ಡೇವಿಸ್: ತಂಡಕ್ಕೆ ಮರಳಿದ ಭಾಂಬ್ರಿ, ಮೈನೇನಿ; ಪೇಸ್ ಔಟ್
Team Udayavani, Aug 15, 2017, 2:29 PM IST
ಹೊಸದಿಲ್ಲಿ: ಅಗ್ರ ಕ್ರಮಾಂಕದ ಸಿಂಗಲ್ಸ್ ಆಟಗಾರ ಯೂಕಿ ಭಾಂಬ್ರಿ ಮತ್ತು ಸಾಕೇತ್ ಮೈನೇನಿ ಅವರು ಭಾರತೀಯ ಡೇವಿಸ್ ಕಪ್ ತಂಡಕ್ಕೆ ಮರಳಿದ್ದಾರೆ. ಇದೇ ವೇಳೆ ನಿರೀಕ್ಷೆಯಂತೆ ಖ್ಯಾತ ಆಟಗಾರ ಲಿಯಾಂಡರ್ ಪೇಸ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಮುಂದಿನ ತಿಂಗಳು ಕೆನಡ ವಿರುದ್ಧ ನಡೆಯಲಿರುವ ಡೇವಿಸ್ ಕಪ್ ಹೋರಾಟಕ್ಕಾಗಿ ತಂಡವನ್ನು ಆಯ್ಕೆ ಮಾಡಲಾಗಿದ್ದು ಭಾಂಬ್ರಿ, ಮೈನೇನಿ ಅವರಲ್ಲದೇ ರಾಮ್‌ಕುಮಾರ್ ರಾಮನಾಥನ್ ಮತ್ತು ರೋಹನ್ ಬೋಪಣ್ಣ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ತಂಡವನ್ನು ಮಹೇಶ್ ಭೂಪತಿ ಮುನ್ನಡೆಸಲಿದ್ದಾರೆ. ಪ್ರಜ್ಞೆàಶ್ ಗುಣೇಶ್ವರನ್ ಮತ್ತು ಎನ್. ಶ್ರೀರಾಮ್ ಬಾಲಾಜಿ ಅವರು ಮೀಸಲು ಆಟಗಾರರಾಗಿರುತ್ತಾರೆ.
44ರ ಹರೆಯದ ಪೇಸ್ ಕಳೆದ ಎಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಉಜ್ಬೆಕಿಸ್ಥಾನ ವಿರುದ್ಧದ ಡೇವಿಸ್ ಕಪ್ ಹೋರಾಟದ ವೇಳೆ ಆರು ಸದಸ್ಯರ ತಂಡಕ್ಕೆ ಸೇರ್ಪಡೆಯಾಗಿದ್ದರು. ಆದರೆ ಅಂತಿಮ ನಾಲ್ಕರ ತಂಡದಲ್ಲಿ ಹೊಸ ನಾಯಕ ಭೂಪತಿ ಅವರು ಪೇಸ್ ಅವರನ್ನು ಕೈಬಿಟ್ಟಿದ್ದರು. ಇದರಿಂದ ಆಘಾತ ಮತ್ತು ಮುಜುಗರಕ್ಕೆ ಒಳಗಾದ ಪೇಸ್ ಹೋರಾಟದ ನಡುವೆಯೆ ಸ್ಪರ್ಧೆಯ ತಾಣದಿಂದ ಹೊರನಡೆದಿದ್ದರು.
ಗಾಯದ ಸಮಸ್ಯೆಯಿಂದಾಗಿ ಭಾಂಬ್ರಿ ಮತ್ತು ಮೈನೇನಿ ಉಜ್ಬೆಕಿಸ್ಥಾನ ವಿರುದ್ಧದ ಹೋರಾಟದಲ್ಲಿ ಆಡಿರಲಿಲ್ಲ. ಇದೀಗ ಎಟಿಪಿ ಟೂರ್‌ನಲ್ಲಿ ಆಡುತ್ತಿರುವ ಅವರಿಬ್ಬರು ಸೆ. 15ರಿಂದ 17ರ ವರೆಗೆ ಎಡ್ಮಂಟನ್‌ನಲ್ಲಿ ನಡೆಯುವ ಕೆನಡ ವಿರುದ್ಧದ ಡೇವಿಸ್ ಕಪ್ ಹೋರಾಟದಲ್ಲಿ ಆಡಲಿದ್ದಾರೆ. ಭಾಂಬ್ರಿ ಇತ್ತೀಚೆಗೆ ವಿಶ್ವದ 22ನೇ ರ್‍ಯಾಂಕಿನ ಗಾಲ್ ಮೊನ್‌ಫಿಲ್ಸ್ ಅವರನ್ನು ಸೋಲಿಸಿದ್ದರು.
ತಂಡದಲ್ಲಿರುವ ರಾಮ್‌ಕುಮಾರ್ ರಾವåನಾಥನ್ ಕೂಡ ಇತ್ತೀಚೆಗೆ ವಿಶ್ವದ 8ನೇ ರ್‍ಯಾಂಕಿನ ಡೊಮಿನಿಕ್ ಥೀಮ್ ಅವರನ್ನು ಸೋಲಿಸಿ ಸುದ್ದಿ ಮಾಡಿದ್ದರು. ಉನ್ನತ ರ್‍ಯಾಂಕಿನ ಡಬಲ್ಸ್ ಆಟಗಾರರಾಗಿರುವ ಬೋಪಣ್ಣ ಅವರು ನೇರವಾಗಿ ತಂಡಕ್ಕೆ ಆಯ್ಕೆಯಾದರು. ಆದರೆ ಡೇವಿಸ್ ಕಪ್‌ನ ಡಬಲ್ಸ್‌ನಲ್ಲಿ ಗರಿಷ್ಠ ಗೆಲುವಿನ ವಿಶ್ವದಾಖಲೆಗೈಯಲು ಪೇಸ್ ಅವರಿಗೆ ಇನ್ನೊಂದು ಗೆಲುವಿನ ಆವಶ್ಯಕತೆ ಇತ್ತು. ಆದರೆ ಇದೀಗ ತಂಡದಿಂದ ಕೈಬಿಟ್ಟ ಕಾರಣ ಇದು ಸಾಧ್ಯವಾಗುತ್ತಿಲ್ಲ. ಅವರೀಗ ಇಟಲಿಯ ನಿಕೋಲ ಪೀತ್ರಾಂಗೆಲಿ ಜತೆ 42 ಗೆಲುವಿನ ದಾಖಲೆ ಹೊಂದಿದ್ದಾರೆ.
ಕೆನಡ ವಿರುದ್ಧದ ಹೋರಾಟಕ್ಕೆ ಡೇವಿಸ್ ಕಪ್ ತಂಡ: ಯೂಕಿ ಭಾಂಬ್ರಿ, ರಾಮ್‌ಕುಮಾರ್ ರಾಮನಾಥನ್, ಸಾಕೇತ್ ಮೈನೇನಿ, ರೋಹನ್ ಬೋಪಣ್ಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.