್ಲಿ ಸರ್ಬಿಯಾ ವಿರುದ್ಧ 2-1 ಮುನ್ನಡೆ ಸಾಧಿಸಿದೆ. ನಿಕೋಲಾಸ್ ಮಾಹುಟ್ ಮತ್ತು ಫೀರ್ರ ಹ್ಯೂಗ್ಸ್ ಹೆರ್ಬರ್ಟ್ ಅವರು ಸರ್ಬಿಯಾದ ನೆನಾದ್ ಜಿಮೊಂಜಿಕ್ ಮತ್ತು ಫಿಲಿಪ್ ಕ್ರ್ಯಾಜಿನೋವಿಕ್ ಅವರನ್ನು 6-1, 6-2, 7-6 (7-3) ನೇರ ಸೆಟ್‌ಗಳಿಂದ ಸೋಲಿಸಿದ್ದರಿಂದ ಫ್ರಾನ್ಸ್ 2-1 ಮುನ್ನಡೆ ಸಾಧಿಸುವಂತಾಯಿತು.
ಆಸ್ಟ್ರೇಲಿಯದ ಜೋರ್ಡಾನ್ ಥಾಮ್ಸನ್ ಮತ್ತು ಜಾನ್ ಪೀರ್ ಅವರು ಆರ್ಥರ್ ಡಿ ಗ್ರೀಫ್ ಮತ್ತು ರುಬೆನ್ ಬೆಮೆಲ್‌ಮಾÂನ್ಸ್ ಅವರನ್ನು 6-3, 6-4, 6-0 ನೇರ ಸೆಟ್‌ಗಳಿಂದ ಸೋಲಿಸಿದ್ದರಿಂದ ಆಸ್ಟ್ರೇಲಿಯ 2-1 ಮುನ್ನಡೆ ಸಾಧಿಸಿತಲ್ಲದೇ ಫೈನಲಿಗೇರುವ ಆಸೆಯನ್ನು ಜೀವಂತವಿರಿಸಿಕೊಂಡಿತು. ಆಸ್ಟ್ರೇಲಿಯ ಈ ಹಿಂದೆ 2003ರಲ್ಲಿ ಡೇವಿಸ್ ಕಪ್ ಜಯಿಸಿತ್ತು. ಲೇಟನ್ ಹೆವಿಟ್ ನೇತೃತ್ವದ ಆಸ್ಟ್ರೇಲಿಯ ತಂಡವು ಫೈನಲ್‌ನಲ್ಲಿ ಸ್ಪೇನ್ ತಂಡವನ್ನು ಸೋಲಿಸಿತ್ತು.
ಮೊದಲ ಮರು ಸಿಂಗಲ್ಸ್‌ನಲ್ಲಿ ನಿಕ್ ಕಿರ್ಗಿಯೋಸ್ ಅವರು ಡೇವಿಡ್ ಗೊಫಿನ್ ವಿರುದ್ಧ ಗೆದ್ದರೆ ಆಸ್ಟ್ರೇಲಿಯ ಫೈನಲಿಗೇರಲಿದೆ.
ಕಿರ್ಗಿಯೋಸ್ ಶುಕ್ರವಾರ ನಡೆದ ಮೊದಲ ಸಿಂಗಲ್ಸ್‌ನಲ್ಲಿ ಸ್ಟೀವ್ ಡಾರ್ಸಿಸ್ ಅವರನ್ನು 6-3, 3-6, 6-7 (5-7), 6-1, 6-2 ಸೆಟ್‌ಗಳಿಂದ ಸೋಲಿಸಿ ಆಸ್ಟ್ರೇಲಿಯಕ್ಕೆ 1-0 ಮುನ್ನಡೆ ಒದಗಿಸಿದ್ದರು. ಆದರೆ ಎರಡನೇ ಸಿಂಗಲ್ಸ್‌ನಲ್ಲಿ ಗೊಫಿನ್ ಅವರು ಜಾನ್ ಮಿಲ್ಮನ್ ಅವರನ್ನು 6-7 (4-7), 6-4, 6-3, 7-5 ಸೆಟ್‌ಗಳಿಂದ ಸೋಲಿಸಿದ್ದರಿಂದ ಹೋರಾಟ 1-1 ಸಮಬಲಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
MUST WATCH
ಹೊಸ ಸೇರ್ಪಡೆ
Kasaragod: ಯುವತಿ ನಾಪತ್ತೆ; ದೂರು ದಾಖಲು
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
Mangaluru: ಜ.11, 12ರಂದು ಮಂಗಳೂರು ಲಿಟ್ ಫೆಸ್ಟ್… ಕಲೆ, ಸಾಹಿತ್ಯ, ಜಾನಪದಗಳ ಸಂಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.